ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸ ತಿಳಿಸುವ ದಿನದರ್ಶಿಕೆ

Last Updated 6 ಜನವರಿ 2013, 19:59 IST
ಅಕ್ಷರ ಗಾತ್ರ

ಕ್ಯಾಲೆಂಡರ್‌ನಲ್ಲಿ ಕೇವಲ ದಿನಾಂಕ ನೋಡುವುದು ಮಾತ್ರವಲ್ಲ. ಅದರಿಂದ ಮಕ್ಕಳಿಗೆ ನಮ್ಮ ಸಂಸ್ಕೃತಿಯ, ನಮ್ಮ ದೇಶವನ್ನು ಆಳಿದ ರಾಜವಂಶಗಳ ಪರಿಚಯವಾಗಬೇಕು ಎಂಬ ಉದ್ದೇಶದಿಂದ ನರಸಿಂಹ ಶೆಟ್ಟಿ ನೇತೃತ್ವದ ನಾಗನಾಥಪುರ ಮೈಕೊ ಕನ್ನಡ ಬಳಗ ವಿಭಿನ್ನ ರೀತಿಯ ಕ್ಯಾಲೆಂಡರ್ ತಯಾರಿಸಿದ್ದಾರೆ.

ಈ ಕ್ಯಾಲೆಂಡರ್‌ನಲ್ಲಿ ಒಂದು ರಾಜವಂಶ, ಅವರ ರಾಜಲಾಂಛನ, ರಾಜಧಾನಿ, ಪ್ರಸಿದ್ಧ ದೊರೆ, ಪ್ರಮುಖ ವಾಸ್ತುಗಳು, ಸಾಹಿತ್ಯ ಕೃತಿ, ಯಾವ ಲಿಪಿ ಚಾಲ್ತಿಯಲ್ಲಿದೆ, ಚಲಾವಣೆಯಲ್ಲಿರುವ ನಾಣ್ಯ ಯಾವುದು ಎಂಬುದರ ಬಗ್ಗೆ ಸಂಕ್ಷಿಪ್ತವಾದ ಮಾಹಿತಿ ಇದೆ.

ಇತಿಹಾಸದ ಬಗ್ಗೆ ಆಸಕ್ತಿ ಇರುವವರಿಗೆ ಈ ಕ್ಯಾಲೆಂಡರ್ ತುಂಬಾ ಉಪಯುಕ್ತ. ಕಳೆದ ಬಾರಿಯೂ ಇತಿಹಾಸಕ್ಕೆ ಸಂಬಂಧಪಟ್ಟ ಮಾಹಿತಿಗಳನ್ನು ನೀಡಿದ್ದರು. ಈ ಬಾರಿ ಅದರ ಮುಂದುವರಿದ ಭಾಗವನ್ನು ತಿಳಿಸಿದ್ದಾರೆ. ವಿಜಯನಗರ ಸಾಮ್ರಾಜ್ಯ, ಬಹಮನಿ ಸುಲ್ತಾನರು, ಬಿಜಾಪುರದ ಸುಲ್ತಾನರು, ಮೈಸೂರು ಒಡೆಯರು, ಹೈದರಾಲಿ ಮತ್ತು ಟಿಪ್ಪು ಇವರ ಕಾಲದ ಮಾಹಿತಿ ಈ ಕ್ಯಾಲೆಂಡರ್‌ನಲ್ಲಿ ಲಭ್ಯ.

ಇತಿಹಾಸದಲ್ಲಿ ಪ್ರಾಚೀನ ಬದುಕು, ಸಂಸ್ಕೃತಿ ಹಾಗೂ ಪರಂಪರೆ ಇದೆ. ಇಂದಿನ ಮಕ್ಕಳು ಇದನ್ನೆಲ್ಲಾ ತಿಳಿದುಕೊಳ್ಳಬೇಕು ಎಂಬ ಉದ್ದೇಶದಿಂದ ಈ ಕ್ಯಾಲೆಂಡರ್ ರಚಿಸಲಾಗಿದೆ. ಮಾಹಿತಿಗೆ: 94489 88339
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT