ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದೆಂಥ ಗೌಪ್ಯ ಮತದಾನ?

Last Updated 18 ಜನವರಿ 2012, 19:30 IST
ಅಕ್ಷರ ಗಾತ್ರ

ಚುನಾವಣೆ ಸಂದರ್ಭದಲ್ಲಿ ಪ್ರಮುಖ ಅಭ್ಯರ್ಥಿಗಳು, ಹಾಲಿ, ಮಾಜಿ ಸಚಿವರು, ಇತರ ಗಣ್ಯರು ಪತ್ನಿ ಸಮೇತರಾಗಿ ಮತದಾನ ಮಾಡುವ ವರದಿಗಳು ಆಗಾಗ ಪ್ರಕಟವಾಗುತ್ತವೆ.
 
ಕಳೆದ ಜಿಲ್ಲಾ, ತಾಲ್ಲೂಕು ಪಂಚಾಯ್ತಿ ಚುನಾವಣೆಗಳ ಸಮಯದಲ್ಲಿ ಅನೇಕ ಗಣ್ಯರು ದಂಪತಿ ಸಮೇತರಾಗಿ ಮತದಾನ ಮಾಡುತ್ತಿದ್ದನ್ನು ವಿವಿಧ ಮಾಧ್ಯಮಗಳಲ್ಲಿ ಪ್ರಕಟ/ಪ್ರಸಾರವಾದ ವರದಿಗಳನ್ನು ಉಲ್ಲೇಖಿಸಿ, ಇದು ಗೌಪ್ಯ ಮತದಾನದ ನಿಯಮ   ಉಲ್ಲಂಘಿಸಿದಂತೆ ಆಗುವುದರಿಂದ ಅದಕ್ಕೆ ಅವಕಾಶ ಇದೆಯೇ ಎಂಬ ಪ್ರಶ್ನೆ ಎತ್ತಿ ನಾನು ರಾಜ್ಯ ಚುನಾವಣಾಧಿಕಾರಿಗಳಿಗೆ ಮಾಹಿತಿ ಹಕ್ಕಿನ ಕಾಯಿದೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದೆ.

ನನ್ನ ಪ್ರಶ್ನೆಗೆ ಉತ್ತರವಾಗಿ ಚುನಾವಣಾಧಿಕಾರಿಯವರು ಅಂತಹ ಯಾವುದೇ ಮಾಹಿತಿ (ದೂರು) ಬಂದಿಲ್ಲ. ಒಟ್ಟಾಗಿ ಮತದಾನ ಮಾಡಲು ಅನುಮತಿ ನೀಡಿಲ್ಲ ಎಂಬ ಉತ್ತರ ನೀಡಿದ್ದರು. ಅಲ್ಲದೆ ಅಂತಹ ದಾಖಲೆಗಳು ಇದ್ದರೆ ಕೊಡುವಂತೆ ನನ್ನನ್ನೇ ಕೇಳಿದ್ದರು.

ನಾನು ಪುನಃ ಅವರಿಗೆ ಪತ್ರ ಬರೆದು ದೃಶ್ಯ ಮಾಧ್ಯಮದ ಹೆಸರು ನೀಡಿ ಅದನ್ನು ತರಿಸಿಕೊಳ್ಳುವಂತೆ ತಿಳಿಸಿದ್ದೆ. ಅದಕ್ಕೆ ಅವರಿಂದ ಉತ್ತರ ಬರಲಿಲ್ಲ.

ಈಗ ಕಡೂರು ತಾಲ್ಲೂಕಿನ ಸರಸ್ವತಿಪುರದ ಜಿಲ್ಲಾ ಪಂಚಾಯ್ತಿ ಉಪಚುನಾವಣೆಯಲ್ಲಿ ಇಬ್ಬರು ಅಭ್ಯರ್ಥಿಗಳು ದಂಪತಿ ಸಮೇತ ಮತದಾನ ಮಾಡುತ್ತಿರುವ ವರದಿ (ಚಿತ್ರ ಸಹಿತ -ಜ. 11) ಕೆಲ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಇದು ಮತದಾನದ ಗೌಪ್ಯತೆಯ ಸ್ಪಷ್ಟ ಉಲ್ಲಂಘನೆ.

ಇದಕ್ಕೆ ಚುನಾವಣಾಧಿಕಾರಿಗಳು ಏನು ಹೇಳುತ್ತಾರೆ?  ಮತ ಪತ್ರವನ್ನು ತೋರಿಸಿದರೆಂಬ ಕಾರಣಕ್ಕಾಗಿ ಇತ್ತೀಚಿನ ವಿಧಾನ ಪರಿಷತ್ ಚುನಾವಣೆಯಲ್ಲಿ ಶಾಸಕರೊಬ್ಬರ ಮತ ತಿರಸ್ಕರಿಸಲಾಯಿತು. ಇಬ್ಬರು ಒಟ್ಟಾಗಿ ಮತದಾನ ಮಾಡಲು ಅವಕಾಶವಿದೆಯೇ? ಸಂಬಂಧಿಸಿದವರು ಇದಕ್ಕೆ ಉತ್ತರಿಸುವರೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT