ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲೊಂದು ಕಂಪ್ಯೂಟರ್ ಶಾಲೆ

Last Updated 20 ಅಕ್ಟೋಬರ್ 2011, 9:15 IST
ಅಕ್ಷರ ಗಾತ್ರ

ಮರಳೂರು: ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಕಂಪ್ಯೂಟರ್ ಹಾಗೂ ತಂತ್ರಜ್ಞಾನದಲ್ಲಿ ಹಿಂದುಳಿದಿರುತ್ತಾರೆ ಎಂಬ ಮಾತಿದೆ.  ಆದರೆ ಗೌರಿಬಿದನೂರು ತಾಲ್ಲೂಕು ಮರಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಇಲ್ಲಿ ಮಾದರಿಯಾಗಿದೆ.

ತಾಲ್ಲೂಕಿನಲ್ಲಿ  ಕಂಪ್ಯೂಟರ್ ಮತ್ತು ತಂತ್ರಜ್ಞಾನದ ಸೌಲಭ್ಯ ಹೊಂದಿರುವ ಶಾಲೆಗಳಲ್ಲಿ ಇದು ಕೂಡಾ ಒಂದಾಗಿದೆ. ಇದರ ಜತೆಯಲ್ಲಿ

ಈ ಶಾಲೆಯಲ್ಲಿ ಓದುತ್ತಿರುವ ಬಹುತೇಕ ವಿದ್ಯಾರ್ಥಿಗಳಿಗೆ ಕಂಪ್ಯೂಟರ್‌ನ ಅರಿವಿದೆ.  ಕಂಪ್ಯೂಟರ್ ಕಲಿಕೆ ಇಲ್ಲಿ ನಿರಂತರವಾಗಿ ನಡೆಯುತ್ತಿದೆ. ಶಾಲೆಯ ಶಿಕ್ಷಕರ ಮಾಹಿತಿ ಮತ್ತು ಮಾರ್ಗದರ್ಶನದಲ್ಲಿ ಕಂಪ್ಯೂಟರ್‌ಗಳನ್ನು ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆ ಮೂಲಕ ಚಿತ್ರಗಳನ್ನು ರಚಿಸುತ್ತ, ಆಟಗಳನ್ನಾಡುತ್ತಾ  ಸೃಜನಶೀಲತೆಯಿಂದಲೇ ಜ್ಞಾನ ವೃದ್ಧಿಸಿಕೊಳ್ಳುತ್ತಿದ್ದಾರೆ.

`ಸರ್ಕಾರಿ ಶಾಲೆಗೆ ಕಂಪ್ಯೂಟರ್‌ಗಳನ್ನು ನೀಡಲಾಗಿದೆ. ಆದರೆ ಅವುಗಳ ಬಳಕೆ ಬಗ್ಗೆ ತರಬೇತಿ ನೀಡಲು ಶಿಕ್ಷಕರಿಲ್ಲ. ಕಂಪ್ಯೂಟರ್ ತರಬೇತಿ ನೀಡಲೆಂದೇ ಖಾಸಗಿಯಾಗಿ ಶಿಕ್ಷಕರೊಬ್ಬರನ್ನು ನೇಮಿಸಿಕೊಂಡಿದ್ದೇವೆ. 1 ರಿಂದ 7ನೇ ತರಗತಿವರೆಗೆ   ಪ್ರತಿ ದಿನ ಒಂದೊಂದು ಗಂಟೆ ತರಬೇತಿ ಸೀಗುತ್ತದೆ. ಎರಡು ವರ್ಷದಿಂದ ಆರಂಭವಾಗಿರುವ ತರಬೇತಿಯಲ್ಲಿ ಸಿಡಿ ಮೂಲಕ ವಿದ್ಯಾರ್ಥಿಗಳಿಗೆ ಹೊಸ ಪಠ್ಯ ಬೋಧಿಸಲಾಗುತ್ತದೆ~ ಎಂದು ಶಾಲೆಯ ಮುಖ್ಯಶಿಕ್ಷಕ ನಾಗರಾಜ್ ಸಂತೋಷದಿಂದ ಹಂಚಿಕೊಳ್ಳುತ್ತಾರೆ.

`ಶಾಲೆಯ ನಾಲ್ಕು ಗೋಡೆಗಳಲ್ಲಿ ನೀಡಲಾಗುವ ಶಿಕ್ಷಣದ ಜೊತೆಗೆ ಕಂಪ್ಯೂಟರ್ ಶಿಕ್ಷಣ ಅತ್ಯಗತ್ಯವಾಗಿದೆ. ಪ್ರಾಥಮಿಕ ಹಂತದಲ್ಲೇ ಅರಿವಿದ್ದರೆ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಹಲವು ಅನುಕೂಲಗಳಿವೆ. ಸರ್ಕಾರವು ಕಂಪ್ಯೂಟರ್ ಜೊತೆಗೆ ಇತರ ಸೌಲಭ್ಯಗಳನ್ನು ಒದಗಿಸಬೇಕು ಎನ್ನುವುದು ಪೋಷಕರ ಅನಿಸಿಕೆ.

ಶಾಲೆಯು ಸುಸಜ್ಜಿತ ಕೊಠಡಿಗಳನ್ನು ಹೊಂದಿದ್ದು, ಬಾಲಕಿಯರಿಗೆ ಮತ್ತು ಬಾಲಕರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಲಾಗಿದೆ.

ಅಡುಗೆ ಕೋಣೆ, ರಂಗಮಂದಿರ, ವಾಲಿಬಾಲ್ ಕ್ರೀಡಾಂಗಣ ವ್ಯವಸ್ಥೆ ಇದೆ. ಶಾಲೆಯ ಹಿಂಬದಿಯಲ್ಲಿ ವಿದ್ಯಾರ್ಥಿಗಳು ಬೆಳೆಸಿದ ಗಿಡಮರಗಳ ಕೈದೋಟವಿದೆ. ಈ ಶಾಲೆ ಮತ್ತು ಮಕ್ಕಳ ಸರ್ವಾಂಗೀಣ ಪ್ರಗತಿಗೆ ಶಿಕ್ಷಕರ ಜತೆಗೆ ಪೋಷಕರು ಕೈಜೋಡಿಸಿದ್ದಾರೆ.
-ಟಿ.ನಂಜುಂಡಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT