ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಮಿಗಳ ಸ್ವಾಗತಕ್ಕೆ ಕೈಗಾರಿಕಾ ಭೂಮಿ

Last Updated 6 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಉದ್ದಿಮೆ ಸ್ಥಾಪಿಸುವ ಬಯಕೆ ಇರುವವರು ಈಗ ಜಗತ್ತಿನ ಯಾವುದೇ ಮೂಲೆಯಲ್ಲಿ ಬೇಕಾದರೂ ಕುಳಿತು ಇಲ್ಲಿ ಲಭ್ಯವಿರುವ ಮೂಲಸೌಕರ್ಯಗಳ ಮಾಹಿತಿ ಪಡೆಯಬಹುದು. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ನಿರ್ಮಿಸಿರುವ ಕೈಗಾರಿಕಾ ಪ್ರದೇಶಗಳ ಸ್ಪಷ್ಟ ಚಿತ್ರಣವನ್ನೂ ಕುಳಿತಲ್ಲಿಯೇ ಪಡೆಯಬಹುದು.

ಕೆಐಎಡಿಬಿ ವೆಬ್‌ಸೈಟ್‌ನಲ್ಲಿ `ಕೈಗಾರಿಕಾ ಭೂಮಿ~ ಎಂಬ ಹೊಸ ವಿಭಾಗವೊಂದನ್ನು ಸಿದ್ಧಪಡಿಸಿದ್ದು, ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಶುಕ್ರವಾರ ಚಾಲನೆ ನೀಡಿದರು. ಮಂಡಳಿಯ ವೆಬ್‌ಸೈಟ್ ಡಿಡಿಡಿ.ಜಿಚಿ.ಜ್ಞಿ ಪ್ರವೇಶಿಸಿ ಅಲ್ಲಿ `ಕೈಗಾರಿಕಾ ಭೂಮಿ~ ವಿಭಾಗ ಸಂಪರ್ಕಿಸಿದರೆ ರಾಜ್ಯದ 30 ಜಿಲ್ಲೆಗಳ 136 ಕೈಗಾರಿಕಾ ಪ್ರದೇಶಗಳ ಪೂರ್ಣ ಚಿತ್ರಣ ದೊರೆಯುತ್ತದೆ.

ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್) ಆಧರಿಸಿ `ಕೈಗಾರಿಕಾ ಭೂಮಿ~ ಸಿದ್ಧಪಡಿಸಲಾಗಿದೆ. ಭವಿಷ್ಯದಲ್ಲಿ ಈ ವ್ಯವಸ್ಥೆಯ ಮೂಲಕವೇ `ಕೆಐಎಡಿಬಿ~ಯ ಎಲ್ಲ ಕೈಗಾರಿಕಾ ಪ್ರದೇಶಗಳ ನಿರ್ವಹಣೆ ನಡೆಯಲಿದೆ. ಇ-ಆಡಳಿತದ ಅನುಷ್ಠಾನದ ಭಾಗವಾಗಿ ಈ ಪ್ರಯತ್ನ ನಡೆದಿದೆ. ಕೆಐಎಡಿಬಿ ನಿರ್ಮಿಸಿರುವ  40,000 ಎಕರೆಗೂ ಹೆಚ್ಚು ವಿಸ್ತಾರದ ಕೈಗಾರಿಕಾ ಪ್ರದೇಶಗಳ ಸಮಗ್ರ ಚಿತ್ರಣ ಇಲ್ಲಿದೆ.

ಜಿಐಎಸ್ ತಂತ್ರಜ್ಞಾನ ಆಧರಿಸಿ ಎಲ್ಲ ಕೈಗಾರಿಕಾ ಪ್ರದೇಶಗಳ ನಕ್ಷೆಯನ್ನು ಕೈಗಾರಿಕಾ ಭೂಮಿಯಲ್ಲಿ ಒದಗಿಸಲಾಗಿದೆ. ಆಯಾ ಕೈಗಾರಿಕಾ ಪ್ರದೇಶದಲ್ಲಿ ಈಗಾಗಲೇ ಬಳಕೆಯಾಗಿರುವ ಭೂಮಿ, ಮಂಜೂರಾತಿ ಆಗಿರುವ ಭೂಮಿ ಮತ್ತು ಖಾಲಿ ಉಳಿದಿರುವ ಭೂಮಿಯ ವಿವರವನ್ನು ಒದಗಿಸಲಾಗಿದೆ. ಲಭ್ಯವಿರುವ ಅವಕಾಶಗಳು ಸೇರಿದಂತೆ ಉದ್ಯಮಿಗಳು ಬಯಸುವ ಎಲ್ಲ ಬಗೆಯ ಮಾಹಿತಿಯನ್ನೂ ಇಲ್ಲಿ ಒದಗಿಸಲಾಗಿದೆ.

ಕೈಗಾರಿಕೆಗಳ ಸ್ಥಾಪನೆಗೆ ಭೂಮಿ ಪಡೆದವರು ಅದನ್ನು ಬಳಸಿಕೊಳ್ಳುವ ಬಗ್ಗೆಯೂ ಇದೇ ವ್ಯವಸ್ಥೆಯ ಮೂಲಕ ನಿಗಾ ಇಡಲು ಕೆಐಎಡಿಬಿ ಯೋಚಿಸಿದೆ. ಮುಂದಿನ ದಿನಗಳಲ್ಲಿ ಕೈಗಾರಿಕಾ ಭೂಮಿಯನ್ನು ಮತ್ತಷ್ಟು ಮೇಲ್ದರ್ಜೆಗೇರಿಸುವ ಯೋಜನೆಯೂ ಮಂಡಳಿಯ ಮುಂದಿದೆ. ಪ್ರತಿ ಸರ್ವೆ ನಂಬರ್‌ಗಳ ಆಧಾರದಲ್ಲಿ ಮಾಹಿತಿ ಒದಗಿಸುವ ಯೋಚನೆಯೂ ಇದೆ.ಅಂತರರಾಷ್ಟ್ರೀಯ ಮಟ್ಟದ ಹೂಡಿಕೆದಾರರನ್ನು ಆಕರ್ಷಿಸುವುದು `ಕೈಗಾರಿಕಾ ಭೂಮಿ~ ಸ್ಥಾಪನೆಯ ಹಿಂದಿರುವ ಉದ್ದೇಶ. ಅದರ ಜೊತೆಯಲ್ಲೇ ಕೈಗಾರಿಕೆಗಳಿಗೆ ಭೂಮಿ ಮಂಜೂರಾತಿಗೆ ಸಂಬಂಧಿಸಿದ ಕಡತಗಳ ತ್ವರಿತ ವಿಲೇವಾರಿ, ಈ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು, ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ಒದಗಿಸುವುದು, ಹೂಡಿಕೆದಾರ ಸ್ನೇಹಿ ವಾತಾವರಣ ನಿರ್ಮಾಣ, ಇ-ಆಡಳಿತದ ಮೂಲಕ ದಕ್ಷ ಆಡಳಿತ ನಿರ್ವಹಣೆಗೆ ವೇದಿಕೆ ಕಲ್ಪಿಸುವ ಉದ್ದೇಶವೂ ಇದೆ ಎಂದು ಕೆಐಎಡಿಬಿ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT