ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಜಿನ್ಗೆ 91

Last Updated 26 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಚಲನಚಿತ್ರಗಳು ಕಾಲಿಡದ ದಿನಗಳಲ್ಲಿ ನಾಟಕ ಪ್ರದರ್ಶಿಸಲು ಕಟ್ಟಿದ ಎಲ್ಜಿನ್ ಡ್ರಾಮಾ ಹಾಲ್ ಆನಂತರ ಚಿತ್ರಮಂದಿರವಾಯಿತು.ಈಗ ಅದು ಒಂಬತ್ತು ದಶಕ ಪೂರೈಸಿದೆ.

ನಗರದ ಹಳೆಯ ಚಿತ್ರಮಂದಿರಗಳು ಇಂದು ಇತಿಹಾಸಕ್ಕೆ ಸರಿದು, ಆ ಜಾಗದಲ್ಲಿ ಇಂದು ಬೃಹತ್ ಮಾಲ್ ಹಾಗೂ ಕಟ್ಟಡಗಳು ನಿರ್ಮಾಣಗೊಂಡಿವೆ.

ಆದರೆ, ನಾಟಕ ಪ್ರದರ್ಶನಕ್ಕಾಗಿಯೇ ದಶಕಗಳ ಹಿಂದಿಯೇ ನಿರ್ಮಾಣವಾದ ಡ್ರಾಮಾ ಸಭಾಂಗಣವೊಂದು ಚಿತ್ರಮಂದಿರವಾಗಿ ಪರಿವರ್ತನೆಗೊಂಡಿದ್ದು ಮಾತ್ರವಲ್ಲದೆ ಇಂದಿಗೂ ಬಹು ಭಾಷಾ ಚಿತ್ರಗಳನ್ನು ಬಿಟ್ಟೂ ಬಿಡದೆ ಪ್ರದರ್ಶಿಸುತ್ತಿದೆ ಎಂದರೆ ಆಶ್ಚರ್ಯ ಎನಿಸಬಹುದು.

ಅದುವೇ  ಶಿವಾಜಿನಗರದ `ಎಲ್ಜಿನ್ ಚಿತ್ರ ಮಂದಿರ~. ಬಹುತೇಕ ಚಿತ್ರರಸಿಕರಿಗೆ ಇದರ ಪರಿಚಯ ತುಂಬ ಕಡಿಮೆ! ಇನ್ನೂ ವಿಶೇಷ ಎಂದರೆ ಆದರೆ ಈ ಚಿತ್ರಮಂದಿರಕ್ಕೀಗ 91ರ ಹರೆಯ.

ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣವಾದ ಈ ಚಿತ್ರಮಂದಿರ ನಗರದಲ್ಲಿ ಉಳಿದಿರುವ ಹಳೆಯ ಚಿತ್ರಮಂದಿರಗಳ ಗುಂಪಿನಲ್ಲಿ ಇದು ಒಂದು. ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು... ಹೀಗೆ ವಿವಿಧ ಭಾಷೆಯ ಚಲನಚಿತ್ರಗಳು ಇಂದಿಗೂ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿವೆ.

ಚಲನಚಿತ್ರಗಳು ಇನ್ನೂ ಭಾರತಕ್ಕೆ ಕಾಲಿಡದೆ ನಾಟಕಗಳೇ ಪ್ರಧಾನವಾದ ಆ  ದಿನಗಳಲ್ಲಿ ನಾಟಕಗಳನ್ನು ಪ್ರದರ್ಶಿಸಲು 1896ರಲ್ಲಿ ವೀರಭದ್ರ ಮೊದಲಿಯಾರ್ ಅವರು ` ಎಲ್ಜಿನ್ ಡ್ರಾಮಾ ಹಾಲ್~ ಹೆಸರಿನಲ್ಲಿ ಇದನ್ನು ನಿರ್ಮಿಸಿದರು.

ಕರ್ನಾಟಕದ ಗುಬ್ಬಿವೀರಣ್ಣ ನಾಟಕ ಕಂಪನಿ ಸೇರಿದಂತೆ ಮುಂಬೈನ ಹಲವಾರು ನಾಟಕ ಕಂಪೆನಿಗಳ ನಾಟಕಗಳು ಇಲ್ಲಿ ಪ್ರದರ್ಶನಗೊಂಡಿವೆ.

ದೇಶದಲ್ಲಿ ಸಿನಿಮಾಗಳ ಶಕೆ ಪ್ರಾರಂಭವಾದಂತಹ ದಿನಗಳಲ್ಲಿ ನಾಟಕ ಪ್ರದರ್ಶನಕ್ಕೆ ಬದಲಾಗಿ 1920 ರ ಅವಧಿಯಲ್ಲಿ ಎಲ್ಜಿನ್ ಡ್ರಾಮಾ ಹಾಲ್ ಚಿತ್ರಮಂದಿರವಾಗಿ ಬದಲಾಯಿತು. ಮೂಕಿ ಚಿತ್ರಗಳನ್ನು ಪ್ರದರ್ಶಿಸಲು ಪ್ರಾರಂಭಿಸಿತು.

ನಂತರದ ದಿನಗಳಲ್ಲಿ ಚಿತ್ರರಂಗವು ಬೆಳೆದಂತೆಲ್ಲ ಟಾಕಿ (ಮಾತನಾಡುವ) ಕಪ್ಪು ಬಿಳುಪಿನ ಚಿತ್ರಗಳ ಯುಗ ಬಂತು. ಮೊಟ್ಟಮೊದಲಿಗೆ  `ಆಲ್ಮಾರ~ ಹಿಂದಿ ಭಾಷೆಯ ಕಪ್ಪು ಬಿಳುಪಿನ ಚಿತ್ರವನ್ನು ಪ್ರದರ್ಶನ ಮಾಡುವುದರೊಂದಿಗೆ ಎಲ್ಜಿನ್ ಡ್ರಾಮಾಹಾಲ್ `ಎಲ್ಜಿನ್ ಚಿತ್ರಮಂದಿರ~ವಾಗಿ ರೂಪಾಂತರಗೊಂಡಿತ್ತು.

ಪ್ರಸ್ತುತ ನಗರದ ಹಳೆಯ ಚಿತ್ರಮಂದಿರಗಳಲ್ಲಿ ಒಂದಾಗಿರುವ ಈ ಚಿತ್ರಮಂದಿರ ಹೊಸದಾಗಿ ಬಿಡುಗಡೆಯಾದ ಚಲನಚಿತ್ರಗಳ ಪ್ರದರ್ಶನಕ್ಕೆ ಬದಲಾಗಿ ಮರು ಬಿಡುಗಡೆಯ (ಸೆಕೆಂಡ್ ರೀಲ್ ಫಿಲಂ) ಕನ್ನಡ, ತಮಿಳು ಮತ್ತು ಹಿಂದಿ ಭಾಷೆಯ ಹಳೆಯ ಚಲನಚಿತ್ರಗಳ ಪ್ರದರ್ಶನ ನೀಡುತ್ತಿದೆ. ಎಲ್ಲಾ ಭಾಷೆಯ ಚಿತ್ರರಸಿಕರನ್ನು ತನ್ನೆಡೆ ಸೆಳೆಯುತ್ತಿದೆ.

`ನಮ್ಮ ಚಿತ್ರಮಂದಿರಕ್ಕೆ 91ವರ್ಷಗಳು ಸಂದಿವೆ ಎಂದು ನನಗೇ ಆಶ್ಚರ್ಯವಾಗುತ್ತಿದೆ. ಇಂದಿಗೂ ಬಹುಭಾಷೆಯ ಚಿತ್ರಗಳನ್ನು ಇಲ್ಲಿ ಪ್ರದರ್ಶಿಸುತ್ತಾ ಬಂದಿರುವುದು ನನಗಂತೂ ಹೆಮ್ಮೆ. ಆದರೆ  ಇತ್ತಿಚೀನ ದಿನಗಳಲ್ಲಿ ಚಿತ್ರಗಳನ್ನು ನೋಡುವವರ ಸಂಖ್ಯೆ ಕಡಿಮೆಯಾಗಿದೆ. ಇದರಿಂದಾಗಿ ಚಿತ್ರಮಂದಿರ ನಷ್ಟದಲ್ಲಿ ಮುಳುಗಿದೆ~ ಎಂದು ಬೇಸರದಿಂದ ನುಡಿಯುತ್ತಾರೆ  ಚಿತ್ರಮಂದಿರ ಈಗಿನ ಮಾಲೀಕರಾದ ಎ.ಎಸ್.ಕೃಷ್ಣಮೂರ್ತಿ.

ಪಿವಿಆರ್, ಬಿಗ್ ಸಿನಿಮಾಸ್, ಐನಾಕ್ಸ್ ಮುಂತಾದ ಐಷಾರಾಮಿ ಚಿತ್ರಮಂದಿರಗಳ ಭರಾಟೆ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ಸಂಗಮ್, ಪ್ಲಾಜಾ, ಪುಟ್ಟಣ್ಣ ಚಿತ್ರಮಂದಿರಗಳ ರೀತಿ ಇತಿಹಾಸದಲ್ಲಿ ಮಾಯವಾಗದೆ ಇಂದಿಗೂ ಸಹ ನಾನಾ ಭಾಷೆಯ ಚಲನಚಿತ್ರಗಳನ್ನು ಪ್ರದರ್ಶಿಸುವುದರೊಂದಿಗೆ  `ಎಲ್ಜಿನ್~ ಶತಮಾನದತ್ತ ಮುನ್ನಡೆಯುತ್ತಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT