ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓದುಗರ ಪತ್ರಗಳು

Last Updated 15 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬರಗೂರು ರಾಮಚಂದ್ರಪ್ಪ ಅವರ `ಗಾಂಧಿ ಹುಡುಕುತ್ತಾ ಸಬರಮತಿಯಲ್ಲಿ...~ (ಅ.2) ಬರಹ ನಮ್ಮ ದೇಶಕ್ಕೆ ಗಾಂಧಿ, ಅಂಬೇಡ್ಕರ್, ಮಾರ್ಕ್ಸ್ ಅವರುಗಳು ಹೇಗೆ ಪ್ರಸ್ತುತರಾಗುತ್ತಾರೆ ಎಂಬ ಪ್ರಶ್ನೆಗೆ ಉತ್ತರವಾಗಿದೆ. ಅಂಬೇಡ್ಕರರ ಜಾತ್ಯತೀತ ರಾಷ್ಟ್ರ ಹಾಗೂ ಮಾರ್ಕ್ಸ್‌ನ ಆರ್ಥಿಕ ಸ್ವಾಯತ್ತ ಲೋಕದೊಂದಿಗೆ ಗಾಂಧಿಯವರ ಸ್ವರಾಜ್ಯ ಪರಿಕಲ್ಪನೆ ಹೊಂದಿರುವ ಸಂಬಂಧವನ್ನು ಬರಗೂರರು ಸರಳವಾಗಿ ವಿವರಿಸಿದ್ದಾರೆ. `ಮೋದಿ ಗುಜರಾತ್‌ನಲ್ಲಿ ಗಾಂಧಿ ಎಲ್ಲಿದ್ದಾರೆ!~ ಎನ್ನುವ ಉದ್ಘಾರ ನಮ್ಮನ್ನು ವರ್ತಮಾನದ ಪ್ರಖರತೆಗೆ ಮುಖಾಮುಖಿಯಾಗಿಸುತ್ತದೆ.

- ಜಯರಾಮ ಹೆಗಡೆ, ಶಿರಸಿ

ಬರಗೂರರ ಗಾಂಧಿಯ ಹುಡುಕಾಟ ಎಂಬ ಪ್ರವಾಸ ಕಥನ ಕಾವ್ಯವೂ ಆಗಿದೆ. ಸಾಮಾಜಿಕ, ಆರ್ಥಿಕ ಸರ್ವಾಧಿಕಾರಗಳನ್ನು ವಿರೋಧಿಸಿ ಹಿಮ್ಮೆಟ್ಟಿಸುವ ಸಮಾನತೆಯ ಹೋರಾಟ ಮಾತ್ರವೇ `ಎರಡನೇ ಸ್ವಾತಂತ್ರ್ಯ ಹೋರಾಟ~ ಎನ್ನುವ ಅವರ ಅನಿಸಿಕೆಯಲ್ಲಿ ಸತ್ಯವಿದೆ. ಅಂತೆಯೇ ಬರಗೂರರು ಮುಂದಿಡುವ `ಗಾಂಧಿ ಮಾದರಿ~ ಹಾಗೂ `ಮೋದಿ ಮಾದರಿ~ಗಳ ಬಗ್ಗೆ ಸಾಕಷ್ಟು ಚಿಂತನೆ ನಡೆಯಬೇಕಾಗಿದೆ. 

- ಪೂ.ಸೂ. ಲಕ್ಷ್ಮೀನಾರಾಯಣರಾವ್, ಬೆಂಗಳೂರು

ಗಾಂಧಿ ಹಾಗೂ ದಸರೆಯ ನೆನಪುಗಳನ್ನು ಅನನ್ಯವಾಗಿ ಚಿತ್ರಿಸಿದ ಅ.2ರ ಸಾಪ್ತಾಹಿಕ ಪುರವಣಿ ಅಪರೂಪದ್ದು. `ಅರಸು ಸಮುದಾಯ~ ಸಾಗಿಬಂದ ಹಾದಿ ಹಾಗೂ ಅವರ ಇಂದಿನ ಸ್ಥಿತಿಗತಿ ಬಗೆಗಿನ ರವೀಂದ್ರ ಭಟ್ ಬರಹ ಮಾಹಿತಿಪೂರ್ಣವಾಗಿತ್ತು. ನಾಡಿಗೆ ಮೈಸೂರು ಅರಸರು ನೀಡಿದ ಕೊಡುಗೆ ಸದಾ ಸ್ಮರಣೀಯ. 

- ಬಿ.ಎಸ್.ಮುಳ್ಳೂರ,  ಹಲಗತ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT