ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರೀನಾ-ಚೋಪ್ರಾ ದೋಸ್ತಿ?

Last Updated 14 ಜೂನ್ 2012, 19:30 IST
ಅಕ್ಷರ ಗಾತ್ರ

ಈ ಹಿಂದೆ ಶಾಹಿದ್ ಕಪೂರ್‌ನ ಜೊತೆಗೆ ಬಾಂಧವ್ಯ ಕಳಚಿಕೊಂಡ ನಂತರ ಪ್ರಿಯಾಂಕಾ ಚೋಪ್ರಾ ಹಾಗೂ ಕರೀನಾ ಕಪೂರ್ ನಡುವೆ ಹೇಳಿಕೊಳ್ಳುವಂಥ ಸಂಬಂಧಗವೇನೂ ಉಳಿದಿರಲಿಲ್ಲ. ಆದರೆ ಒಂದೆರಡು ದಿನಗಳ ಹಿಂದೆ ಪ್ರಿಯಾಂಕಾ `ಹೀರೊಯಿನ್~ ಸೆಟ್‌ಗೆ ಭೇಟಿ ನೀಡಿದ್ದಾರೆ.

ತಮ್ಮ `ಫ್ಯಾಶನ್~ ಚಿತ್ರ ತಂಡದೊಂದಿಗೆ ಸಾಕಷ್ಟು ಸಮಯ ಕಳೆದು ಬಂದಿದ್ದಾರೆ. ಇದೇ ಸಂದರ್ಭದಲ್ಲಿ `ಹೀರೊಯಿನ್~ ಚಿತ್ರದ ಮುಖ್ಯ ಪಾತ್ರ ನಿರ್ವಹಿಸುತ್ತಿರುವ ಕರೀನಾ ಜೊತೆಯೂ ಯಾವುದೇ ಕಹಿ ಇಲ್ಲದಂತೆ ಹರಟಿ ಬಂದಿದ್ದಾರೆ.

ಮಧುರ್ ಭಂಡಾರ್ಕರ್, ಪ್ರಿಯಾಂಕಾ ಭೇಟಿಯ ನಂತರ ಪುಳಕಿತರಾಗಿದ್ದಾರೆ. ಪ್ರಿಯಾಂಕಾ ಸೆಟ್‌ನಲ್ಲಿ ಎಲ್ಲರೊಂದಿಗೆ ಅದೇ `ಜಲ್ವಾ~ ಉಳಿಸಿಕೊಂಡಿದ್ದಾರೆ ಎಂದು ಅವರು ಟ್ವೀಟಿಸಿದ್ದಾರೆ.

ಕರೀನಾ ಕಪೂರ್ ಸಹ ಪ್ರಿಯಾಂಕಾಳೊಡನೆ ಒಂದಷ್ಟು ಹೊತ್ತು ಖುಷಿಯಾಗಿ ಕಳೆದೆ ಎಂದು ಬರೆದಿದ್ದಾರೆ. ಪ್ರಿಯಾಂಕಾ `ಫ್ಯಾಶನ್~ ತಂಡದ ಭೇಟಿ ಖುಷಿ ನೀಡಿತು. ಬೇಬೊ ಜೊತೆಗಿನ ಹರಟೆಯಿಂದಾಗಿ ಮನಸು ಹಗುರಾಯಿತು ಎಂದೂ ಟ್ವೀಟಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT