ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾಸೌಧದಲ್ಲಿ ಹೊಸ ಬೆಳಕು

Last Updated 28 ಅಕ್ಟೋಬರ್ 2010, 18:30 IST
ಅಕ್ಷರ ಗಾತ್ರ

ಫೋರ್ಥ್ ಕಾರ್ನರ್ ಮತ್ತು ಕೆ ಎಚ್. ಕಲಾಸೌಧ: ಶನಿವಾರ ದಿಂದ ಸೋಮವಾರದ ವರೆಗೆ ‘ಹೊಸ ಬೆಳಕು’ ನಾಟಕ (ಪರಿಕಲ್ಪನೆ ಮತ್ತು ನಿರ್ದೇಶನ: ಪಿ.ಡಿ. ಸತೀಶಚಂದ್ರ, ರಚನೆ: ಪಿಡಿಎಸ್ ಮತ್ತು ಚಂದನ್ ಶಂಕರ. ಸಂಗೀತ: ಎಂ. ರಂಗರಾವ್). 
 

‘ಹೊಸ ಬೆಳಕು’. ಇದು 60ರ ದಶಕದ ಪ್ರಖ್ಯಾತ ಮಹಿಳಾ ಲೇಖಕರಲ್ಲಿ ಒಬ್ಬರಾದ ವಾಣಿ ಅವರ ಕಾದಂಬರಿ ಆಧಾರಿತ ಚಿತ್ರ. ಇದನ್ನು ಯಾರು ತಾನೆ ಮರೆಯಲು ಸಾಧ್ಯ?
 

ಹೊಸ ಬೆಳಕು ಮೊದಲ ಪ್ರತಿ 1969ರಲ್ಲಿ ಅಚ್ಚಾಗಿ ಅಪಾರ ಯಶಸ್ಸು ಕಂಡಿತ್ತು. ಇದನ್ನು ಚಿತ್ರ ನಿರ್ದೇಶಕರಾದ ದೊರೈ ಭಗವಾನ್ ಜೋಡಿ 1982ರಲ್ಲಿ ಬೆಳ್ಳಿತೆರೆಯ ಮೇಲೆ ಮೂಡಿಸಿದರು. ಕನ್ನಡದ ಕಣ್ಮಣಿ ಡಾ. ರಾಜ್‌ಕುಮಾರ್ ಹಾಗು ಸರಿತಾ ಜೋಡಿಯಲ್ಲಿ ಮೂಡಿ ಬಂದ ಇದು ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಬಹು ದೊಡ್ಡ ಯಶಸ್ಸು ಕಂಡ ಚಿತ್ರ.
 

ಕೋಟ್ಯಂತರ ಕನ್ನಡಿಗರು ನೋಡಿ ಮೆಚ್ಚಿದ ಈ ಚಿತ್ರ ಮತ್ತು ಕಥೆಯನ್ನು ಫೊರ್ಥ್ ಕಾರ್ನರ್ ತಂಡ ಕಲಾಸೌಧಕ್ಕಾಗಿ ನಾಟಕವಾಗಿ ರೂಪಾಂತರಿಸಿದೆ. ಇದು ನಾಟಕ, ಕಾದಂಬರಿ ಹಾಗೂ ಚಲನಚಿತ್ರದ ಹದವಾದ ಒಂದು ಮಿಶ್ರಣ.
 

ಹೊಸಬೆಳಕು ನಮ್ಮ ನಿಮ್ಮೆಲ್ಲರ ಸುತ್ತಲೂ ಪ್ರಸ್ತುತವಾಗಿ ನಡೆಯುತ್ತಿರುವ ಕಥೆಯೇ ಆಗಿದೆ. ಈ ಕಥೆಯನ್ನು ರಂಗಭೂಮಿ ಮೇಲೆ ತರಲು ಇದೇ ಮುಖ್ಯ ಪ್ರೇರಣೆ. ಬೇರೆಯವರಿಗೆ ಸ್ಫೂರ್ತಿ ಆಗಬಲ್ಲ ಅದೆಷ್ಟೋ ಜನ ನಮ್ಮ ನಡುವೆ ಎಲೆಮರೆಕಾಯಿಗಳಂತೆ ಜೀವನ ನಡೆಸುತ್ತಿದಾರೆ.

ಈ ನಾಟಕ ಇಂಥವರ ಅಗತ್ಯವನ್ನು ಸಮಾಜದ ಮುಂದೆ ಇಡುವ ಒಂದು ಪ್ರಯತ್ನ. ಬದಲಾಗಿರುವ ಸಾಮಾಜಿಕ ಪರಿಸ್ಥಿತಿಗಳನ್ನು ಅಳವಡಿಸಿ ಕಥೆಯನ್ನು ಆಧುನಿಕ ರೀತಿಯಲ್ಲಿ ಪ್ರೇಕ್ಷಕರ ಮುಂದೆ ಇಡಲಾಗುತ್ತಿದೆ.
 

ರಂಗಭೂಮಿಯಂತ ಹೊಸಬೆಳಕಿನ ಮೂಲಕ ಹೊಸ ಪ್ರೇಕ್ಷಕರನ್ನು ಸೆಳೆಯುವುದು, ಕಥೆಯನ್ನು ಸಂಸ್ಕರಿಸಿ ಸ್ವಾರಸ್ಯಕರವಾದ ಅಂಶಗಳನ್ನು ತುಂಬಿ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸುವುದೇ ಇದರ ಉದ್ದೇಶ ಎನ್ನುತ್ತದೆ ಫೋರ್ಥ್ ಕಾರ್ನರ್.
 

ಸ್ಥಳ: ಕೆಎಚ್ ಕಲಾಸೌಧ, ರಾಮಾಂಜನೇಯ ರಸ್ತೆ, ಹನುಮಂತನಗರ. ನಿತ್ಯ ಸಂಜೆ 7.30.
 

ಟಿಕೆಟ್ ಮಾಹಿತಿಗೆ: 98803 88868, 98804 87682, 4206 4969.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT