ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ನೋಡಬೇಡಿ, ಮಾನವೀಯತೆ ತೋರಿ

Last Updated 17 ಜೂನ್ 2011, 10:40 IST
ಅಕ್ಷರ ಗಾತ್ರ

ಮಂಗಳೂರು:  `ಕಾನೂನು ನೋಡಬೇಡಿ. ಮಾನವೀಯತೆ ತೋರಿ. ನಮ್ಮಂಥ ಕಡುಬಡವರ ಪಾಲಿಗೆ ಕಾನೂನು ನೆರವಿಗೆ ಬಾರದಿದ್ದರೆ ಇನ್ನು ಯಾರ ಮೊರೆ ಹೋಗುವುದು~.  - ಹೀಗೆಂದು ದಲಿತ ಸಮುದಾಯದ ವೆಂಕಮ್ಮ ಹಾಗೂ ಗಿರಿಜಾ ಕಣ್ಣೀರು ಸುರಿಸುತ್ತಾ ಪ್ರಶ್ನಿಸಿದರು. ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನಗರದ ನಂತೂರು ಪದವು ನೇಮು ಶೆಟ್ಟಿ ಕಂಪೌಂಡ್‌ನಲ್ಲಿ ವಾಸವಿದ್ದ ಇವರ ಮನೆಯನ್ನು ಬುಧವಾರ ತೆರವುಗೊಳಿಸಲಾಗಿತ್ತು.

`ನಾವು ಅವಿವಾಹಿತರು. ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದೇವೆ. ಬೇರೆ ಎಲ್ಲಿಗೆ ಹೋಗುವುದು. ಮಾನವೀಯತೆ ತೋರಿ ಇಲ್ಲಿ ಉಳಿಯಲು ಅವಕಾಶ ನೀಡಿ. ಈಗ ಮನೆಗೆ ಬೀಗ ಹಾಕಲಾಗಿದೆ. ಈ ಮಳೆಯಲ್ಲಿ ಜಗಲಿಯಲ್ಲೇ ವಾಸಿಸುತ್ತಿದ್ದೇವೆ~ ಎಂದು ಅವರು ಅಳಲು ತೋಡಿಕೊಂಡರು.

ಕೋರ್ಟ್ ಆದೇಶ ಆಗಿ ಮೂರು ದಿನವಷ್ಟೇ ಆಗಿದೆ. ಒಂದು ತಿಂಗಳವರೆಗೆ ಅವಕಾಶ ಇದೆ. ಆದರೆ ಜಾಗದ ಮಾಲೀಕರು ಪೊಲೀಸ್ ಹಾಗೂ ಗೂಂಡಾಗಳ ನೆರವಿನಿಂದ ಮನೆ ತೆರವು ಮಾಡಿ ದೌರ್ಜನ್ಯ ಎಸಗಿದ್ದಾರೆ~ ಎಂದು ಅವರು ದೂರಿದರು.

`ನಾವು 80 ವರ್ಷದಿಂದ ಇಲ್ಲಿ ವಾಸ ಇದ್ದೇವೆ. ಪಡಿತರ ಚೀಟಿ, ಮತದಾರರ ಗುರುತು ಚೀಟಿ ಸಿಕ್ಕಿದೆ. 1997ರಲ್ಲಿ ಡಿಕ್ಲರೇಷನ್‌ಗೆ ಅರ್ಜಿ ಹಾಕಿದ್ದೇವೆ. ಅದರ ಸ್ವೀಕೃತಿ ಪ್ರತಿ ಇದೆ. ಜಾಗದ ಮಾಲೀಕರಿಗೆ ತೊಂದರೆ ಕೊಡುವುದಿಲ್ಲ. ಮೂರು ಸೆಂಟ್ಸ್ ಜಾಗ ನೀಡಿ~ ಎಂದು ಅವರು ವಿನಂತಿಸಿದರು.

ವಾಜಪೇಯಿ ವಸತಿ ಯೋಜನೆ ಅಡಿಯಲ್ಲಿ ಪಾಲಿಕೆಯಲ್ಲಿ ಅರ್ಜಿ ಸಲ್ಲಿಸಲಾಗಿದೆ. ಅಲ್ಲಿ ನಿವೇಶನ, ಮನೆ ಸಿಕ್ಕಿದರೆ ಅಲ್ಲಿಗೆ ಹೋಗುತ್ತೇವೆ. ಅದು ಸಿಗುವವರೆಗಾದರೂ ಇಲ್ಲಿ ಉಳಿಯಲು ಅವಕಾಶ ನೀಡಿ~ ಎಂದು ಅವರು ಮನವಿ ಮಾಡಿದರು.

ಇವರು ಬಾಲಕೃಷ್ಣ ಶೆಟ್ಟಿ ಹಾಗೂ ಲೀಲಾವತಿ ಶೆಟ್ಟಿ ಎಂಬವರ ಜಾಗದಲ್ಲಿ ಹಲವು ವರ್ಷಗಳಿಂದ ವಾಸ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT