ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿ ಬೀಜವೂ ಟೀ ಎಲೆಯೂ

Last Updated 21 ಮೇ 2012, 19:30 IST
ಅಕ್ಷರ ಗಾತ್ರ

`ಕ್ರಿಯೇಟ್ ಅಂಡ್ ಸೆಲೆಬ್ರೇಟ್ ಒಕೇಶನ್ಸ್ ವಿತ್ ಕಾಫಿ~ ಎಂದು ಬೆಂಗಳೂರಿಗೆ ಕಾಲಿಟ್ಟಿದೆ ಪ್ಯಾನ್ ಇಂಡಿಯಾ ಫುಡ್ ಸಲ್ಯೂಷನ್ಸ್ ಪ್ರೈ.ಲಿಮಿಟೆಡ್ ಕಂಪೆನಿ.

`ಕಾಫಿ ಎಂದರೆ ಕೇವಲ ಪಾನೀಯವಲ್ಲ, ಕಾಫಿ ಟೀ ಜೊತೆ ಮಾತು ಮುಂದುವರಿಸುತ್ತಿದ್ದರೆ ಆ ಕ್ಷಣ ಸುಂದರಮಯವಾಗುತ್ತದೆ. ಬಿಸಿಲಿರಲಿ, ಚಳಿಯಿರಲಿ, ಮಳೆಯಿರಲಿ ಕಾಫಿ ಜೊತೆಗಿದ್ದರೆ ಆನಂದ ಇಮ್ಮಡಿಸುತ್ತದೆ. ಇಂತಹ ವಿಭಿನ್ನ ಅನುಭವವನ್ನು ಗ್ರಾಹಕರಿಗೆ ನೀಡಲು ಮುಂದಾಗಿದ್ದೇವೆ~ ಎನ್ನುತ್ತಾ `ದಿ ಕಾಫಿ ಬೀನ್ ಅಂಡ್ ಟೀ ಲೀಫ್~ ಹೆಸರಿನ ಮಳಿಗೆಯನ್ನು ಆರಂಭಿಸಿದೆ.

ಮೆಟ್ರೊಪಾಲಿಟನ್ ಸಿಟಿಗಳಲ್ಲಿ ಕಾಫಿ ಡೇಗಳತ್ತ ಮುಖ ಮಾಡುತ್ತಿರುವ ಮಂದಿ ಹೆಚ್ಚುತ್ತಿರುವುದರಿಂದ ಬೆಂಗಳೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಈ ಕಾಫಿ ಮಳಿಗೆ ತೆರೆದಿರುವುದಾಗಿ ಕಂಪೆನಿ ತಿಳಿಸಿದೆ.

ನಗರದ ಎಂಜಿ ರಸ್ತೆಯಲ್ಲಿನ `1 ಎಂಜಿ ರೋಡ್ ಮಾಲ್~ನಲ್ಲಿ ಈ ಕಾಫಿ ಮಳಿಗೆ ಆರಂಭಿಸಲಾಗಿದೆ. ಬೃಹತ್ ಕಾಫಿ  ಮತ್ತು ಟೀ ಮಗ್ ಅನಾವರಣದೊಂದಿಗೆ ಮಳಿಗೆ ಶುರುವಾಯಿತು.

ಇತ್ತೀಚೆಗಷ್ಟೆ `ದಿ ಬೆಸ್ಟ್ ಕೆಫೆ~ ಎಂಬ ಪ್ರಶಸ್ತಿ ಪಡೆದುಕೊಂಡಿರುವ ಕಾಫಿ ಬೀನ್ ಮತ್ತು ಟೀ ಲೀಫ್‌ನಲ್ಲಿ ಜಮೈಕನ್ ಬ್ಲ್ಯೂ ಮೌಂಟೇನ್ ಕಾಫಿ ಬೀನ್ ಕಾಫಿ ಬೀಜ ಹಾಗೂ ಜಾಸ್ಮಿನ್ ಡ್ರ್ಯಾಗನ್ ಫೀನಿಕ್ಸ್ ಪರ್ಲ್ ಚಹಾ ಪುಡಿ ಮೊದಲಾದ ಅತಿ ಉತ್ಕೃಷ್ಟ ಮಟ್ಟದ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ, ಕಾಫಿ, ಟೀ ಪಾನೀಯದ ಪರಂಪರೆ, ತಾಜಾತನ, ರುಚಿ- ಅಭಿರುಚಿಗಳನ್ನು ಗ್ರಾಹಕರಿಗೆ ನೀಡಿ ವಿಭಿನ್ನ ಅನುಭವವನ್ನು ನೀಡುವ ಉದ್ದೇಶದೊಂದಿಗೆ ಇಲ್ಲಿಗೆ ಬಂದಿರುವುದಾಗಿ ಕಂಪೆನಿ ತಿಳಿಸಿದೆ.

ಆಯಾ ಕಾಲಕ್ಕೆ ತಕ್ಕಂತೆ ಕಾಫಿ, ಟೀಗಳಲ್ಲೂ ವಿಭಿನ್ನತೆಯನ್ನು ಇಲ್ಲಿ ನೀವು ಪಡೆಯಬಹುದು. ಐಸ್ ಬ್ಲೆಂಡೆಡ್ ಬ್ರಿವರೇಜ್ ಎಂಬ ಪೇಯ ಆವಿಷ್ಕರಿಸಿದ ಖ್ಯಾತಿ ಕೂಡ ಇದಕ್ಕಿದೆ. ಮಳಿಗೆಯಲ್ಲಿ ಕಾಫಿ ಐಸ್ ಬ್ಲೆಂಡೆಡ್, ನಾನ್ ಕಾಫಿ ಐಸ್ ಬ್ಲೆಂಡೆಡ್, ಐಸ್ಡ್ ಡ್ರಿಂಕ್ಸ್, ಎಸ್ಪ್ರೆಸೊ ಡ್ರಿಂಕ್ಸ್, ಲ್ಯಾಟ್ ಡ್ರಿಂಕ್ಸ್, ಬ್ರ್ಯೂಯ್ಡ ಕಾಫಿ, ಕ್ಲಾಸಿಕ್ ಲೈನ್ ಟೀಸ್, ಟೀ ಟ್ಯಾಟ್ ಡ್ರಿಂಕ್ಸ್ ಹೀಗೆ ಹತ್ತು ಹಲವು ಬಗೆಯ ಟೀ ಕಾಫಿಗಳು ಲಭ್ಯ. ಪಾಸ್ತಾ, ಸಲಾಡ್, ಕ್ರಾಯ್‌ಸಾಂಟ್ಸ್, ಸ್ಯಾಂಡ್‌ವಿಚ್,

ಟೋಸ್ಟ್‌ಗಳು, ಕೇಕ್ ಹೀಗೆ ಬಗೆಬಗೆಯ ತಿಂಡಿ ತಿನಿಸುಗಳೂ ಕಾಫಿ ಟೀ ಜೊತೆಯಾಗಲಿವೆ.
ಮಳಿಗೆಯನ್ನು ಉದ್ಘಾಟಿಸಿದ ಪ್ಯಾನ್ ಇಂಡಿಯಾ ಫುಡ್ ಸಲ್ಯೂಷನ್ಸ್ ಪ್ರೈ. ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಎಸ್. ನಾರಾಯಣನ್ ಮಾತನಾಡಿ, `ಬೆಂಗಳೂರಿನಲ್ಲಿ ಈ ಮಳಿಗೆ ಪ್ರಾರಂಭಿಸಿರುವುದು ಸಂತಸ ತಂದಿದೆ. ತಂಪಾದ ವಾತಾವರಣದಲ್ಲಿ ವಿವಿಧ ರೀತಿಯ ಕಾಫಿ, ಚಹಾ ರುಚಿ ನೋಡುವುದು ಗ್ರಾಹಕರಿಗೆ ಒಂದು ಸುಂದರ ಅನುಭವವೆನಿಸಲಿದೆ.

ಮಳಿಗೆಯ ಒಳಾಂಗಣ ವಿನ್ಯಾಸವೂ ಅದ್ಭುತವಾದ್ದರಿಂದ ಬೆಂಗಳೂರಿಗರಿಗೆ ಇದು ಅಚ್ಚುಮೆಚ್ಚೆನಿಸಲಿದೆ~ ಎಂದು ತಮ್ಮ ಸಂತಸವನ್ನು ಹಂಚಿಕೊಂಡರು.

ಕ್ಯಾಲಿಫೋರ್ನಿಯಾ, ಆರಿಜೋನಾ, ನೆವಾಡಾ, ಸಿಂಗಾಪುರ, ಕೊರಿಯಾ, ಬ್ರೂನಿ, ಇಂಡೋನೇಷ್ಯಾ, ಇಸ್ರೇಲ್, ಆಸ್ಟ್ರೇಲಿಯಾ, ಚೀನಾ, ಕುವೈತ್, ಈಜಿಪ್ಟ್, ಖತಾರ್, ಫಿಲಿಪ್ಪೀನ್ಸ್ ದೇಶಗಳಲ್ಲಿರುವ ಈ ಕಾಫಿ ಬೀನ್ಸ್ ಅಂಡ್ ಟೀ ಲೀಫ್ ಕಂಪೆನಿ ಭಾರತದಲ್ಲಿ ಈ ವರ್ಷ 15 ಮಳಿಗೆಗಳನ್ನು ತೆರೆಯುವ ಆಶಯ ಹೊಂದಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT