ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳಿಂಗ ಸರ್ಪದ ವಂಶವಾಹಿ ನಕ್ಷೆ ಸಿದ್ಧ

Last Updated 4 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಲಂಡನ್‌ (ಪಿಟಿಐ): ಜಗತ್ತಿನ ಅತ್ಯಂತ ದೊಡ್ಡ ವಿಷಕಾರಿ ಹಾವು ‘ಕಾಳಿಂಗ ಸರ್ಪ’ದ ಸಂಪೂರ್ಣ ತಳಿ ನಕ್ಷೆ
ಯನ್ನು ವಿಜ್ಞಾನಿಗಳು ಯಶಸ್ವಿಯಾಗಿ ಸಿದ್ಧಪಡಿಸಿದ್ದಾರೆ.

ಇದರೊಂದಿಗೆ ಕಾರ್ಕೋಟಕ ವಿಷದ ಹಿಂದಿನ ರಹಸ್ಯಗಳನ್ನು ಭೇದಿಸಿರುವು­ದಾಗಿ ಲಿವರ್‌ಪೂಲ್‌ ಸ್ಕೂಲ್‌
ಆಫ್‌ ಟ್ರಾಪಿಕಲ್‌ ಮೆಡಿಸಿನ್‌ನ ಸಂಶೋಧಕರು ಹೇಳಿದ್ದಾರೆ.

ಇದೇ ವೇಳೆ ತಜ್ಞರು, ಬರ್ಮೀಸ್‌ ಹೆಬ್ಬಾವಿನ ವಂಶವಾಹಿ ನಕ್ಷೆಯನ್ನೂ ಸಿದ್ಧಪಡಿಸಿ, ಅದನ್ನು ಕಾಳಿಂಗ ಸರ್ಪದ ವಂಶವಾಹಿ ನಕ್ಷೆಯೊಂದಿಗೆ ಹೋಲಿಸಿ ಅಧ್ಯಯನ ನಡೆಸಿದ್ದಾರೆ. ಈ ತಳಿ ನಕ್ಷೆ­ಗಳು ಪ್ರಪಂಚದಲ್ಲಿ ಮೊತ್ತ­ಮೊದಲ ಬಾರಿಗೆ ಸಿದ್ಧಗೊಂಡಿ­ರುವ ಹಾವಿನ ತಳಿ ನಕ್ಷೆಗಳಾಗಿವೆ.

ಈ ನಕ್ಷೆಗಳಿಂದಾಗಿ ಹಾವುಗಳಲ್ಲಿನ ವಿಷ ವ್ಯವಸ್ಥೆಯ ವಿಕಾಸ ಹಾಗೂ ಬದಲಾದ ಪರಿಸ್ಥಿತಿಗೆ ಅವು ಹೊಂದಿ­ಕೊಂಡ ರೀತಿಯ ಬಗ್ಗೆ ಹೆಚ್ಚಿನ ಸಂಗತಿ­ಗಳನ್ನು ಅರಿಯಲು ಸಾಧ್ಯವಾಗುತ್ತದೆ. ವಿಷಕಾರಿ ಹಾವುಗಳು ಹಾಗೂ ಅವುಗಳ ‘ಬೇಟೆ’ಗಳ ನಡುವಿನ ಹೋರಾಟ ಪ್ರಕ್ರಿಯೆಗೆ ಪ್ರತಿಕ್ರಿಯಾತ್ಮಕ­ವಾಗಿ ವಿಷ ವ್ಯವಸ್ಥೆ ಬೆಳೆದಿರುವ ಸಾಧ್ಯತೆ ಇದೆ ಎಂಬುದು ವಿಜ್ಞಾನಿಗಳ ವಿವರಣೆ.

ಈ ಹಾವುಗಳ ವಿಷಗಳು ಹಲವಾರು ಪ್ರಭೇದ ಮೂಲಗಳ ಸಂಕೀರ್ಣ ಪ್ರೊಟೀನ್‌ ಮಿಶ್ರಣಗಳಾ­ಗಿದ್ದು, ಏಕ­ಕಾಲಕ್ಕೆ ರಾಸಾಯನಿಕ ಕ್ರಿಯೆಯಲ್ಲಿ ಪ್ರಬಲವಾಗಿ ವರ್ತಿಸಿ ‘ಬೇಟೆ’ಯು ಪಾರ್ಶ್ವವಾಯುವಿನಿಂದ ನಿಸ್ತೇಜವಾಗು­ವಂತೆ ಅಥವಾ ‘ಬೇಟೆ’ಯ ಹಠಾತ್‌ ಸಾವಿಗೆ ಕಾರಣವಾಗುತ್ತವೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT