ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃತಿಗಳ ಲೋಕಾರ್ಪಣೆ

Last Updated 14 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಛಂದ ಪುಸ್ತಕ: ಉದಯಭಾನು ಕಲಾಸಂಘ, ಗವಿಪುರ ಸಾಲು ಛತ್ರಗಳ ಎದುರು, ಕೆಂಪೇಗೌಡನಗರ. ಲೀ ಕುನ್‌ಕ್ಸಿನ್ ಆತ್ಮಕತೆ `ಮಾವೋನ ಕೊನೆಯ ನರ್ತಕ' (ಅನುವಾದ ಜಯಶ್ರೀ ಭಟ್), ಸುಬ್ರೊತೋ ಬಾಗ್ಚಿ ಅವರ ಆತ್ಮಕತೆ `ಜಗವ ಚುಂಬಿಸು' (ಅನುವಾದ ವಂದನಾ ಪಿ.ಸಿ.), ವಸುಧೇಂದ್ರ ಅವರ ಪ್ರಬಂಧ ಸಂಕಲನ `ವರ್ಣಮಯ' ಪುಸ್ತಕಗಳ ಲೋಕಾರ್ಪಣೆ. ಅತಿಥಿ-ರಾಜೇಶ್ವರಿ ತೇಜಸ್ವಿ, ಸುಬ್ರೊತೋ ಬಾಗ್ಚಿ, ಉಷಾ ಎಂ, ಶ್ರೀರಾಮ್ ಎಂ.ಎಸ್. ಬೆಳಿಗ್ಗೆ 10.30.


ಅಭಿಜ್ಞಾನ: ಡಿ.ವಿ.ಜಿ. ಸಭಾಂಗಣ, ಗೋಖಲೆ ಸಾರ್ವಜನಿಕರ ವಿಚಾರ ಸಂಸ್ಥೆ, ಬಸವನಗುಡಿ ರಸ್ತೆ, ನ.ರಾ. ಕಾಲೊನಿ. ಡಾ. ಪ್ರಭುಶಂಕರ ಅವರ `ಮಿಂಚಿನ ತೇರು' ಕೃತಿ ಲೋಕಾರ್ಪಣೆ-ಪ್ರೊ. ಅ.ರಾ. ಮಿತ್ರ, ಕೃತಿ ಕುರಿತು-ಜಿ.ಎಸ್. ಜಯದೇವ, ಅಧ್ಯಕ್ಷತೆ-ಪ್ರೊ.ಎನ್. ಕೃಷ್ಣಸ್ವಾಮಿ, ಉಪಸ್ಥಿತಿ-ಡಾ. ಪ್ರಭುಶಂಕರ. ಬೆಳಿಗ್ಗೆ 10.30.

ಬಹುಭಾಷಾ ತಜ್ಞ ಡಾ. ವಿ. ಗೋಪಾಲಕೃಷ್ಣ ಅಭಿನಂದನಾ ಸಮಿತಿ: ಅವರ್ ಸ್ಕೂಲ್ ಸಭಾಂಗಣ, ಬನಶಂಕರಿ ಪೊಲೀಸ್ ಸ್ಟೇಷನ್ ಹತ್ತಿರ, 27ನೇ ಅಡ್ಡರಸ್ತೆ, 17ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ. ಬಹುಭಾಷಾ ತಜ್ಞ ಡಾ.ವಿ. ಗೋಪಾಲಕೃಷ್ಣ ಅವರ 75ರ ಹುಟ್ಟುಹಬ್ಬದ ಅಭಿನಂದನೆ, ಅವರ `ಕೋಲಾರ ಜಿಲ್ಲೆ ಸ್ಥಳನಾಮಗಳು' (ಸಾಂಸ್ಕೃತಿಕ ಭಾಷಿಕ ಅಧ್ಯಯನ), `ಸ್ಥಳನಾಮ ಅಧ್ಯಯನಗಳು', `ತೌಲನಿಕ ಭಾಷೆ ಮತ್ತು ಸಾಹಿತ್ಯ' `ಎ ಫ್ಲೀಟಿಂಗ್ ಗ್ಲಿಂಪ್ಸ್ ಆಫ್ ಕನ್ನಡ ರೈಟಿಂಗ್' ಪುಸ್ತಕಗಳ ಲೋಕಾರ್ಪಣೆ. ಅಧ್ಯಕ್ಷತೆ-ಸಾಹಿತಿ ಡಾ. ಹಂಪ ನಾಗರಾಜಯ್ಯ. ಸಂಜೆ 4.
 

ನವಕರ್ನಾಟಕ ಪ್ರಕಾಶನ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ.ರಸ್ತೆ. ಪ್ರೊ.ಜಿ. ವೆಂಕಟಸುಬ್ಬಯ್ಯ: ನೂರರ ಸಂಭ್ರಮ ಹಾಗೂ ನವಕರ್ನಾಟಕ ಸಾಹಿತ್ಯ ಸಂಪದ. ಡಾ. ಶಾಂತಾ ಇಮ್ರಾಪೂರ ಅವರ `ಸಂ.ಶಿ ಭೂಸನೂರಮಠ', ಡಾ.ಎಚ್.ಎಸ್. ವೆಂಕಟೇಶಮೂರ್ತಿ ಅವರ `ಜಿ.ಎಸ್. ಶಿವರುದ್ರಪ್ಪ', ಡಾ. ಪ್ರಧಾನ್ ಗುರುದತ್ತ ಅವರ `ಸುಜನಾ', ಡಾ. ಚಿಂತಾಮಣಿ ಕೊಡ್ಲೆಕೆರೆ ಅವರ `ರಾಘವೇಂದ್ರ ಪಾಟೀಲ', ಡಾ. ಮಾಲತಿ ಪಟ್ಟಣಶೆಟ್ಟಿ ಅವರ `ಶ್ರೀನಿವಾಸ ವೈದ್ಯ', ಸ. ಉಷಾ ಅವರ `ವೈದೇಹಿ', ಡಾ. ರಂಗನಾಥ ಕಂಟನಕುಂಟೆ ಅವರ `ರಹಮತ್ ತರೀಕೆರೆ', ಡಾ. ಗೀತಾ ಶೆಣೈ ಅವರ `ಗೋಪಾಲಕೃಷ್ಣ ಪೈ' ಕೃತಿಗಳ ಲೋಕಾರ್ಪಣೆ. ಅಧ್ಯಕ್ಷತೆ ಮತ್ತು ಕೃತಿಗಳ ಲೋಕಾರ್ಪಣೆ ನಿಘಂಟು ತಜ್ಞ ಪ್ರೊ.ಜಿ. ವೆಂಕಟಸುಬ್ಬಯ್ಯ. ಭಾಗವಹಿಸುವ ಪ್ರಶಸ್ತಿ ಪುರಸ್ಕೃತರು-ಡಾ.

ರಾಘವೇಂದ್ರ ಪಾಟೀಲ, ಶ್ರೀನಿವಾಸ ವೈದ್ಯ, ವೈದೇಹಿ, ಡಾ. ರಹಮತ್ ತರೀಕೆರೆ, ಗೋಪಾಲಕೃಷ್ಣ ಪೈ, ಭಾಗವಹಿಸುವ ಕೃತಿಕರ್ತರು-ಡಾ. ಶಾಂತಾ ಇಮ್ರಾಪೂರ, ಡಾ. ಎಚ್.ಎಸ್. ವೆಂಕಟೇಶಮೂರ್ತಿ, ಡಾ. ಪ್ರಧಾನ ಗುರುದತ್ತ, ಡಾ. ಚಿಂತಾಮಣಿ ಕೊಡ್ಲೆಕೆರೆ, ಡಾ. ಮಾಲತಿ ಪಟ್ಟಣಶೆಟ್ಟಿ, ಸ. ಉಷಾ, ಡಾ. ರಂಗನಾಥ ಕಂಟನಕುಂಟೆ, ಡಾ. ಗೀತಾ ಶೆಣೈ. ಬೆಳಿಗ್ಗೆ 10.
 

ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ತು: ಐಸಿಎಚ್‌ಆರ್ ಕೇಂದ್ರ, ಅರಮನೆ ರಸ್ತೆ, ಮೈಸೂರು ಬ್ಯಾಂಕ್ ಸರ್ಕಲ್ ಹತ್ತಿರ. ಸುರೇಂದ್ರನಾಥ ಸೆನ್ ಅವರ `ಮರಾಠರ ಆಡಳಿತ ವ್ಯವಸ್ಥೆ' ಮತ್ತು ಯು.ಎನ್. ಗೋಶಾಲ್ ಅವರ `ಪ್ರಾಚೀನ ಭಾರತದ ಕಂದಾಯ ವ್ಯವಸ್ಥೆ' ಕೃತಿಗಳ ಲೋಕಾರ್ಪಣೆ. ಅಧ್ಯಕ್ಷತೆ-ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಇತಿಹಾಸ ಪ್ರಾಧ್ಯಾಪಕ ಪ್ರೊ.ಬಿ. ಸುರೇಂದ್ರ ರಾವ್, ಅತಿಥಿ-ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್, ಕೃಷ್ಣಾಪುರದೊಡ್ಡಿ ಕಾರ್ಯದರ್ಶಿ ಡಾ. ಎಂ. ಭೈರೇಗೌಡ. ಸಂಜೆ 5.

ಸುಚಿತ್ರ: ಕಿ.ರಂ. ನುಡಿಮನೆ. ನಿವೃತ್ತ ಪ್ರಾಧ್ಯಾಪಕರಾದ ಕೆ.ಎಸ್. ಮಧುಸೂದನ ಅವರಿಂದ `ಕುಮಾರವ್ಯಾಸ ಭಾರತದ ಮುದ್ರಣ ಹಾಗೂ ಪರಿಷ್ಕರಣ' ಉಪನ್ಯಾಸ. ಸಂಜೆ 5.

ಸಾಧನಾ ಪ್ರಕಾಶನ: ಕೆ.ಸಿ.ಎಸ್. ಸಭಾಂಗಣ, ನಂ. 6, 100 ರಿಂಗ್‌ರೋಡ್, ಜನತಾಬಜಾರ್ ಬಸ್‌ಸ್ಟಾಪ್ ಹತ್ತಿರ, ಬನಶಂಕರಿ 3ನೇ ಹಂತ. ಕೆ. ಪರಿಮಳ ಧೀರೇಂದ್ರರಾವ್ ಸಂಗ್ರಹಿಸಿರುವ `ಶಿಶುಗೀತೆಗಳು' ಪುಸ್ತಕ ಬಿಡುಗಡೆ. ಅತಿಥಿ-ಸುಧಾ ಬರಗೂರ್, ಪತ್ರಕರ್ತ ಎ.ಆರ್. ರಘುರಾಮ್. ಸಂಜೆ 6.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT