ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಯ್ಯಚೆಟ್ಟಿಯಲ್ಲಿ ವಿಜಯನಗರ ವೈಭವ

Last Updated 10 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಮೈಸೂರು ಅರಸು ಮನೆತನದ ರಾಣಿಯರು ಬಳಸುತ್ತಿದ್ದ ಆಭರಣಗಳು ಹಾಗೂ ನಮ್ಮ ಪೂರ್ವಜರ ಕಾಲದ ಚಿನ್ನಾಭರಣಗಳ ವಿನ್ಯಾಸ ಮತ್ತು ಸಂಗ್ರಹಗಳನ್ನು ಬಹುತೇಕರು ನೋಡಿಲ್ಲ. ಅಂದಿನ ಶೈಲಿಯ ಆಭರಣಗಳು ಹೇಗಿದ್ದವು ಎಂಬುದನ್ನು ಈಗಲೂ ನೋಡಬಹುದು. ಬೇಕಾದಲ್ಲಿ ಆರ್ಡರ್ ಕೊಟ್ಟು ಮಾಡಿಸಬಹುದು.

ಸಿ.ಕೃಷ್ಣಯ್ಯಚೆಟ್ಟಿ ಅಂಡ್ ಸನ್ಸ್ ಆಭರಣಗಳ ಕಂಪೆನಿಯು ಸಂಸ್ಥಾಪಕರ ದಿನದ ನೆನಪಿಗಾಗಿ ಆಯೋಜಿಸಿರುವ ಆಭರಣ ಮಾರಾಟ ಮೇಳದಲ್ಲಿ ರಾಜಮನೆತನಗಳ ವಜ್ರಾಭರಣಗಳ ಮಾದರಿಯನ್ನು ಕಂಡು ಕಣ್ತುಂಬಿಕೊಳ್ಳಬಹುದು.

ಹೆರಿಟೇಜ್ ಕಲೆಕ್ಷನ್ ಗ್ಯಾಲರಿಯಲ್ಲಿ ಈ ಎಲ್ಲಾ ಆಭರಣಗಳ ವಿನ್ಯಾಸದ ನಮೂನೆಗಳನ್ನು ವೀಕ್ಷಣೆಗೆ ಇಟ್ಟಿದೆ. ಆ ಮೂಲಕ ಪುರಾತನರ ಆಭರಣದ ಪ್ರೀತಿಯನ್ನು ನೆನಪಿಸುತ್ತಿದೆ.
ವಿಜಯನಗರ ಸಾಮ್ರಾಜ್ಯ ಎಂದರೆ ನೆನಪಾಗೋದು ಅಂದಿನ ರಾಜವೈಭವ, ಕಲೆ, ಸಂಸ್ಕೃತಿ. ಮುಖ್ಯವಾಗಿ ಶ್ರೀಮಂತಿಕೆ. ಶ್ರೀಕೃಷ್ಣದೇವರಾಯನ ಕಾಲದಲ್ಲಿ ಬೀದಿ ಬೀದಿಗಳಲ್ಲಿ ಮುತ್ತು, ರತ್ನಗಳನ್ನು ಮಾರಾಟ ಮಾಡುತ್ತಿದ್ದರು ಎಂಬ ಮಾಹಿತಿ ಇತಿಹಾಸದ ಪುಟಗಳಲ್ಲಿ ಸಿಗುತ್ತವೆ.

ಆ ಸಂಭ್ರಮ ಹೇಗಿತ್ತು ಎಂಬುದು ಇಂದಿನ ಜನತೆಗೆ ಗೊತ್ತಿಲ್ಲ. ಆ ಒಂದು ಪ್ರಯತ್ನವಾಗಿ ಈ ಮಾರಾಟ ಆಯೋಜಿಸಲಾಗಿದ್ದು, ಇಲ್ಲಿ 1869 ತರಹೇವಾರಿ ಆಭರಣಗಳನ್ನು ಮಾರಾಟ ಮತ್ತು ಪ್ರದರ್ಶನಕ್ಕೆ ಇಡಲಾಗಿದೆ.
 
1869 ಫೆಬ್ರುವರಿ 4ರಂದು ಶ್ರೀ ಕೃಷ್ಣಯ್ಯಚೆಟ್ಟಿ ಅಂಡ್ ಸನ್ಸ್ ಕಂಪೆನಿ ಆರಂಭವಾಯಿತು. ಆ ನೆನಪಿಗಾಗಿ ಈ ಆಭಣರಣ ಮಾರಾಟ ಸಂಭ್ರಮ ಹಮ್ಮಿಕೊಳ್ಳಲಾಗಿದೆ ಎನ್ನುತ್ತಾರೆ ವ್ಯವಸ್ಥಾಪಕ ನಿರ್ದೇಶಕ ಸಿ. ವಿನೋದ್ ಹಯಗ್ರೀವ್. ವಿಶೇಷವೆಂದರೆ ಬಂಗಾರದ ಮೇಲೆ ಶೇ.18.69 ರಿಯಾಯಿತಿಯನ್ನು ನೀಡಿದ್ದಾರೆ.

143ನೇ ವರ್ಷದ ಆಚರಣೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಬೇಕೆಂದು ಈ ಮಾರಾಟ ಮೇಳ ಹಮ್ಮಿಕೊಳ್ಳಲಾಗಿದೆ. ಬಂಗಾರಕ್ಕೆ ಶೇ.4, ಬೆಳ್ಳಿಗೆ ಶೇ 3 ಹಾಗೂ ವಜ್ರಕ್ಕೆ ಶೇ 5 ರಷ್ಟು ರಿಯಾಯಿತಿ ನೀಡಲಾಗಿದೆ.

ಹೆರಿಟೇಜ್ ಕಲೆಕ್ಷನ್‌ನಲ್ಲಿ ದಕ್ಷಿಣ ಭಾರತದ ರಾಜಮನೆತನಗಳ ರಾಣಿಯರು ಬಳಸುತ್ತಿದ್ದ ವಿನ್ಯಾಸದ ತೋಳುಬಂದಿ, ಮೂಗುತಿ, ಜುಮುಕಿ, ಸೊಂಟಪಟ್ಟಿ ಹಾಗೂ ನೆಕ್ಲೇಸ್‌ಗಳ ಹೆಚ್ಚು ಆಕರ್ಷಣೀಯವಾಗಿವೆ.

ಜೊತೆಗೆ ಜನರಿಗೆ ಮಾಹಿತಿ ನೀಡುವ ಸಲುವಾಗಿ ಖನಿಜದಿಂದ ಬೇರ್ಪಡಿಸಿದ ವಜ್ರವನ್ನು ಹೇಗೆ  ಪಾಲೀಶ್ ಮಾಡಿ ಅಂತಿಮವಾಗಿ ಮಾರುವ ಹಂತಕ್ಕೆ ತಂದಿರುತ್ತಾರೆ ಎಂಬುದನ್ನು ತಿಳಿಯಲು ವಜ್ರಗಳ ನಮೂನೆಗಳನ್ನು ವೀಕ್ಷಣೆಗೆ ಇಟ್ಟಿದ್ದಾರೆ.

ನೂರು ವರ್ಷ ಹಳೆಯ ಆಭರಣಗಳ ವಿನ್ಯಾಸಗಳು ಇಲ್ಲಿವೆ. ಭಾರತದ ಆಭರಣಗಳಷ್ಟೇ ಅಲ್ಲದೇ ಪಾಶ್ಚಿಮಾತ್ಯ ದೇಶಗಳ ವಿವಿಧ ಆಭರಣ ವಿನ್ಯಾಸಗಳು ಆಯ್ಕೆ ಮಾಡಿಕೊಂಡು ಕೊಂಡುಕೊಳ್ಳುವ ಅವಕಾಶವಿದೆ. ಮುಂಬರುವ ಪ್ರೇಮಿಗಳ ದಿನ ಮತ್ತು ವಿಶ್ವ ವಿವಾಹ ದಿನದ ಅಂಗವಾಗಿ ವಿಶೇಷ ಕೊಡುಗೆ ನೀಡುತ್ತಿದ್ದು, ಪ್ರೇಮಿಗಳ ಆಯ್ಕೆಗಾಗಿ ಪ್ರೀತಿಯ ಸಂಕೇತದ ಡಾಲರ್‌ಗಳು ವಿಶೇಷವಾಗಿ ಮಾರಾಟಕ್ಕಿವೆ.

ಅಲ್ಲದೇ ರುದ್ರಾಕ್ಷಿ ಮಣಿ, ಗಣೇಶ, ಲಕ್ಷ್ಮಿ, ವೆಂಕಟೇಶ್ವರ ಹೀಗೆ ಅನೇಕ ಬಗೆಯ ವಿನ್ಯಾಸದ ಡಾಲರ್‌ಗಳಿವೆ. ಅಲ್ಲದೇ ಇಂದಿನ ಫ್ಯಾಷನ್‌ಗೆ ಹೊಂದುವ ಪ್ಲಾಟಿನಂ ಆಭರಣಗಳು ಹೆಂಗಳೆಯರ ಕಣ್ಣು ಕುಕ್ಕುತ್ತಿವೆ. 5ಸಾವಿರದಿಂದ 1ಕೋಟಿ ರೂ ಬೆಲೆಯ ಆಭರಣಗಳು ಇಲ್ಲಿವೆ.

ಸಿ.ಕೃಷ್ಣಯ್ಯಚೆಟ್ಟಿ ಶೋರೂಂ ಎದುರು ಮೂರು ಮಾರಾಟ ಮಳಿಗೆಗಳನ್ನು ಹಾಕಲಾಗಿದೆ ಅಲ್ಲಿ 75 ವಿಧದ ಹರಳುಗಳು, ವಿವಿಧ ವಿನ್ಯಾಸದಲ್ಲಿವೆ. ರಾಜರ ಕಾಲದ ನೆನಪನ್ನು ಮರುಕಳಿಸುವ ಉದ್ದೇಶದಿಂದ ಮೈಸೂರು ಪೇಟ, ಸಾಂಪ್ರದಾಯಿಕ ಉಡುಗೆ ತೊಟ್ಟ ವ್ಯಾಪಾರಿಗಳು ಗಮನ ಸೆಳೆಯುತ್ತಾರೆ.

ನವರತ್ನ ಕಲ್ಲುಗಳು, ನೀಲಾ, ಮುತ್ತು, ಹವಳ, ಪಚ್ಚೆ ಹವಳ ಹಾಗೂ ರಾಶಿಗೆ ಹೊಂದುವ ಕಲ್ಲುಗಳು ಇವೆ. ಐದು ನೂರು ರೂಪಾಯಿಯಿಂದ 1ಲಕ್ಷ ಬೆಲೆ  ಬಾಳುವ ಕಲ್ಲುಗಳು ಇಲ್ಲಿವೆ. ಫೆ.14ರವರೆಗೆ ನಡೆಯಲಿರುವ ಮಾರಾಟ ಉತ್ಸವ ಹೆಂಗಳೆಯರ ನಿದ್ದೆಗೆಡಿಸಿದೆ.
ಸ್ಥಳ: ಸಿ.ಕೃಷ್ಣಯ್ಯಚೆಟ್ಟಿ ಅಂಡ್ ಸನ್ಸ್, ಕಮರ್ಷಿಯಲ್ ಸ್ಟ್ರೀಟ್. ಬೆಳಿಗ್ಗೆ 10.30 ರಿಂದ ರಾತ್ರಿ 8.30.                                          

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT