ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಬಿಡುವ ಧೈರ್ಯ ಆಯ್ಕೆ ಸಮಿತಿಗಿದೆಯೇ?

Last Updated 3 ಡಿಸೆಂಬರ್ 2012, 19:30 IST
ಅಕ್ಷರ ಗಾತ್ರ

`ತೆಂಡೂಲ್ಕರ್ ಅವರನ್ನು ತಂಡದಿಂದ ಕೈಬಿಡುವುದೇ? ಬಾಂದ್ರಾದ ಸಚಿನ್ ಮನೆಯ ಹಾದಿಯ ನಡುವೆ ಅವರ ಕಾರು ಕೆಟ್ಟು ಹೋಯಿತು ಎಂದಿಟ್ಟುಕೊಳ್ಳಿ. ಆಗ ನಾವು ಅದೇ ದಾರಿಯಲ್ಲಿ ತೆರಳುತ್ತಿದ್ದರೆ ಸಚಿನ್ ಅವರನ್ನು ನಮ್ಮ ಕಾರಿನಲ್ಲಿ ಕೂರಿಸಿಕೊಂಡು ಅವರ ಮನೆಗೆ ಡ್ರಾಪ್ ಮಾಡಬಹುದು ಅಷ್ಟೇ' ಎಂದು ಆಯ್ಕೆ ಸಮಿತಿ ಸದಸ್ಯರೊಬ್ಬರು ಒಮ್ಮೆ ತಮಾಷೆಯಾಗಿ ಹೇಳಿದ್ದ ಮಾತು ನೆನಪಿಗೆ ಬರುತ್ತಿದೆ.

23 ವರ್ಷದ ಕ್ರಿಕೆಟ್ ಜೀವನದಲ್ಲಿ ಒಮ್ಮೆಯೂ ಸಚಿನ್ ತಂಡದಿಂದ ಹೊರಬಿದ್ದಿಲ್ಲ. ಅವರನ್ನು ಕೈಬಿಡಲು ಅಂಥ ಕಾರಣವೇ ಇರಲಿಲ್ಲ. ಆದರೆ ಈಗ ಆಯ್ಕೆ ಸಮಿತಿ ತುಂಬಾ ಒತ್ತಡಕ್ಕೆ ಸಿಲುಕಿರುವುದು ಮಾತ್ರ ನಿಜ.

ಹಾಗಾಗಿ ತೆಂಡೂಲ್ಕರ್ ಅವರನ್ನು ಕೈಬಿಡುವ ಧೈರ್ಯವನ್ನು ಆಯ್ಕೆ ಸಮಿತಿ ಹೊಂದಿದೆಯೇ ಎಂಬ ಪ್ರಶ್ನೆ ಈಗ ಎದುರಾಗಿದೆ. ಆಯ್ಕೆ ಸಮಿತಿಯ್ಲ್ಲಲಿರುವ ವಿಕ್ರಮ್ ರಾಥೋಡ್ ಹಾಗೂ ಸಬಾ ಕರೀಮ್ ಅವರು ಸಚಿನ್ ಪದಾರ್ಪಣೆ ಮಾಡಿ ಐದಾರು ವರ್ಷ ಆದ ಮೇಲೆ ಅಂತರರಾಷ್ಟ್ರೀಯ ಕ್ರಿಕೆಟ್ ಆಡ್ದ್ದಿದವರು. ಆದರೆ ಅವರು ವಿದಾಯ ಹೇಳಿ ವರ್ಷಗಳೇ ಕಳೆದಿವೆ. ರಾಜೀಂದರ್ ಸಿಂಗ್ ಹನ್ಸ್ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿಯೇ ಇಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT