ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ಸರ್ ಪತ್ತೆಗೆ ಹೊಸ ತಂತ್ರಜ್ಞಾನ

Last Updated 9 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಅನ್ನು ಪತ್ತೆಹಚ್ಚುವ `ಮಾಂತ್ರಿಕ ಗೋಲಿ~ಗಳನ್ನು ಕಂಡುಹಿಡಿದಿರುವುದಾಗಿ ವಿಜ್ಞಾನಿಗಳು ತಿಳಿಸಿದ್ದಾರೆ.

ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾಲಯದ ಸಹಭಾಗಿತ್ವದೊಂದಿಗೆ ಈ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದ್ದು, ದಶಕದೊಳಗಾಗಿ ಈ ಗೋಲಿಗಳು ಅಥವಾ ಗುಳ್ಳೆಗಳು ಶಸ್ತ್ರಚಿಕಿತ್ಸೆಯ ವೇಳೆ ಲಭ್ಯವಾಗಲಿವೆ ಎಂದು ಬ್ರಿಟನ್‌ನ `ಸಂಡೆ ಎಕ್ಸ್‌ಪ್ರೆಸ್~ ವರದಿ ಮಾಡಿದೆ.

`ಎಕ್ಸ್‌ರೇ ಮತ್ತು ಎಂಆರ್‌ಐ ಸ್ಕ್ಯಾನ್ ಕಾಯಿಲೆಯನ್ನು ತಡವಾಗಿ ಪತ್ತೆಹಚ್ಚಿದರೆ, ಈ ಗೋಲಿಗಳಿಂದ ಅತಿ ಶೀಘ್ರದಲ್ಲಿ ಕಾಯಿಲೆ ಇರುವುದು ತಿಳಿದುಬರುತ್ತದೆ~ ಎಂದು ಅಲ್ಟ್ರಾಸೌಂಡ್ ಪರಿಣತರಾದ ಡಾ. ಮೆಲ್ಲಿಸಾ ಮಾಥರ್ ಹೇಳಿದ್ದಾರೆ.

ನೈಸರ್ಗಿಕವಾಗಿ ಉತ್ಪಾದನೆಯಾಗುವ ಕೋಶಗಳ ಪೊರೆಯಲ್ಲಿ ಕಂಡುಬರುವ ಕೊಬ್ಬಿನಿಂದ ತಯಾರಿಸಲಾದ `ನ್ಯಾನೊ ಟ್ರಾನ್ಸ್‌ಡ್ಯೂಸರ್ಸ್‌~ ಎಂದು ಕರೆಯಲಾಗುವ ಈ ಗೋಲಿಗಳನ್ನು ರಕ್ತದೊಳಗೆ ಸೇರಿಸಿ, ಶಬ್ದದ ಅಲೆಗಳ ಮೂಲಕ ವಿದ್ಯುತ್ ಸಂಪರ್ಕ ನೀಡಲಾಗುತ್ತದೆ. ಇದರಿಂದ ವೈದ್ಯರು ಸುಲಭವಾಗಿ ಕ್ಯಾನ್ಸರ್ ಗಡ್ಡೆಗಳನ್ನು ಪತ್ತೆ ಹಚ್ಚಬಹುದಾಗಿದೆ ಎಂದು ವಿಜ್ಞಾನಿಗಳ ತಂಡ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT