ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಕಿಂಗ್ಸ್ ಇಲೆವೆನ್‌ಗೆ ಗೆಲುವು

ಮಿಂಚಿದ ವೊಹ್ರಾ, ವಾರಿಯರ್ಸ್‌ಗೆ ನಿರಾಸೆ
Last Updated 7 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಪುಣೆ (ಪಿಟಿಐ): ಅಲ್ಪ ಮೊತ್ತದ ಗುರಿಯನ್ನು ಸುಲಭವಾಗಿ ಬೆನ್ನಟ್ಟಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಭಾನುವಾರ ನಡೆದ ಪುಣೆ ವಾರಿಯರ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಎಂಟು ವಿಕೆಟ್‌ಗಳ ಸುಲಭ ಗೆಲುವಿನ ಸವಿ ಕಂಡಿತು.

ಸುಬ್ರತೊ ರಾಯ್ ಸಹಾರಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆ್ಯಂಜಲೊ ಮ್ಯಾಥ್ಯೂಸ್ ನೇತೃತ್ವದ ಪುಣೆ ಬ್ಯಾಟಿಂಗ್ ಆಯ್ದುಕೊಂಡಿತು. ಆರಂಭಿಕ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ಸುಳಿಗೆ ಸಿಲುಕಿದ ಪುಣೆ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 99 ರನ್ ಮಾತ್ರ ಗಳಿಸಿತು. ಈ ಸುಲಭ ಗುರಿಯನ್ನು ಪ್ರೀತಿ ಜಿಂಟಾ ಮಾಲೀಕತ್ವದ ಕಿಂಗ್ಸ್ ಇಲೆವೆನ್ 12.2 ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು ತಲುಪಿತು.

ಮಿಂಚಿದ ವೊಹ್ರಾ: ಚೊಚ್ಚಲ ಟ್ವೆಂಟಿ-20 ಪಂದ್ಯವನ್ನಾಡಿದ ಚಂಡೀಗಡದ ಮನನ್ ವೊಹ್ರಾ ಪದಾರ್ಪಣೆ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ತೋರಿದರು.

ಪಂಜಾಬ್ ತಂಡದ ನಾಯಕ ಆ್ಯಡಮ್ ಗಿಲ್‌ಕ್ರಿಸ್ಟ್ (15, 10ಎಸೆತ, 2ಬೌಂಡರಿ, 1 ಸಿಕ್ಸರ್) ಹಾಗೂ ಮನ್‌ದೀಪ್ ಸಿಂಗ್ (31, 26ಎಸೆತ, 4ಬೌಂಡರಿ) ಉತ್ತಮ ಆರಂಭ ದೊರಕಿಸಿಕೊಟ್ಟರು. 19 ವರ್ಷದ ವೊಹ್ರಾ ಪಂಜಾಬ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಬಲಗೈ ಬ್ಯಾಟ್ಸ್‌ಮನ್ 28 ಎಸೆತಗಳಲ್ಲಿ 7 ಬೌಂಡರಿ ಸೇರಿದಂತೆ ಅಜೇಯ 43 ರನ್ ಸಿಡಿಸಿದರು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಪುಣೆ ಮೊದಲ ಓವರ್‌ನಿಂದಲೇ ಸಂಕಷ್ಟಕ್ಕೆ ಸಿಲುಕಿತು. `ಸೊನ್ನೆ' ಸುತ್ತಿದ ಮನೀಷ್ ಪಾಂಡೆ  ಪ್ರಥಮ ಓವರ್‌ನ ಕೊನೆಯ ಎಸೆತದಲ್ಲಿ ಪೆವಿಲಿಯನ್ ಸೇರಿಕೊಂಡರು. ತಿರುಮಲಶೆಟ್ಟಿ ಸುಮನ್ (6), ಮರ್ಲಾನ್ ಸ್ಯಾಮುಯೆಲ್ಸ್ (3), ನಾಯಕ ಆ್ಯಂಜಲೊ ಮ್ಯಾಥ್ಯೂಸ್ (4) ಕೂಡಾ ವಿಫಲರಾದರು. ಏಳನೇ ವಿಕೆಟ್ ಜೊತೆಯಾಟದಲ್ಲಿ ಅಭಿಷೇಕ್ ನಾಯರ್ (ಔಟಾಗದೆ 25) ಹಾಗೂ ಮಿಷೆಲ್ ಮಾರ್ಷ್ (15) 16 ಎಸೆತಗಳಲ್ಲಿ 25 ರನ್‌ಗಳನ್ನು ಕಲೆ ಹಾಕಿ ತಂಡವನ್ನು ನೂರು ರನ್‌ಗಳ ಸನಿಹ ತಂದರು.

ಸೋಲಿಗೆ ಅಂತ್ಯ ಹಾಡಿದ ಪಂಜಾಬ್: ಐಪಿಎಲ್ ಆರನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಪಂಜಾಬ್ ತಂಡ ಮೊದಲ ಪಂದ್ಯದ ಸೋಲಿನ ಪರಂಪರೆಗೆ ಅಂತ್ಯ ಹಾಡಿತು. ಈ ತಂಡ ಹಿಂದಿನ ಐದೂ ಐಪಿಎಲ್ ಆವೃತ್ತಿಯ ಮೊದಲ ಪಂದ್ಯಗಳಲ್ಲಿ ಗೆಲುವು ಪಡೆದಿರಲಿಲ್ಲ.

ಗೆಲುವಿಗೆ ನೋ ಬಾಲ್ ನೆರವು: ಪಂಜಾಬ್ ಅಮೋಘ ರೀತಿಯಲ್ಲಿ ಗೆಲುವಿನ ಕೊನೆಯ ರನ್ ಪಡೆದುಕೊಂಡಿತು. ಜಯಕ್ಕೆ ಒಂದು ರನ್ ಅಗತ್ಯವಿದ್ದಾಗ ಮಿಷೆಲ್ ಮಾರ್ಷ್ ಬೌಲಿಂಗ್‌ನಲ್ಲಿ ಹಸ್ಸಿ `ರೈಟ್ ಮಿಡ್‌ವಿಕೆಟ್' ಬಳಿ ಚೆಂಡನ್ನು ಬಾರಿಸಿದರು. ಹಸ್ಸಿ ಹೊಡೆತದ ಚೆಂಡನ್ನು ಟಿ. ಸುಮನ್ ಜಿಗಿದು ತೆಕ್ಕೆಗೆ ತಗೆದುಕೊಂಡರು. ಆಗ ಪುಣೆ ಪಾಳೆಯದಲ್ಲಿ ವಿಕೆಟ್ ಪಡೆದ ಖುಷಿ. ಆದರೆ, ರಿಪ್ಲೇಯಲ್ಲಿ ನೋಡಿದಾಗ ಆ ಎಸೆತ ನೋ ಬಾಲ್ ಆಗಿರುವುದು ಸ್ಟಷ್ಟವಾಗಿತ್ತು. ಅಂಪೈರ್ ಆಸ್ಟ್ರೇಲಿಯಾದ ಸಿಮೊನ್ ತೌಫುಲ್ ಇದನ್ನು ಗಮನಿಸಿರಲಿಲ್ಲ.

ನಂತರ ಅಂಪೈರ್ ನೋ ಬಾಲ್ ನೀಡಿದಾಗ ವಿಕೆಟ್ ಉರುಳಿಸಿದ ಖುಷಿಯಲ್ಲಿದ್ದ ಪುಣೆ ತಂಡದವರ ಮೊಗ ಬಾಡಿ ಹೋಯಿತು. ಪಂಜಾಬ್ ಗೆಲುವಿನ ಕೇಕೆ ಹಾಕಿತು.

ಸ್ಕೋರ್ ವಿವರ:
ಪುಣೆ ವಾರಿಯರ್ಸ್ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 99

ರಾಬಿನ್ ಉತ್ತಪ್ಪ ಬಿ  ಚಾವ್ಲಾ  19
ಮನೀಷ್ ಪಾಂಡೆ ಬಿ ಪ್ರವೀಣ್ ಕುಮಾರ್ 00
ತಿರುಮಲ ಶೆಟ್ಟಿ ಸುಮನ್ ಸಿ ಪ್ರವೀಣ್ ಕುಮಾರ್ ಬಿ ಅಜರ್ ಮಹಮ್ಮೂದ್  06
ಮರ್ಲಾನ್ ಸ್ಯಾಮುಯೆಲ್ಸ್ ರನ್‌ಔಟ್ (ಮನ್‌ದೀಪ್ ಸಿಂಗ್/ ಆ್ಯಡಮ್ ಗಿಲ್‌ಕ್ರಿಸ್ಟ್)
03
ರಾಸ್ ಟೇಲರ್ ಸಿ ಗುರಕೀರತ್ ಸಿಂಗ್ ಬಿ ಪ್ರವೀಣ್ ಕುಮಾರ್  15
ಆ್ಯಂಜಲೊ ಮ್ಯಾಥ್ಯೂಸ್ ಸಿ ಆ್ಯಡಮ್ ಗಿಲ್‌ಕ್ರಿಸ್ಟ್ ಬಿ ಪರ್ವಿಂದರ್ ಅವಾನಾ  04
ಅಭಿಷೇಕ್ ನಾಯರ್ ಔಟಾಗದೆ  25
ಮಿಷೆಲ್ ಮಾರ್ಷ್ ಬಿ ರ‌್ಯಾನ್ ಹ್ಯಾರಿಸ್  15
ಭುವನೇಶ್ವರ ಕುಮಾರ್ ಬಿ ಅಜರ್ ಮಹಮ್ಮೂದ್  08
ರಾಹುಲ್ ಶರ್ಮಾ ರನ್‌ಔಟ್ ರನ್‌ಔಟ್ (ಪಿಯೂಷ್ ಚಾವ್ಲಾ)  01
ಇತರೆ: (ಲೆಗ್ ಬೈ-2, ವೈಡ್-1) 03
ವಿಕೆಟ್ ಪತನ: 1-1 (ಪಾಂಡೆ; 0.6), 2-21 (ಸುಮನ್; 4.6), 3-29(ಸ್ಯಾಮುಯೆಲ್ಸ್; 7.4), 4-33 (ಉತ್ತಪ್ಪ; 8.6), 5-38 (ಮ್ಯಾಥ್ಯೂಸ್; 9.6), 6-53 (ಟೇಲರ್; 13.3), 7-78 (ಮಾರ್ಷ್; 16.1), 8-93 (ಭುವನೇಶ್ವರ್; 19.2), 9-99 (ಶಮಾ; 19.6).
ಬೌಲಿಂಗ್: ಪ್ರವೀಣ್ ಕುಮಾರ್ 4-0-31-2, ರ‌್ಯಾನ್ ಹ್ಯಾರಿಸ್ 4-0-12-1, ಅಜರ್ ಮಹಮ್ಮೂದ್ 4-0-19-2, ಪರ್ವಿಂದರ್ ಅವಾನಾ 4-0-16-1, ಪಿಯೂಷ್ ಚಾವ್ಲಾ 4-019-1.
ಕಿಂಗ್ಸ್ ಇಲೆವೆನ್ ಪಂಜಾಬ್ 12.2 ಓವರ್‌ಗಳಲ್ಲಿ 2 ವಿಕೆಟ್‌ಗೆ 100
ಆ್ಯಡಮ್ ಗಿಲ್‌ಕ್ರಿಸ್ಟ್ ಸಿ ಮರ್ಲಾನ್ ಸ್ಯಾಮುಯೆಲ್ಸ್  15
ಮನ್‌ದೀಪ್ ಸಿಂಗ್ ಬಿ ರಾಹುಲ್ ಶರ್ಮಾ
31
ಮನನ್ ವೊಹ್ರಾ ಔಟಾಗದೆ  43
ಡೇವಿಡ್ ಹಸ್ಸಿ ಔಟಾಗದೆ  08
ಇತರೆ: (ನೋ ಬಾಲ್-1, ವೈಡ್-2) 03
ವಿಕೆಟ್ ಪತನ: 1-21 (ಗಿಲ್‌ಕ್ರಿಸ್ಟ್; 2.2), 2-79 (ಮನ್‌ದೀಪ್; 9.4).
ಬೌಲಿಂಗ್: ಭುವನೇಶ್ವರ ಕುಮಾರ್ 2-0-16-0, ಅಶೋಕ್ ದಿಂಡಾ 2-0-28-0, ಆ್ಯಂಜಲೊ ಮ್ಯಾಥ್ಯೂಸ್ 2-0-12-1, ಮಿಷೆಲ್ ಮಾರ್ಷ್ 3.2-0-24-0, ರಾಹುಲ್ ಶರ್ಮಾ 3-0-20-1.
ಫಲಿತಾಂಶ: ಕಿಂಗ್ಸ್ ಇಲೆವೆನ್‌ಗೆ 8 ವಿಕೆಟ್ ಜಯ, ಪಂದ್ಯ ಶ್ರೇಷ್ಠ: ಮನನ್ ವೊಹ್ರಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT