ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾಡಳಿತದ ಸುಧಾರಣೆ ಹೇಗೆ ?

Last Updated 8 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಈಚೆಗಿನ ದಿನಗಳಲ್ಲಿ ಕ್ರೀಡಾಪಟುಗಳ ಸಾಮರ್ಥ್ಯ, ಸಾಧನೆಗಳಿಗಿಂತಲೂ ಕ್ರೀಡಾಡಳಿತಗಾರರ ನಡುವಣ ಕಿತ್ತಾಟ, ಅವರ ಆಟಾಟೋಪಗಳೇ ಎದ್ದು ಕಾಣಿಸುತ್ತಿವೆ. ಕರ್ನಾಟಕ ತಂಡವನ್ನು ರಾಷ್ಟ್ರೀಯ ಅಥ್ಲೆಟಿಕ್ಸ್‌ಗೆ ಕಳುಹಿಸುವುದಕ್ಕೆ ಸಂಬಂಧಿಸಿದಂತೆ ಕಂಡು ಬಂದ ವಿವಾದ ರಾಜ್ಯದ ಕ್ರೀಡಾರಂಗದ ಪ್ರತಿಯೊಬ್ಬರೂ ನಾಚಿ ತಲೆ ತಗ್ಗಿಸುವಂತಹದ್ದೇ ಆಗಿದೆ.

ರಾಜಕಾರಣಿಗಳು ಮತ್ತು ಕ್ರೀಡಾ ಲೋಕದ ಪರಿಚಯವೇ ಇಲ್ಲದವರು ಕ್ರೀಡಾಡಳಿತಗಾರರಾಗುವು­ದರಿಂದ ಇಂತಹ ಸಮಸ್ಯೆ ಉಂಟಾಗುತ್ತದೆ ಎಂದು ಬಹಳ ಮಂದಿ ಅಭಿಪಾ್ರಯ ಪಡುತ್ತಾರೆ. ಆದರೆ ಪ್ರಸಕ್ತ ಸಂದರ್ಭದಲ್ಲಿ ಮಾಜಿ ಕ್ರೀಡಾಪಟುಗಳೇ ಕ್ರೀಡಾಡಳಿತಗಾರರಾಗಿದ್ದು, ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ಮುಳುಗಿದ್ದಾರೆ.

ಹಾಗಿದ್ದರೆ ಕ್ರೀಡೆಗೆ ಪ್ರೋತ್ಸಾಹಕಾರಿಯಾಗಿರು­ವಂತಹ ಉತ್ತಮ ವಾತಾವರಣ ನಿರ್ಮಾಣವಾಗುವುದಾದರೂ ಹೇಗೆ ?

ಒಂದು ಪ್ರದೇಶದಲ್ಲಿ ಕ್ರೀಡಾ ಚಟುವಟಿಕೆಗಳು ಅತ್ಯುತ್ತಮ ಮಟ್ಟದ್ದಾಗಿರಬೇಕೆಂದರೆ ಅಲ್ಲಿ ಅರ್ಪಣಾ ಮನೋಭಾವದ ಕ್ರೀಡಾಪಟುಗಳು ಮತ್ತು ಕೋಚ್‌ಗಳಿರಬೇಕು. ಅಷ್ಟಿದ್ದರೆ ಸಾಲದು ಎಲ್ಲವನ್ನೂ ಸರಿತೂಗಿಸಿಕೊಂಡು ಹೋಗುವ ಕ್ರೀಡಾಡಳಿತಗಾರರು ಇರಬೇಕು.  ಕ್ರೀಡಾಭಿವೃದ್ಧಿಗೆ ಸಂಪನ್ಮೂಲ ಕ್ರೋಢೀಕರಣ ಮುಂತಾದ ಹಲವು ಜವಾಬ್ದಾರಿಗಳೂ ಇಂತಹ ಆಡಳಿತಗಾರರ ಮೇಲಿರುತ್ತದೆ.

ಇಂತಹ ಪರಿಸ್ಥಿತಿಯನ್ನು ತಹಬಂದಿಗೆ ತರಲು ಹೊಸ ಕ್ರೀಡಾ ಮಸೂದೆಯಲ್ಲಿ ಬಹಳಷ್ಟು ಅವಕಾಶಗಳಿವೆ ಎಂಬ ಮಾತೂ ಕೇಳಿ ಬರುತ್ತಿವೆ. ಅದರಲ್ಲಿ ಕ್ರೀಡಾಪಟುಗಳಿಗೆ ಹೆಚ್ಚು ಮನ್ನಣೆ ಇದೆ ಎನ್ನಲಾಗುತ್ತಿದೆ. ಆದರೆ ಕ್ರೀಡಾಪಟುಗಳ ಕೈಗೆ ಕ್ರೀಡಾಡಳಿತದ ಚುಕ್ಕಾಣಿ ಸಿಕ್ಕಿದರೆ ಎಲ್ಲವೂ ಸರಿ ಹೋಗುತ್ತದೆಯೇ ? ಪ್ರಸಕ್ತ ರಾಜ್ಯದಲ್ಲಿ ವಿವಾದದ ಕೇಂದ್ರ ಬಿಂದುವಾಗಿರುವ ರಾಜ್ಯ ಅಥ್ಲೆಟಿಕ್ಸ್‌ ಸಂಸೆ್ಥಯ ಆಡಳಿತಗಾರರೂ ಮಾಜಿ ಕ್ರೀಡಾಪಟುಗಳು ತಾನೆ.

ಕ್ರೀಡಾಪಟುಗಳಲ್ಲದ ಅದೆಷ್ಟೋ ಮಂದಿ ಈ ನಾಡಿನ ಕ್ರೀಡಾಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರಲ್ಲಾ. ರಾಜ್ಯದಲ್ಲಿ ಸರಿದಿಕ್ಕಿನಲ್ಲಿ  ಕ್ರೀಡಾಭಿವೃದ್ಧಿಯಾ­ಗಬೇಕಾದರೆ ಪ್ರಾಮಾಣಿಕ ವ್ಯಕ್ತಿಗಳು ಕ್ರೀಡಾಡಳಿತದ ಮುಂಚೂಣಿಗೆ ಬರಬೇಕು. ಅದು ಸಾಧ್ಯವೇ ?

ಕ್ರೀಡಾಡಳಿತ ಎನ್ನುವುದು ವಿವಾದದ ಕೇಂದ್ರವಾ­ಗುತ್ತಿದೆ. ಈ ಕುರಿತು ಓದುಗರ ಪತ್ರವೊಂದನ್ನು ಇಲ್ಲಿ ನೀಡುತ್ತಿದ್ದೇವೆ. ಸಂವಾದದಲ್ಲಿ ನೀವೂ ಪಾಲ್ಗೊಳ್ಳಿ. ನಿಮ್ಮ ಅಭಿಪ್ರಾಯಗಳನ್ನು ಈ ಕೆಳಗಿನ ವಿಳಾಸಕ್ಕೆ ಬರೆದು ಕಳುಹಿಸಿ.
ಸಂಪಾದಕರು, ಪ್ರಜಾವಾಣಿ, ಕ್ರೀಡಾ ವಿಭಾಗ, ನಂ–75, ಎಂ.ಜಿ.ರಸೆ್ತ, ಬೆಂಗಳೂರು– 560001
email: kreede@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT