ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಲೌಡ್ ತಂತ್ರಜ್ಞಾನಕ್ಕೆ ಸುರಕ್ಷತೆ ಭೀತಿ

Last Updated 16 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಸಾಮಾನ್ಯ ಗಣಕಯಂತ್ರದಲ್ಲಿ ಪಡೆಯಬಹುದಾದ ಎಲ್ಲ ಸೌಲಭ್ಯಗಳನ್ನು ವೆಬ್ ಬ್ರೌಸರ್ ಮೂಲಕ `ಬಾಡಿಗೆ~ ರೂಪದಲ್ಲಿ ಎಲ್ಲಿ ಬೇಕೆಂದರಲ್ಲಿ ಪಡೆಯಬಹುದಾದ `ಕ್ಲೌಡ್ ಕಂಪ್ಯೂಟಿಂಗ್~ ತಂತ್ರಜ್ಞಾನ ಅಂದುಕೊಂಡಷ್ಟು ಜನಪ್ರಿಯತೆ  ಗಳಿಸಿಲ್ಲ  ಎಂಬುದು `ವಿಪ್ರೊ~ ಮತ್ತು `ಟಿಎಲ್‌ಜಿ~ ಕಂಪೆನಿ ನಡೆಸಿದ ಸಮೀಕ್ಷೆಯಿಂದ ಸ್ಪಷ್ಟ.

`ಕ್ಲೌಡ್~ ತಂತ್ರಜ್ಞಾನ ನಿರ್ವಹಣೆ ದುಬಾರಿ ಮತ್ತು ಸುರಕ್ಷತೆ ಕುರಿತು ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮ ಸಂಸ್ಥೆಗಳಿಗೆ (ಎಂಎಸ್‌ಎಂಇ) ಇನ್ನೂ ಅನುಮಾನ ಇರುವುದಿಂದ ಮಾರುಕಟ್ಟೆ ವಿಸ್ತರಣೆಗೆ ಹಿನ್ನಡೆ ಆಗಿದೆ.
 
ಮಾಹಿತಿ ತಂತ್ರಜ್ಞಾನ ಮೂಲಸೌಕರ್ಯ ಅಗತ್ಯವಿಲ್ಲದ ಈ ತಂತ್ರಜ್ಞಾನ ಇಡೀ ಉದ್ಯಮವನ್ನೇ ಬದಲಿಸಲಿದೆ ಎಂದು ಆರಂಭದಲ್ಲಿ ವಿಶ್ಲೇಷಿಸಲಾಗಿತ್ತು. ಆದರೆ, `ಕ್ಲೌಡ್~ ಬಗ್ಗೆ ಉದ್ಯಮ ಮತ್ತು ಸೇವಾ ವಲಯ ಅಷ್ಟೊಂದು ಆಸಕ್ತಿ ವ್ಯಕ್ತಪಡಿಸಿಲ್ಲ. 

 ಸಮೀಕ್ಷೆಗೆ ಒಳಪಟ್ಟ 100 ಕಂಪೆನಿಗಳಲ್ಲಿ ಶೇ 43ರಷ್ಟು ಕಂಪೆನಿಗಳು `ಕ್ಲೌಡ್~ ತುಂಬಾ ದುಬಾರಿ. ಈ ಸೌಲಭ್ಯಕ್ಕಾಗಿ ಹೂಡಿಕೆ ಮಾಡುವ ಮೊದಲು ಇನ್ನಷ್ಟು ಯೋಚಿಸುವ ಅಗತ್ಯ ಇದೆ ಎಂದಿವೆ.

ಕ್ಲೌಡ್ ತಂತ್ರಜ್ಞಾನ ನಿರ್ವಹಣೆಗೆ ಸಂಬಂಧಿಸಿದ ಲೋಪಗಳಿಂದ ಮಾರುಕಟ್ಟೆ ಪಾಲನ್ನು ಕಳೆದುಕೊಳ್ಳುವ ಭೀತಿ ಇದೆ ಎಂದು ಶೇ 40ರಷ್ಟು `ಎಂಎಸ್‌ಎಂಇ~ಗಳು ಹೇಳಿವೆ. ಶೇ 50ರಷ್ಟು ಕಂಪೆನಿಗಳು `ಸುರಕ್ಷತೆ~ ಬಗ್ಗೆ ಆತಂಕ ವ್ಯಕ್ತಪಡಿಸಿವೆ.

ಆದರೆ, ಮಾಹಿತಿ ತಂತ್ರಜ್ಞಾನ, ಮೂಲಸೌಕರ್ಯ  ಸೇರಿದಂತೆ ಹಲವು ವಲಯದ ಬೃಹತ್ ಕಂಪೆನಿಗಳು `ಕ್ಲೌಡ್~ ಸೇವೆ ವಿಸ್ತರಿಸಲು ಮುಂದೆ ಬಂದಿವೆ ಎಂದು `ವಿಪ್ರೊ~ ಸಂಸ್ಥೆಯ ತಾಂತ್ರಿಕ ಮುಖ್ಯಸ್ಥ ಅನುರಾಗ್ ಶ್ರೀವಾಸ್ತವ   ಅಭಿಪ್ರಾಯಪಟ್ಟಿದ್ದಾರೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT