ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಮೆ ಯಾಚಿಸಿದ ಶಾಸಕ ಚಿಕ್ಕಣ್ಣ

Last Updated 10 ಜನವರಿ 2012, 19:10 IST
ಅಕ್ಷರ ಗಾತ್ರ

ಬೆಂಗಳೂರು: `ಅರಣ್ಯ ಇಲಾಖೆಯವರು ಕಳ್ಳರನ್ನು ರಕ್ಷಿಸಿ, ಪೋಷಿಸುತ್ತಾರೆ~ ಎಂಬ ಆರೋಪಿಸಿದ ಹೆಗ್ಗಡದೇವನಕೋಟೆ ಶಾಸಕ ಚಿಕ್ಕಣ್ಣ, ನಂತರ ಅಧಿಕಾರಿಗಳ ಕ್ಷಮೆ ಯಾಚಿಸಿದ ಘಟನೆ ಸೋಮವಾರ ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಜರುಗಿತು.

ಅರಣ್ಯವಾಸಿಗಳ ಪುನರ್ವಸತಿ, ಪರಿಹಾರ ಒದಗಿಸುವುದು ಮತ್ತು ಹಾಡಿಗಳಿಗೆ ಮೂಲಸೌಕರ್ಯ ಒದಗಿಸುವ ಸಂಬಂಧ ಸಚಿವರಾದ ಸಿ.ಪಿ.ಯೋಗೇಶ್ವರ್ ಮತ್ತು ಎ.ನಾರಾಯಣಸ್ವಾಮಿ ನೇತೃತ್ವದಲ್ಲಿ ಸಭೆ ನಡೆಯಿತು. ಅರಣ್ಯವಾಸಿಗಳ ಮೇಲಿನ ಮೊಕದ್ದಮೆಗಳ ಕುರಿತು ಸಭೆಯಲ್ಲಿ ಪ್ರಸ್ತಾಪವಾದಾಗ ಚಿಕ್ಕಣ್ಣ ಅವರು, ಇಂತಹ ವಿವಾದಾತ್ಮಕ ಹೇಳಿಕೆ ನೀಡಿದರು.

ಹೆಗ್ಗಡದೇವನಕೋಟೆಯ ಅಂತರಸಂತೆ ಅರಣ್ಯ ವಲಯದಲ್ಲಿ ಕಾಡುಗಳ್ಳರ ಮೇಲೆ ಇತ್ತೀಚೆಗೆ ಅರಣ್ಯ ಇಲಾಖೆ ಸಿಬ್ಬಂದಿ ಗುಂಡು ಹಾರಿಸಿದ ಘಟನೆಯನ್ನು ಪ್ರಸ್ತಾಪಿಸಿದ ಶಾಸಕರು, `ಅಮಾಯಕರ ಮೇಲೆ ಗುಂಡಿನ ದಾಳಿ ನಡೆದಿದೆ. ತಕ್ಷಣವೇ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು~ ಎಂದು ಆಗ್ರಹಿಸಿದರು. ಆದರೆ, ಅವರ ವಾದವನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ವಿರೋಧಿಸಿದರು.
ಮತ್ತೆ ಅಧಿಕಾರಿಗಳ ಮೇಲೆ ಹರಿಹಾಯ್ದ ಚಿಕ್ಕಣ್ಣ, `ಅರಣ್ಯ ಇಲಾಖೆಯವರು ಕಳ್ಳರ ಜೊತೆ ಕೈಜೋಡಿಸುತ್ತಾರೆ~ ಎಂದು ದೂರಿದರು. ಆಗ ಸಿಟ್ಟಿಗೆದ್ದ ಮುಖರ್ಜಿ, `ಹಾಗೆಲ್ಲ ಮಾತನಾಡಬೇಡಿ. ನಿರ್ದಿಷ್ಟ ಪ್ರಕರಣ, ದಾಖಲೆ ಆಧಾರದಲ್ಲಿ ಮಾತನಾಡಿ. ಸುಮ್ಮನೆ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಆರೋಪ ಮಾಡಬೇಡಿ~ ಎಂದು ತಿರುಗೇಟು ನೀಡಿದರು. ಯೋಗೇಶ್ವರ್ ಕೂಡ ಮುಖರ್ಜಿ ಬೆಂಬಲಕ್ಕೆ ನಿಂತರು. ಕೊನೆಗೆ ಚಿಕ್ಕಣ್ಣ ಅವರು ಅಧಿಕಾರಿಗಳ ಕ್ಷಮೆ ಕೇಳಿ, ತಮ್ಮ ಹೇಳಿಕೆಯನ್ನು ವಾಪಸು ಪಡೆದುಕೊಂಡರು. ಅಷ್ಟರಲ್ಲಿ ಈ ವಿವಾದಕ್ಕೆ ತೆರೆಬಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT