ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಭೀರವಾದ ಅಂಶ

Last Updated 13 ಡಿಸೆಂಬರ್ 2012, 19:40 IST
ಅಕ್ಷರ ಗಾತ್ರ

ರಾಷ್ಟ್ರಪತಿ ಚುನಾವಣೆಯಲ್ಲಿ ಸೋಲನುಭವಿಸಿ ಸುಪ್ರೀಂ ಕೋರ್ಟ್‌ನ ಮೊರೆ ಹೋಗಿದ್ದ, ಮಾಜಿ ಲೋಕಸಭಾ ಸ್ಪೀಕರ್ ಪಿ. ಎ. ಸಂಗ್ಮಾ ಸಲ್ಲಿಸಿದ್ದ ತಕರಾರು ಅರ್ಜಿಯನ್ನು, ಸುಪ್ರೀಂಕೋರ್ಟ್ ನ್ಯಾಯಪೀಠವು ತಳ್ಳಿ ಹಾಕಿರುವ ವಿಷಯ, ಈಗ ಚಿಂತನಾರ್ಹ ಮಾತ್ರವಲ್ಲದೆ, ಗಂಭೀರ ವಿಷಯವೂ ಆಗಿದೆ. 
ಈ ಪ್ರಕರಣದಲ್ಲಿ ಅತ್ಯಂತ ಗಂಭೀರವಾದ ಕಾನೂನಿನ ಎರಡು ಅಂಶಗಳನ್ನು ಗಮನಿಸಬೇಕು.

ಮೊದಲನೆಯದಾಗಿ, ಲಾಭದಾಯಕ ಹುದ್ದೆಯಲ್ಲಿದ್ದ ಪ್ರಣವ್ ಮುಖರ್ಜಿ ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಲು ಅರ್ಹರಲ್ಲವೆಂಬ ಪಿ. ಎ. ಸಂಗ್ಮಾ ಅವರ ವಾದವನ್ನು ತಳ್ಳಿಹಾಕಲಾಗಿದೆ. ಏಕೆಂದರೆ ಆರ್ಥಿಕವಾಗಿ ಲಾಭ ಬರುವ ಮತ್ತು ಮುಖ್ಯವಾಗಿ ನೇಮಕಾತಿ ಅಧಿಕಾರವನ್ನು ಹೊಂದಿರುವ ಸರ್ಕಾರಿ ಹುದ್ದೆಗಳನ್ನು ಮಾತ್ರ, ಲಾಭದಾಯಕ ಸರ್ಕಾರಿ ಹುದ್ದೆ ಎಂದು ಪರಿಗಣಿಸಬೇಕೇ ಹೊರತು, ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆಯ ಅಧ್ಯಕ್ಷ ಹುದ್ದೆಯಲ್ಲಿದ್ದ ಪ್ರಣವ್ ಮುಖರ್ಜಿ ಅವರನ್ನು ಸರ್ಕಾರಿ ಹುದ್ದೆಯ ಪಟ್ಟಿಗೆ ತರಲು ಸಾಧ್ಯವಿಲ್ಲ ಎಂಬುದು ಡಿಫೆನ್ಸ್ ಕೌನ್ಸೆಲ್‌ನ ಬಲವಾದ ಪ್ರತಿವಾದ.

ಮೂವರು ನ್ಯಾಯಾಧೀಶರ ಬಹುಮತದಿಂದ, ಪಿ. ಎ. ಸಂಗ್ಮಾ ಅವರ ತಕರಾರು ಅರ್ಜಿಯನ್ನು ತಳ್ಳಿಹಾಕಿರುವುದು, ಮತ್ತೊಂದು ಅಷ್ಟೇ ಗಮನಾರ್ಹವಾದ ಸಂಗತಿ. ಮೂಲತಃ ಒಂದು ಬುಡಕಟ್ಟು ಜನಾಂಗದಿಂದ ಬಂದವರಾದ ಪಿ. ಎ. ಸಂಗ್ಮಾ ಅವರನ್ನು, ಲೋಕಸಭಾ ಅಧ್ಯಕ್ಷರ ಸ್ಥಾನಕ್ಕೆ ತಂದು ಗೌರವಿಸಿದ್ದೇ ಕಾಂಗ್ರೆಸ್ ಪಕ್ಷ.

ಆದರೆ, ಪಕ್ಷ ನಿಷ್ಠೆಯೇ ಇಲ್ಲದ ಪಿ. ಎ. ಸಂಗ್ಮಾ ಅವರಿಗೆ, ನಾಯಕ ವ್ಯಕ್ತಿತ್ವ ಹೇಗೆ ಸಾಧ್ಯವೆಂಬುದು ತೀರಾ ಸರಳವಾದ ರಾಜನೈತಿಕ ಪ್ರಶ್ನೆಯೇ ಅಲ್ಲವೆ? ನಾಯಕ ವ್ಯಕ್ತಿತ್ವವೇ ಇಲ್ಲದ ಇಂಥವರು, ಶೋಷಿತ ವರ್ಗಗಳಿಗೆ ಯಾವ ರೀತಿಯ ನಾಯಕತ್ವ ನೀಡಲು ಸಾಧ್ಯ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT