ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುಭವನ ನಿರ್ಮಾಣಕ್ಕೆ ನಿರ್ಧಾರ

Last Updated 19 ಫೆಬ್ರುವರಿ 2011, 7:40 IST
ಅಕ್ಷರ ಗಾತ್ರ

ರಾಣೆಬೆನ್ನೂರು: ವೀರಶೈವ ಪಂಚಮಸಾಲಿ ಪೀಠದ 4ನೇ ವರ್ಷದ ಪೀಠಾರೋಹಣ ಮಹೋತ್ಸಹವನ್ನು  ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನಲ್ಲಿ ನಡೆಸಲು ಸಭೆ ತೀರ್ಮಾನ ಕೈಗೊಂಡಿದೆ ಎಂದು ಚರ ಪೀಠಾಧಿಪತಿ ಸಿದ್ಧಲಿಂಗೇಶ್ವರ ಸ್ವಾಮೀಜಿ ಹೇಳಿದರು. ನಗರದಲ್ಲಿ ಶುಕ್ರವಾರ ನಡೆದ ವೀರಶೈವ ಪಂಚಮಸಾಲಿ ಸಮಾಜದ ಗುರುಗಳ 3ನೇ ವರ್ಷದ ಪೀಠಾರೋಹಣ ಮಹೋತ್ಸಹದ ಸಮಾವೇಶದಲ್ಲಿ ಅವರು  ಮಾತನಾಡಿದರು.

ಪೀಠಾರೋಹಣ ಮಹೋತ್ಸವಕ್ಕೆ ಸಂಗ್ರಹಿಸಿದ ಹಣದಲ್ಲಿ ರಾಣೆಬೆನ್ನೂರು ನಗರಸಭೆಯವರು ನೀಡಿದ 39 ಗುಂಟೆ ನಿವೇಶನದಲ್ಲಿ ಉಚಿತ ಪ್ರಸಾದ ನಿಲಯ ಮತ್ತು ಗುರುಭವನ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದರು. ಮುದ್ದಬಿಹಾಳದ ಶರಣಬಸವ ಹತ್ತಿ, ಜಮಖಂಡಿಯ ಡಾ. ಸಂಗಮೇಶ ಬಿರಾದಾರ, ಸಿಂಧನೂರಿನ ಎಸ್.ಎಸ್. ಪಾಟೀಲ, ದಾವಣಗೆರೆ ಎಂ ದೊಡ್ಡಪ್ಪ ಅವರಿಗೆ ಶ್ರೀಗಳು ‘ಪಂಚಮಶ್ರೀ’ ಪ್ರಶಸ್ತಿ ವಿತರಿಸಿದರು.

ಬಿ.ಸಿ. ನಿಜಲಿಂಗಪ್ಪ, ವೈಚಾರಿಕತೆಗೆ ವೀರಭದ್ರಪ್ಪ ಖನಗಾಂವ, ಬೈಚಾಳ, ನಂಜೇಗೌಡ ಮಾಸ್ತರ, ಸಿ.ಎನ್. ನಡರಾಜ, ದೇಶಿ ಬೀಜ ಸಂರಕ್ಷಣೆಗಾಗಿ ರೇಣುಕಾ ಶೆಟ್ಟೆಣ್ಣನವರ, ಜಾನಪದ ಕ್ಷೇತ್ರದ ಕೊಗಳಿ ಕೊಟ್ರೇಶ, ಸಾವಯವ ಕ್ಷೇತ್ರದ ಹನುಮಂತಪ್ಪ ಕಾರಗಿ, ಸಂಘಟನೆ ಕ್ಷೇತ್ರದ ಗವಿಸಿದ್ದಪ್ಪ ಕರ್ಕಿಹಳ್ಳಿ ಮತ್ತು ಮುಕ್ಕನಗೌಡ, ಅತ್ಯುತ್ತಮ ಕಬ್ಬು ಬೆಳೆಗಾರರಾದ ಮಹಾಂತೇಶ ಖರಗಿ, ಸಹಕಾರ ಕ್ಷೇತ್ರ ಶ್ರೀಮಂತ ಇಂಡಿ, ಸಿದ್ದು ಆತನೂರು, ಜಿ.ಬಿ.ಕೌಜಲಗಿ, ಎಸ್.ಎಚ್. ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಸಾನ್ನಿಧ್ಯ ವಹಿಸಿದ ಸ್ಥಿರ ಪೀಠಾಧ್ಯಕ್ಷ ಡಾ.ಮಹಾಂತ ಸ್ವಾಮೀಜಿ ಆಶೀರ್ವಚನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT