ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರರಸಿಕರ ಎಕ್ಸ್‌ಪ್ರೆಸ್!

Last Updated 9 ಜೂನ್ 2011, 19:30 IST
ಅಕ್ಷರ ಗಾತ್ರ

`ಎಲ್ಲರನ್ನೂ ಒಲೈಸುವ, ತೃಪ್ತಿಪಡಿಸುವ ದೃಷ್ಟಿಯಿಂದ ಪ್ರಶಸ್ತಿ ಕೊಡಬೇಡಿ. ಸೀಮಿತ ವಿಭಾಗಗಳಿಗೆ ಮಾತ್ರ ಅರ್ಹರನ್ನು ಹುಡುಕಿ ಪ್ರಶಸ್ತಿ ಕೊಡಿ. ಆಗ ಮಾತ್ರ ಆ ಪ್ರಶಸ್ತಿಗೊಂದು ಗೌರವ ಬರಲು ಸಾಧ್ಯ~ ಎಂದರು ರಾಘವೇಂದ್ರ ರಾಜಕುಮಾರ್.

ಸುವರ್ಣ ಚಾನಲ್ ನೀಡುವ ಮೂರನೇ ಚಲನಚಿತ್ರ ಪ್ರಶಸ್ತಿ ಪ್ರಕ್ರಿಯೆ ಆರಂಭದ ಸಂದರ್ಭದಲ್ಲಿ ಅವರು ಚಾನಲ್‌ನ ಮುಖ್ಯಸ್ಥರೊಂದಿಗೆ ವೇದಿಕೆ ಮೇಲಿದ್ದರು.

`ಫಿಲಂಫೇರ್ ಮಟ್ಟಕ್ಕೆ ಒಂದು ಪ್ರಶಸ್ತಿ ಏರಬೇಕೆಂದರೆ ಪಾರದರ್ಶಕತೆ ಎಂಬುದು ಮುಖ್ಯ ಎಂದ~ ರಾಘವೇಂದ್ರ ರಾಜಕುಮಾರ್ ಅವರಿಗೆ ಸುವರ್ಣ ಪ್ರಶಸ್ತಿಗಳನ್ನು ಆರಿಸುತ್ತಿರುವ ತೀರ್ಪುಗಾರರು ಇಷ್ಟವಾಗಿದ್ದಾರೆ. ಈ ಸಲಹೆಗಳನ್ನು ಪರಿಗಣಿಸುವುದಾಗಿ ಹೇಳಿದ ವಾಹಿನಿಯ ಅಧಿಕಾರಿ ಅನೂಪ್ ಚಂದ್ರಶೇಖರ್, ಸಿನಿಮಾ ಮತ್ತು ಟಿವಿ ಎರಡೂ ಹೇಗೆ ಅವಲಂಬಿತ ಕ್ಷೇತ್ರಗಳು ಎಂಬುದನ್ನು ವಿವರಿಸಿದರು.

`ರಾಜ್ಯದಾದ್ಯಂತ ನಮ್ಮ ವಾಹನ ಚಲಿಸುತ್ತದೆ. ಸಂಚಾರಿ ಮತಗಟ್ಟೆ ಮೂಲಕ ಪ್ರೇಕ್ಷಕರಿಂದ ಮತ ಸಂಗ್ರಹಿಸಿ ಪ್ರೇಕ್ಷಕರ ಮೆಚ್ಚುಗೆ ವಿಭಾಗದ ಪ್ರಶಸ್ತಿಗಳನ್ನು ಕೊಡಲಾಗುವುದು. ಜನರಿಂದ ಮತಸಂಗ್ರಹ ನಡೆಯುತ್ತದೆ. ಎಸ್‌ಎಂಎಸ್ ಮೂಲಕವೂ ಆಯ್ಕೆ ಪ್ರಕ್ರಿಯೆ ನಡೆಸಿ ಪ್ರಶಸ್ತಿ ನೀಡಲಾಗುವುದು~ ಎಂದ ಅವರಿಗೆ ತಮ್ಮದು ರಾಷ್ಟ್ರಮಟ್ಟದ ಪ್ರಶಸ್ತಿಯಾಗಬೇಕು ಎನ್ನುವ ಆಸೆ.

ಆಸ್ಕರ್ ಮಟ್ಟಕ್ಕೆ ತಮ್ಮ ಪ್ರಶಸ್ತಿಯನ್ನು ರೂಪಿಸುವುದಾಗಿ ಆತ್ಮವಿಶ್ವಾಸ ವ್ಯಕ್ತಪಡಿಸಿದವರು ಚಾನಲ್‌ನ ರಾಘವೇಂದ್ರ ಹುಣಸೂರು.

ತೀರ್ಪುಗಾರರಲ್ಲಿ ಒಬ್ಬರಾದ ದ್ವಾರಕೀಶ್- `ಯುವಕರು ರೂಪಿಸಿರುವ ಸಿನಿಮಾಗಳನ್ನು ನೋಡಿ ಯುವಕನಾಗಿ ಹೋಗಿದ್ದೇನೆ~ ಎಂದು ನಗಿಸಿದರು. ಬಳಿಕ ಸೂಕ್ತರಿಗೆ ಪ್ರಶಸ್ತಿ ನೀಡುವುದಾಗಿ ಭರವಸೆ ನೀಡಿದ ಅವರು ಪ್ರಶಸ್ತಿಗಳ ಅಗತ್ಯವನ್ನು ಸೂಚ್ಯವಾಗಿ ತಿಳಿಸಿದರು.
 
ಮತ್ತೊಬ್ಬ ತೀರ್ಪುಗಾರರಾದ ನಟಿ ತಾರಾ ತಮಗೆ ಸಿಕ್ಕಿರುವ ಆಯ್ಕೆಯ ಸ್ವಾತಂತ್ರ್ಯವನ್ನು ಕೊಂಡಾಡಿದರು. `ಪ್ರಶಸ್ತಿ ಪ್ರಕಟವಾದ ನಂತರವೂ ತಾವು ದೈಹಿಕವಾಗಿ ಮತ್ತು ಮಾನಸಿಕವಾಗಿ ಸುಸ್ಥಿತಿಯಲ್ಲಿ ಇರುವ ನಂಬಿಕೆ ಇದೆ~ ಎಂದು ಮುಗುಳ್ನಕ್ಕರು. ಜೋಗಿ ಇನ್ನೊಬ್ಬ ತೀರ್ಪುಗಾರರು. ಅವರು ಅರ್ಹರಿಗೆ ಪ್ರಶಸ್ತಿ ಕೊಟ್ಟು ನಂಬಿಕೆ ಉಳಿಸಿಕೊಳ್ಳುವ ಮಾತನಾಡಿದರು.

ಈ ಸಂದರ್ಭದಲ್ಲಿ ಪ್ರೇಕ್ಷಕರು ಆಯ್ಕೆ ಮಾಡುವ ಕಾಗದದ ಪ್ರತಿಗಳನ್ನು ರಾಘವೇಂದ್ರ ರಾಜ್‌ಕುಮಾರ್ ಬಿಡುಗಡೆ ಮಾಡಿದರೆ, ಅಭಿಪ್ರಾಯ ಸಂಗ್ರಹಿಸುವ ವಾಹನ `ಚಿತ್ರರಸಿಕರ ಎಕ್ಸ್‌ಪ್ರೆಸ್~ಗೆ ಗೃಹ ಸಚಿವ ಆರ್.ಅಶೋಕ್ ಸಚಿವ ಹಸಿರು ನಿಶಾನೆ ತೋರಿದರು.
ಜೂನ್ 25ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT