ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುಟುಕು ಗುಟುಕು

Last Updated 11 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಕ್ರಿಕೆಟ್: ಭರತ್ ಕೊಂಡಜ್ಜಿಗೆ ಐದು ವಿಕೆಟ್
ಬೆಂಗಳೂರು: ಭರತ್ ಕೊಂಡಜ್ಜಿ (15ಕ್ಕೆ5) ಹಾಗೂ ಶೇಖರ್ (17ಕ್ಕೆ4) ಅವರ ಪ್ರಭಾವಿ ಬೌಲಿಂಗ್ ನೆರವಿನಿಂದ ಮರ್ಚೆಂಟ್ಸ್ ಕ್ರಿಕೆಟ್ ಕ್ಲಬ್ (1) ತಂಡವು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಮೊದಲ ಗುಂಪಿನ ನಾಲ್ಕನೇ ಡಿವಿಷನ್ ಲೀಗ್ ಪಂದ್ಯದಲ್ಲಿ 8 ವಿಕೆಟ್‌ಗಳ ಅಂತರದಿಂದ ಕೋಲಾರದ ಯಂಗ್ ಬಾಯ್ಸ ವಿರುದ್ಧ ವಿಜಯ ಸಾಧಿಸಿತು.

ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಯಂಗ್ ಬಾಯ್ಸ ತಂಡ 22.5 ಓವರುಗಳಲ್ಲಿ ಕೇವಲ 68 ರನ್ ಗಳಿಸಿ ಆಲ್‌ಔಟ್ ಆಯಿತು. ಗೆಲುವಿನ ಗುರಿಯನ್ನು ಬೆನ್ನಟ್ಟಿದ ಮರ್ಚೆಂಟ್ಸ್ 10.1 ಓವರುಗಳಲ್ಲಿ 2 ವಿಕೆಟ್ ಮಾತ್ರ ಕಳೆದುಕೊಂಡು 69 ರನ್ ಗಳಿಸಿತು.

ಸಂಕ್ಷಿಪ್ತ ಸ್ಕೋರ್: ಕೋಲಾರದ ಯಂಗ್ ಬಾಯ್ಸ: 22.5 ಓವರುಗಳಲ್ಲಿ 68 (ಬಿ. ಶಿವಕುಮಾರ್ 29; ಭರತ್ ಕೊಂಡಜ್ಜಿ 15ಕ್ಕೆ5, ಶೇಖರ್ 17ಕ್ಕೆ4); ಮರ್ಚೆಂಟ್ಸ್ ಕ್ರಿಕೆಟ್ ಕ್ಲಬ್ (1): 10.2 ಓವರುಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 69 (ತೋಷ್ ಔಟಾಗದೆ 26, ಕೆ.ಎಸ್.ಟಿ. ಸಾಯಿ ಔಟಾಗದೆ 36).

ಕ್ರಿಕೆಟ್: ಫೈನಲ್‌ಗೆ ಭಾರತ ರೆಡ್ ತಂಡ
ನಾಗಪುರ (ಪಿಟಿಐ):
ಯೂಸುಫ್ ಪಠಾಣ್ (25ಕ್ಕೆ4) ಅವರ ಪ್ರಭಾವಿ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ರೆಡ್ ತಂಡದವರು ಎನ್.ಕೆ.ಪಿ. ಸಾಳ್ವೆ ಚಾಲೆಂಜರ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಮಂಗಳವಾರದ ಪಂದ್ಯದಲ್ಲಿ ಭಾರತ ಗ್ರೀನ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿ ಫೈನಲ್ ತಲುಪಿದ್ದಾರೆ.

ಭಾರತ ಗ್ರೀನ್ ತಂಡವು 37.5 ಓವರುಗಳಲ್ಲಿ 170 ರನ್ ಗಳಿಸಿತು. ಆದರೆ ಪಂದ್ಯಕ್ಕೆ ಮಳೆ ಅಡಚಣೆ ಉಂಟು ಮಾಡಿದ ಕಾರಣ ಡಕ್ವರ್ತ್ ಲೂಯಿಸ್ ನಿಯಮ ಅಳವಡಿಸಲಾಯಿತು. ಈ ನಿಯಮದ ಪ್ರಕಾರ ರೆಡ್ ತಂಡಕ್ಕೆ 42 ಓವರ್‌ಗಳಲ್ಲಿ 152 ರನ್ ಗಳಿಸುವ ಗುರಿ ನೀಡಲಾಯಿತು. ಈ ಮೊತ್ತವನ್ನು ಗಂಭೀರ್ ಪಡೆ 29 ಓವರುಗಳಲ್ಲಿ 2 ವಿಕೆಟ್ ಕಳೆದುಕೊಂಡು ತಲುಪಿತು.

ಸಂಕ್ಷಿಪ್ತ ಸ್ಕೋರ್: ಭಾರತ ಗ್ರೀನ್: 37.5 ಓವರುಗಳಲ್ಲಿ 170 (ರಾಬಿನ್ ಉತ್ತಪ್ಪ 56, ಶ್ರೀಕಾಂತ್ ಅನಿರುಧ್ 37, ಮೊಹಮ್ಮದ್ ಕೈಫ್ 29, ಮುರಳೀಧರನ್ ಗೌತಮ್ 19, ಅಭಿಮನ್ಯು ಮಿಥುನ್ 10; ಯೂಸುಫ್ ಪಠಾಣ್ 25ಕ್ಕೆ4); ಭಾರತ ರೆಡ್: 29 ಓವರುಗಳಲ್ಲಿ 2 ವಿಕೆಟ್ ನಷ್ಟಕ್ಕೆ 152 (ಅಭಿನವ್ ಮುಕುಂದ್ 61, ಗೌತಮ್ ಗಂಭೀರ್ 57). ಫಲಿತಾಂಶ: ಭಾರತ ರೆಡ್‌ಗೆ 8 ವಿಕೆಟ್ ಜಯ.

ಮುಂಬೈ ಇಂಡಿಯನ್ಸ್‌ಗೆ ಅಪಾರ ಅಭಿಮಾನಿಗಳು!
ಕೋಲ್ಕತ್ತ (ಪಿಟಿಐ):
ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಟೂರ್ನಿ ಗೆದ್ದ ಮುಂಬೈ ಇಂಡಿಯನ್ಸ್ ತಂಡವು ಫೇಸ್‌ಬುಕ್ ಸಾಮಾಜಿಕ ಜಾಲತಾಣದಲ್ಲಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸುವ ಮೂಲಕ ನಂಬರ್-1 ಸ್ಥಾನವನ್ನು ಗಿಟ್ಟಿಸಿಕೊಂಡಿದೆ.

ಐಪಿಎಲ್ ಫ್ರಾಂಚೈಸಿಗಳಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಫೇಸ್‌ಬುಕ್‌ನಲ್ಲಿ ಗಳಿಸಿರುವ ಇಂಡಿಯನ್ಸ್ ವಿಶಿಷ್ಟ ಗೌರವ ಪಡೆದುಕೊಂಡಿದೆ. ಈಗಾಗಲೇ 22 ಲಕ್ಷ ಜನರು ಈ ತಂಡದ ಅಭಿಮಾನಿಗಳಾಗಿ ನೋಂದಾಯಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT