ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಕೇಂದ್ರಕ್ಕೂ ಕುಡಿಯುವ ನೀರಿನ ಸಮಸ್ಯೆ

Last Updated 12 ಸೆಪ್ಟೆಂಬರ್ 2011, 8:50 IST
ಅಕ್ಷರ ಗಾತ್ರ

ರಾಯಚೂರು: ಸುಮಾರು ದೂರ ನಡೆದುಕೊಂಡು ಇಲ್ಲವೇ ಸೈಕಲ್‌ಗಳ ಮೂಲಕ ಕುಡಿಯುವ ನೀರು ತರುವಂಥ ಪರಿಸ್ಥಿತಿ ಬಂದಿರುವುದು ಜಿಲ್ಲೆಯ ಯಾವುದೇ ಗ್ರಾಮೀಣ ಪ್ರದೇಶದಲ್ಲಿನ ಹಳ್ಳಿಯಲ್ಲಿಲ್ಲ.

ಇಂಥ ಸಮಸ್ಯೆ ಇರುವುದು ಜಿಲ್ಲಾ ಕೇಂದ್ರವಾದ ರಾಯಚೂರು ನಗರದ ಮಾನಸಗಲ್ ವೀರನಗೌಡ ಕಾಲೋನಿಯ ನಿವಾಸಿಗಳು ಕಳೆದ ನಾಲ್ಕು ವರ್ಷಗಳಿಂದಲೂ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.

ಕುಡಿಯುವ ನೀರಿನ ಸಮಸ್ಯೆಗಾಗಿ ಮಾನಸಗಲ್ ವೀರನಗೌಡ ಕಾಲೋನಿಯ ಅಭಿವೃದ್ಧಿ ಸಮಿತಿಯನ್ನು ರಚನೆ ಮಾಡಿಕೊಂಡು ನಿವಾಸಿಗಳು ಒಂದಲ್ಲೊಂದು ದಿನ ನಗರಸಭೆ ಹಾಗೂ ಜಿಲ್ಲಾಡಳಿತಕ್ಕೆ ಕುಡಿಯುವ ನೀರಿನ ಸಮಸ್ಯೆಗಳನ್ನು ಪ್ರತಿಭಟನೆ ಹಾಗೂ ಮನವಿ ಸಲ್ಲಿಸುವುದರ ಮೂಲಕ ಗಮನಕ್ಕೆ ತಂದರೂ ಮನವಿ ಪತ್ರಗಳೆಲ್ಲ ಕಸದ ಬುಟ್ಟಿಗೆ ಸೇರಿದವು.

ಮಾನಸಗಲ್ ವೀರನಗೌಡ ಕಾಲೋನಿಯ ನಿವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮಾತ್ರ ಯಾವುದೇ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ಕ್ರಮಕೈಗೊಳ್ಳಲು ಮುಂದಾಗಲಿಲ್ಲ ಎಂಬುದು ಕಾಲೋನಿ ನಿವಾಸಿಗಳ ಆರೋಪಿಸುತ್ತಾರೆ.

ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಿ.ಎಂ. ಉದಾಸಿ, ಆನಂದ ಅಸ್ನೋಟಿಕರ್ ಹಾಗೂ  ಬಿ.ಶ್ರೀರಾಮುಲು ಮತ್ತುಬಾಲಚಂದ್ರ ಜಾರಕಿಹೊಳೆ ಅವರು ಪೌರಾಡಳಿತ ಸಚಿವರಾಗಿದ್ದ ಸಂದರ್ಭದಲ್ಲಿ ಮನವಿ ಸಲ್ಲಿಸಿದ್ದರು.

ಮೂರು ಜನ ಉಸ್ತುವಾರಿ ಸಚಿವರಿಗೆ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಈಗಿನ ಮುಖ್ಯಮಂತ್ರಿ ಡಿ.ವಿ ಸದಾನಂದಗೌಡ ಅವರಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಆ ಸಂದರ್ಭಗಳಲ್ಲಿ ಸಂಬಂಧಪಟ್ಟದ ಅಧಿಕಾರಿಗಳಿಗೆ ಕರೆದು ಕ್ರಮ ಕೈಗೊಳ್ಳಬೇಕು  ಸೂಚಿಸುವುದು ಅದಷ್ಟೇ ಕೆಲಸ ಮಾಡಿ ಹೋದವರು. ಇಂದಿಗೂ ಮಾನಸಗಲ್ ವೀರನಗೌಡ ಕಾಲೋನಿಯ ನಿವಾಸಿಗಳಿಗೆ ಅದೇ ಸಮಸ್ಯೆ ಇದೆ. ಹೊರತು ಬದಲಾವಣೆ ಏನು ಕಂಡಿಲ್ಲ ಎಂದು ನಿವಾಸಿಗಳ ಆಪಾದನೆಯಾಗಿದೆ.

ಈ ಪ್ರದೇಶದ ಜನ ಪ್ರತಿನಿಧಿಯೂ ಗಮಹರಿಸಿಲ್ಲ. ಈ ಕಾಲೋನಿಯ ಸಮಸ್ಯೆಯನ್ನು ಪೌರಾಡಳಿತ ಇಲಾಖೆಯ ಅಧಿಕಾರಿಗಳು ಮಾನಸಗಲ್ ಕಾಲೋನಿಯ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬೇಕು ಎಂಬ ಆದೇಶವನ್ನು ಕಳೆದ ಎರಡು ತಿಂಗಳ ಹಿಂದೆ ಹೊರಡಿಸಲಾಗಿದೆ.
 
ಆದರೂ ನಗರಸಭೆ ಪೌರಾಯುಕ್ತರು ಹಾಗೂ ಅಧಿಕಾರಿಗಳು ಆದೇಶಕ್ಕೂ ಮಾನ್ಯತೆ ನೀಡುತ್ತಿಲ್ಲ ಎಂದು ಮಾನಸಗಲ್ ವೀರನಗೌಡ ಕಾಲೋನಿಯ ಅಭಿವೃದ್ಧಿ ಸಮಿತಿ ಸಂಚಾಲಕ ಡಿ.ಜಿ ರಾಜು ವಕೀಲ ಅವರು `ಪ್ರಜಾವಾಣಿ~ಗೆ ತಿಳಿಸಿದರು.

ಕುಡಿಯುವ ನೀರು ಹಾಗೂ ಮೂಲಭೂತ ಸೌಲಭ್ಯಗಳಿಗೆ ಮನವಿ ಮಾಡುವ ಕಾಲೋನಿಯ ನಿವಾಸಿಗಳಿಗೆ  ಮಾನಸಗಲ್ ವೀರನಗೌಡ ಕಾಲೋನಿಯ ಅನಧಿಕೃತವಾಗಿದೆ. ಈ ಬಗ್ಗೆ ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮನವಿ ಕೇಳಿ ಎಂಬುದನ್ನು ಕಾರಣ ನೀಡುತ್ತಿದ್ದಾರೆ. ಅನಧಿಕೃತ ಬಡಾವಣೆ ಎಂಬುದಾದರೆ ನಿವೇಶಗಳ ಮಾರಾಟ ಹಾಗೂ ನಿವೇಶಗಳ ಮ್ಯೂಟೇಶನ್ ಮಾಡಿರುವುದಾರೆ ಏಕೆ ಎಂಬುದು ಕಾಲೋನಿಯ ನಿವಾಸಿಗಳ ಪ್ರಶ್ನೆಯಾಗಿದೆ.

ಜನಪ್ರತಿನಿಧಿಗಳು ಆಯ್ಕೆಯಾದ ಹಾಗೂ ನೂತನವಾಗಿ ವರ್ಗಾವಣೆಗೊಂಡು ನಗರಕ್ಕೆ ಬಂದಂಥ ಅಧಿಕಾರಿಗಳು ಮೂಲಭೂತ ಸೌಲಭ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂಬ ಮಾತುಗಳನ್ನಾಡುತ್ತಾರೆ. ಆದರೆ, ಇಂಥ ಮಾತುಗಳಿಗೆ ಮಾತ್ರ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ನಿವಾಸಿಗಳ ಆರೋಪವಾಗಿದೆ.

ಇನ್ನೂದರೂ ಜಿಲ್ಲಾಡಳಿತ ಹಾಗೂ ನಗರಸಭೆ ಮಾನಸಗಲ್ ವೀರನಗೌಡ ಕಾಲೋನಿಯ ನಿವಾಸಿಗಳ ಕುಡಿಯುವ ನೀರು ಹಾಗೂ ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗುವುದೇ ಎಂಬುದು ಕಾದು ನೋಡಬೇಕು ಅಷ್ಟೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT