ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈ ಜವಾನ್

ಅಕ್ಷರ ಗಾತ್ರ

ಉತ್ತರಾಖಂಡದ `ಹಿಮಾಲಯ ಸುನಾಮಿ' ಯ ಪರಿಣಾಮದ ಪ್ರವಾಹ, ಭೂಕುಸಿತ, ಆಸ್ತಿಪಾಸ್ತಿ ಹಾಗೂ ಪ್ರಾಣಹಾನಿಯ ಭೀಕರ ಅವಘಡದಲ್ಲಿ 15 ದಿನಗಳ ಕಾಲ ಪರಿಹಾರ ಕಾರ್ಯವನ್ನು ಕೈಗೊಂಡ ಭಾರತೀಯ ಸೇನೆಯ ಕಾರ್ಯ ಅತ್ಯಂತ ಪ್ರಶಂಸನೀಯ.

ಗುಡ್ಡ-ಬೆಟ್ಟ, ನದಿ-ಕಂದರ, ಗಿರಿಕಣಿವೆಗಳು ಹಾಗೂ ಪವಿತ್ರ ಯಾತ್ರಾ ಸ್ಥಳಗಳಿಂದ ತುಂಬಿರುವ ಆ ರಾಜ್ಯದಲ್ಲಿ ತೊಂದರೆಗೊಳಗಾದ ಜಿಲ್ಲೆಗಳಲ್ಲಿನ ಸಂತ್ರಸ್ತರು ಮತ್ತು ಯಾತ್ರಾರ್ಥಿಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಿದ ಸಾಹಸಭರಿತ ಕೆಲಸ ಸೇನೆಯ ಮೂರೂ ವಿಭಾಗಗಳಿಂದ ನಡೆದಿದೆ.

ಪರಿಹಾರ ಕಾರ್ಯದಲ್ಲಿ ತೊಡಗಿದ್ದ ಹೆಲಿಕಾಪ್ಟರ್ ಒಂದು ಅಪಘಾತಕ್ಕೀಡಾಯಿತು. ಸೇನೆಯ ಕರ್ತವ್ಯಬದ್ಧತೆ ಶ್ಲಾಘನೀಯ. ಭಾರತೀಯ ಸೇನೆಗೆ ದೇಶವಾಸಿಗಳ ಹೃದಯಪೂರ್ವಕ ಅಭಿನಂದನೆಗಳು, ಜೈ ಜವಾನ್.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT