ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಬೆಟ್-ಗರಿಗೆದರಿದಹೊಸ ವಿವಾದ

Last Updated 4 ಫೆಬ್ರುವರಿ 2011, 17:20 IST
ಅಕ್ಷರ ಗಾತ್ರ

ಧರ್ಮಶಾಲಾ (ಐಎಎನ್‌ಎಸ್): ಟಿಬೆಟನ್ ಧಾರ್ಮಿಕ ಮುಖಂಡ ಕರ್ಮಪ ಲಾಮ ದೊರ್ಜಿ ಅವರ ಬೌದ್ಧ ವಿಹಾರದಲ್ಲಿ ಏಳು ಕೋಟಿ ರೂಪಾಯಿ ಅಕ್ರಮ ಹಣ ಪತ್ತೆಯಾದ ನಂತರ ಕರ್ಮಪ ಪಂಗಡದ ಉತ್ತರಾಧಿಕಾರದ ವಿವಾದ ಗರಿಗೆದರಿದೆ.

ಈ ಪಂಗಡದ ಎರಡು ವಿರೋಧಿ ಬಣಗಳು ತಮ್ಮದೇ ನಿಜವಾದ ಕರ್ಮಾ ಕಗ್ಯೂ ಪಂಗಡವೆಂದು ಹೇಳಿಕೊಳ್ಳುತ್ತಿವೆ.ಟಿಬೆಟ್‌ನಲ್ಲಿ ಒಟ್ಟು ನಾಲ್ಕು ಧಾರ್ಮಿಕ ಪಂಗಡಗಳಿದ್ದು, ಅವುಗಳಲ್ಲಿ ಕರ್ಮಾ ಕಗ್ಯೂ ಪಂಗಡ ಅತಿ ಶ್ರೀಮಂತವಾದುದು. ಈ ಪಂಗಡದ ಒಟ್ಟು ಆಸ್ತಿ ಸುಮಾರು 1.3 ಶತಕೋಟಿ ಡಾಲರ್.

17ನೇ ಕರ್ಮಪ ಉಜಿನ್ ಟ್ರಿನ್ಲಿ ದೊರ್ಜಿಯ ಬೌದ್ಧ ವಿಹಾರದಲ್ಲಿ ಅಕ್ರಮ ಹಣ ಪತ್ತೆಯಾದ ನಂತರ ದೊರ್ಜಿ ಅವರು ಚೀನಾ ಸರ್ಕಾರ ಮತ್ತು ದಲೈಲಾಮ ಅವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಟ್ರಿನ್ಲಿ ಥಾಯಿ ದೊರ್ಜಿ ಅವರು ಕರ್ಮಾ ಕಗ್ಯೂ ಪಂಗಡದ ನಿಜವಾದ ಧಾರ್ಮಿಕ ಮುಖಂಡರು ಎಂದು ಮೊದಲಿನಿಂದಲೂ ವಾದಿಸುತ್ತಿರುವವರಿಗೆ ಈ ಘಟನೆಯಿಂದ ಬಲ ಬಂದಿದ್ದು. ಅವರು ಟ್ರಿನ್ಲಿ ಥಾಯಿ ದೊರ್ಜಿ ಪರ ಬಿರುಸಿನಿಂದ ಕೆಲಸ ಮಾಡುತ್ತಿದ್ದಾರೆ.

ಬ್ಯಾಂಕ್ ಖಾತೆ ಸ್ಥಗಿತ
ಶಿಮ್ಲಾ/ ಧರ್ಮಶಾಲಾ(ಪಿಟಿಐ): ಬೌದ್ಧ ವಿಹಾರದಲ್ಲಿ ಭಾರಿ ಮೊತ್ತದ ವಿದೇಶಿ ಹಣ ಪತ್ತೆ ಪ್ರಕರಣದ ತನಿಖೆಗೆ ಪೂರಕವಾಗಿ 17ನೇ ಕರ್ಮಪ ಉಜಿನ್ ಟ್ರಿನ್ಲಿ ದೊರ್ಜಿ ಬೆಂಬಲಿತ ಟ್ರಸ್ಟ್ ಹಾಗೂ ಅದರ ಸದಸ್ಯರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿ  ಸಲಾಗಿದೆ.

‘ಹಣ ವಿನಿಮಯಕ್ಕೆ ಸಂಬಂಧಿಸಿದಂತೆ ಖಾತೆಗಳನ್ನು ಸಂಪೂರ್ಣ ಪರಿಶೀಲನೆಗೆ ಒಳಪಡಿಸಬೇಕಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಪೊಲೀಸ್ ಮಹಾನಿರ್ದೇಶಕ ಪಿ.ಎಲ್.ಠಾಕೂರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT