ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್: ಶಿವಾನಿಗೆ ಪ್ರಶಸ್ತಿ ಡಬಲ್

Last Updated 25 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಶಿವಾನಿ ಮಂಜಣ್ಣ ಇಲ್ಲಿ ಮುಕ್ತಾಯವಾದ ಎಐಟಿಎ ಸೀರಿಸ್ ಜೂನಿಯರ್ ಟೆನಿಸ್ ಟೂರ್ನಿಯ ಬಾಲಕಿಯರ 14 ವರ್ಷದೊಳಗಿನವರ ಸಿಂಗಲ್ಸ್ ಹಾಗೂ ಡಬಲ್ಸ್ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದುಕೊಂಡರು.

ಶುಕ್ರವಾರ ನಡೆದ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಶಿವಾನಿ 6-0, 6-4ರಲ್ಲಿ ಶ್ರೇಯಾಂಕ ರಹಿತ ಆಟಗಾರ್ತಿ ಆಂಧ್ರ ಪ್ರದೇಶದ ಹರ್ಷಾ ಸಾಯಿ ಚಲ್ಲಾ ಎದುರು ಗೆಲುವು ಪಡೆದರು. ಡಬಲ್ಸ್‌ನಲ್ಲಿ ಜಿ.ಎಸ್. ವಾಸವಿ ಜೊತೆ ಆಡಿದ ಶಿವಾನಿ ಅಂತಿಮ ಘಟ್ಟದ ಪಂದ್ಯದಲ್ಲಿ 6-3, 7-5ರಲ್ಲಿ ಹರ್ಷಾ ಸಾಯಿ-ಶಿವಾನಿ ಅಮೇನಿನಿ ಎದುರು ಜಯ ಸಾಧಿಸಿ `ಡಬಲ್~ ಪ್ರಶಸ್ತಿ ತಮ್ಮದಾಗಿಸಿಕೊಂಡರು.

12 ವರ್ಷದೊಳಗಿನವರ ಬಾಲಕಿಯರ ವಿಭಾಗದ ಸಿಂಗಲ್ಸ್‌ನ ಫೈನಲ್‌ನಲ್ಲಿ  ಶಿವಾನಿ ಅಮೇನಿನಿ 6-3, 6-3ರಲ್ಲಿ ಕರ್ನಾಟಕದ ಅನಿಕಾ ಕಣ್ಣನ್ ಎದುರು ಗೆಲುವು ಪಡೆದರು. ಬಾಲಕರ ವಿಭಾಗದ ಸಿಂಗಲ್ಸ್‌ನಲ್ಲಿ ಆಂಧ್ರಪ್ರದೇಶದ ಅಮಿತ್ ಬಿ. 6-3, 3-6, 6-0ರಲ್ಲಿ ಮಹಾರಾಷ್ಟ್ರದ ಧ್ರುವ ಎಸ್. ಎದುರು ಜಯಿಸಿ ಪ್ರಶಸ್ತಿ ಜಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT