ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಜಾ ಹಸಿರು ಬಟಾಣಿ ಸವಿರುಚಿ...

Last Updated 11 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ


ಬಟಾಣಿ ಕಾಳಿನ ಚಿತ್ರಾನ್ನ

ಬೇಕಾಗುವ ಸಾಮಗ್ರಿಗಳು: 1 ಬಟ್ಟಲು ಬಟಾಣಿ ಕಾಳು, 2 ಬಟ್ಟಲು ಉದುರಾದ ಅನ್ನ. 1ಚಮಚ ಉದ್ದಿನಬೇಳೆ, 1 ಚಮಚ ಕಡಲೆ ಬೇಳೆ, 4 ಚಮಚ ಎಣ್ಣೆ, ಹಸಿ ಮೆಣಸಿನಕಾಯಿ, ನಿಂಬೆರಸ,ಉಪ್ಪು, ಅರ್ಧ ಬಟ್ಟಲು ತೆಂಗಿನತುರಿ.

ಮಾಡುವ ವಿಧಾನ: ಒಂದು ಬಾಣಲೆಗೆ ಎಣ್ಣೆ ಹಾಕಿ ನಂತರ ಸಾಸಿವೆ ಸಿಡಿಸಿ ಉದ್ದಿನಬೇಳೆ, ಕಡಲೆ ಬೇಳೆ ಕೆಂಪಗಾಗುವಂತೆ ಹುರಿಯಿರಿ. ಬಟಾಣಿ, ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ ಹಾಕಿ ಬಟಾಣಿ ಬೇಯುವ ತನಕ ಚೆನ್ನಾಗಿ ಹುರಿಯಿರಿ. ನಂತರ ಅನ್ನ ಹಾಕಿ ನಿಂಬೆರಸ, ಉಪ್ಪು ಸೇರಿಸಿ ಕಲಸಿ ತೆಂಗಿನ ತುರಿಯಿಂದ ಅಲಂಕರಿಸಿ ಸವಿಯಿರಿ.

ಬಟಾಣಿ ಪಲಾವ್
ಬೇಕಾಗುವ ಸಾಮಗ್ರಿಗಳು: 1 ಬಟ್ಟಲು ಬಟಾಣಿ ಕಾಳು,  ಅರ್ಧ ಕೇಜಿ ಬಾಸುಮತಿ ಅಕ್ಕಿ, 75 ಗ್ರಾಂ ತುಪ್ಪ, 4 ಲವಂಗ, ಒಂದು ಚೂರು ಚಕ್ಕೆ, 2 ಏಲಕ್ಕಿ, 2 ಈರುಳ್ಳಿ, ಸಣ್ಣಗೆ ಹೆಚ್ಚಿದ 3 ಹಸಿಮೆಣಸಿನಕಾಯಿ, 1 ಚಮಚ ಜೀರಿಗೆ ಪುಡಿ, 1 ಚಮಚ ಖಾರದಪುಡಿ, 1 ಚಮಚ ಧನಿಯಾಪುಡಿ, ಉಪ್ಪು, ಕೊತ್ತಂಬರಿಸೊಪ್ಪು.

ಮಾಡುವ ವಿಧಾನ: ಕುಕ್ಕರ್‌ನಲ್ಲಿ ತುಪ್ಪ ಹಾಕಿ ಬಿಸಿಮಾಡಿ. ನಂತರ ಲವಂಗ, ಚಕ್ಕೆ, ಏಲಕ್ಕಿ ಹಾಕಿ ಸ್ವಲ್ಪ ಹುರಿದು ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ ಹಾಕಿ ಹುರಿಯಿರಿ. ನಂತರ ಜೀರಿಗೆ ಪುಡಿ, ಖಾರದಪುಡಿ, ಧನಿಯಾಪುಡಿ, ಅಕ್ಕಿ ಹಾಕಿ ಸ್ವಲ್ಪ ಹುರಿದು ಬಟಾಣಿಕಾಳು, ಉಪ್ಪು, ನೀರು ಹಾಕಿ ಕುಕ್ಕರ್ ಕೂಗಿಸಿ. ಆರಿದ ನಂತರ ಕೊತ್ತಂಬರಿಯಿಂದ ಅಲಂಕರಿಸಿ ಮೊಸರು ಬಜ್ಜಿಯೊಡನೆ ಸವಿಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT