ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರ ವ್ಯತ್ಯಾಸ ಸರಿಪಡಿಸಿ

Last Updated 23 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬಿಎಂಟಿಸಿ ಬಸ್‌ ಟಿಕೆಟ್ ದರದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಿಪರೀತ ವ್ಯತ್ಯಾಸವಿದೆ. ಒಮ್ಮೆ ಮತ್ತೀಕೆರೆಯಿಂದ ಶಿವಾಜಿನಗರಕ್ಕೆ ಹೊರಟಿದ್ದೆ. ಒಂದು ಗಂಟೆ ಕಾದರೂ ಶಿವಾಜಿನಗರಕ್ಕೆ ಬಸ್‌ ಬರಲಿಲ್ಲ.

ಅನಿವಾರ್ಯವಾಗಿ ಮೆಜೆಸ್ಟಿಕ್ ಬಸ್‌ ಹತ್ತಿ ಟಾಟಾ ಇನ್‌ಸ್ಟಿಟ್ಯೂಟ್‌ ನಿಲ್ದಾಣಕ್ಕೆ ಟಿಕೆಟ್‌ ತೆಗೆದುಕೊಂಡೆ (ರೂ ಏಳು). ಅಲ್ಲಿಂದ ಶಿವಾಜಿನಗರಕ್ಕೆ ಮತ್ತೊಂದು ಬಸ್‌ ಹತ್ತಿದೆ. ಅದರಲ್ಲಿ 16 ರೂಪಾಯಿಗಳ ಟಿಕೆಟ್‌ ಕೊಟ್ಟರು. ವಿಪರ್ಯಾಸವೆಂದರೆ ಮತ್ತೀಕೆರೆಯಿಂದ ಶಿವಾಜಿನಗರಕ್ಕೂ ರೂ16 ತೆಗೆದುಕೊಳ್ಳುತ್ತಾರೆ.

ಟಾಟಾ ಇನ್‌ಸ್ಟಿಟ್ಯೂಟ್‌ನಿಂದಲೂ ಅದೇ ದರವನ್ನು ತೆಗೆದುಕೊಳ್ಳುವುದು ಯಾಕೆ? ಈ ಹಗಲು ದರೋಡೆ ನಿಲ್ಲಿಸಿ, ಬಿಎಂಟಿಸಿ ಸಂಬಂಧಪಟ್ಟ ಅಧಿಕಾರಿಗಳು ಈ ದರವ್ಯತ್ಯಾಸ ತಪ್ಪಿಸಬೇಕಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT