ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದಿನವೂ ನಾಗಪಂಚಮಿ

Last Updated 2 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಗ್ರಾಫಿಕ್ ತಂತ್ರಜ್ಞಾನದಿಂದ ಸಮೃದ್ಧವಾದ `ನಾಗಪಂಚಮಿ~ ದೈನಿಕ ಧಾರಾವಾಹಿ ಫೆ.6ರಿಂದ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಅಕ್ಕತಂಗಿಯರ ಸುತ್ತ ಹೆಣೆಯಲಾದ ಹೂ-ಹಾವಿನ ಕಥೆ ಈ ಧಾರಾವಾಹಿಯದಾಗಿದ್ದು, ಬಾಲಿವುಡ್‌ನ `ಕ್ರಿಷ್~ ಮತ್ತು `ಕೋಯಿ ಮಿಲ್ ಗಯಾ~ ಚಿತ್ರಗಳಿಗೆ ಗ್ರಾಫಿಕ್ ಡಿಸೈನ್ ಮಾಡಿದ ಯುನಸ್ ಬುಕಾರಿ ಈ `ನಾಗಪಂಚಮಿ~ಗೆ ಅದ್ಭುತ ಗ್ರಾಫಿಕ್ ಡಿಸೈನ್ ಮಾಡಿದ್ದಾರಂತೆ.

`ವಿಭಿನ್ನ ಕಥೆ, ತಾಂತ್ರಿಕ ಕೌಶಲದ ಈ ಧಾರಾವಾಹಿಯ ಪ್ರತಿ ಕಂತನ್ನೂ ಕುತೂಹಲಕರವಾಗಿ ನಿರೂಪಿಸಲಾಗುವುದು. ಕಥೆಯ ನೈಜತೆಯ ಕಾರಣಕ್ಕೋಸ್ಕರ ಧಾರಾವಾಹಿಯ ಚಿತ್ರೀಕರಣವನ್ನು ಮಂಡ್ಯ ಜಿಲ್ಲೆಯ ಹರೂರಿನಲ್ಲಿರುವ ಪ್ರಾಚೀನ ದೇವಸ್ಥಾನದಲ್ಲಿ ನಡೆಸಲಾಗಿದೆ.

ಕನ್ನಡ ಕಿರುತೆರೆಯಲ್ಲಿ 3ಡಿ ಸ್ಪೆಷಲ್ ಎಫೆಕ್ಟ್ಸ್ ಬಳಸಿ ರೂಪಿಸಿರುವ ಮೊದಲ ಧಾರಾವಾಹಿ ಇದು~ ಎಂದು `ನಾಗಪಂಚಮಿ~ಯ ನಿರ್ದೇಶಕ ವಿಘ್ನೇಶ್ ರಾವ್ ತಿಳಿಸಿದ್ದಾರೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6ಕ್ಕೆ `ನಾಗಪಂಚಮಿ~ ಪ್ರಸಾರವಾಗಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT