ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ತುಳು ಸಮ್ಮೇಳನ

Last Updated 4 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ದ್ರಾವಿಡ ಭಾಷೆಗಳಲ್ಲಿ ಅತ್ಯಂತ ಪ್ರಭಾವಶಾಲಿಯಾಗಿ, ತನ್ನತನವನ್ನು ಇಂದಿಗೂ ಉಳಿಸಿಕೊಂಡು ಬಂದಿರುವ ಭಾಷೆಗಳಲ್ಲಿ ಒಂದು ತುಳು ಭಾಷೆ. ಮೂಲತಃ ಕರಾವಳಿಯವರಾದ ತುಳುವರು ಕಾರ್ಯ ವ್ಯಾಪಕತೆಯಿಂದಾಗಿ ಪರವೂರುಗಳಿಗೆ ಹೋಗುವ ಸಂದರ್ಭಗಳು ಬರತೊಡಗಿದಾಗ, ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ತುಳುಕೂಟ ಸ್ಥಾಪನೆ ಅಗತ್ಯವಾಯಿತು.

ಬೆಂಗಳೂರಿನ ಪ್ರಥಮ ತುಳು ಸಂಘಟನೆಯಾದ ತುಳು ಕೂಟವು 1972 ರಲ್ಲಿ ಪ್ರಾರಂಭವಾಯಿತು. ಈ ಕೂಟ ರಾಜಧಾನಿಯಲ್ಲಿರುವ ತುಳುವರನ್ನು ಸಂಘಟಿಸಿ, ಬರಹಗಾರರನ್ನು ಪ್ರೋತ್ಸಾಹಿಸುತ್ತಾ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ತುಳುಕೂಟ ಭಾನುವಾರ ತುಳು ಸಮ್ಮೇಳನ ಆಯೋಜಿಸಿವೆ.

ಬೆಳಿಗ್ಗೆ 10ಕ್ಕೆ ಉದ್ಯಮಿ, ಸಾಹಿತಿ ಡಿ.ಕೆ. ಚೌಟ ಅಧ್ಯಕ್ಷತೆಯಲ್ಲಿ ತುಳು ಸಮ್ಮೇಳನ. ಅತಿಥಿಗಳು: ಪಿ. ದಯಾನಂದ ಪೈ, ಪಾಲ್ತಾಡಿ ರಾಮಕೃಷ್ಣ ಆಚಾರ್, ಬಿ. ಚಂದ್ರಹಾಸ ರೈ. ಸಂಗೀತ ನಿರ್ದೇಶಕ ಮನೋಹರ್ ಅವರಿಂದ ‘ಕಡಲ್ದ ಉಡಲ್’ ತುಳು ಸಂಗೀತ ಸೀಡಿ ಲೋಕಾರ್ಪಣೆ.

ತುಳು ನಾಡಿನ ಚಾರಿತ್ರಿಕ ವ್ಯಕ್ತಿಗಳು, ಚರಿತ್ರೆ ಕುರಿತ ‘ಮದೆಪ್ಪೆರಾವಂದಿನ ತುಳುವೆರ್’ ವಿಚಾರಗೋಷ್ಠಿಯಲ್ಲಿ ಬಾಲಕೃಷ್ಣ ಪುತ್ತಿಗೆ (ಕೋಟಿ-ಚನ್ನಯ್ಯ), ಮುದ್ದು ಮೂಡುಬೆಳ್ಳೆ (ಕಾಂತಾಬಾರೆ-ಬುದಾಬಾರೆ), ಡಾ. ಕೊಯಿರಾ ಬಾಳೆಪುಣಿ (ಮುಗೇರ್ಲು), ಪ್ರಭಾಕರ ಶೆಟ್ಟಿ (ತುಳುನಾಡ ಸಿರಿ), ಸೀತಾರಾಮ ಕುಲಾಲ (ಉಳ್ಳಾಲದ ರಾಣಿ ಅಬ್ಬಕ್ಕ), ಭಾಸ್ಕರ ರೈ ಕುಕ್ಕುವಳ್ಳಿ (ದೇವು ಪೂಂಜ), ಎಸ್. ಆರ್. ಹೆಗ್ಡೆ (ಅಗೋಳಿ ಮಂಜಣ್ಣ) ಹಾಗೂ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ (ಶ್ರೀಮನ್ ಮಧ್ವಾಚಾರ್ಯರು).

ಸಂಜೆ 4.30ಕ್ಕೆ ಸಮಾರೋಪ. ಅಧ್ಯಕ್ಷತೆ: ತುಳುಕೂಟ ಬೆಂಗಳೂರಿನ ಅಧ್ಯಕ್ಷ ರಮೇಶ್ ಹೆಗ್ಡೆ. ಅತಿಥಿಗಳು: ಧನಂಜಯ ಕುಮಾರ್, ನೆ.ಲ. ನರೇಂದ್ರಬಾಬು, ಎ.ಜೆ. ಶೆಟ್ಟಿ, ಪ್ರಕಾಶ ಶೆಟ್ಟಿ, ಉದಯ ಧರ್ಮಸ್ಥಳ.

ನಂತರ ಸಾಂಸ್ಕೃತಿಕ ಕಾರ್ಯಕ್ರಮ: ಡಾ. ಕೊಯಿರಾ ಬಾಳೆಪುಣಿ ಕೂಟದವರಿಂದ ತುಳು ನಾಡಿನ ಜಾನಪದ ಕಲೆಗಳಾದ ಕರಂಗೀಲು, ಆಟಿಕಳೆಂಜ ಪ್ರದರ್ಶನ, ರತ್ನಮಾಲಾ ಪುರಂದರ ನೇತೃತ್ವದಲ್ಲಿ ನೇತೃತ್ವದಲ್ಲಿ  ವೀಣಾ ರಾಮಚಂದ್ರರಾವ್ ಮಹಿಳಾ ಬಳಗದವರಿಂದ ’ಕೋಟಿ ಚನ್ನಯ’ ಯಕ್ಷಗಾನ, ಶಶಿಧರ ಕೋಟೆ, ರಮೇಶಚಂದ್ರ ಮತ್ತು ಸುರೇಖಾ ಅವರಿಂದ ತುಳು ಗೀತೆ ಗಾಯನ.ಸ್ಥಳ: ಡಾ. ರಾಜಕುಮಾರ್ ಕಲಾಕ್ಷೇತ್ರ, ಆರ್‌ಟಿಒ ಕಚೇರಿ ಆವರಣ, ರಾಜಾಜಿನಗರ.              

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT