ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೇದಿತಾ, ಜಗದೀಶ್‌ಗೆ ಚಿನ್ನ

ಜೂನಿಯರ್‌ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌: ಮೂರು ರಾಷ್ಟ್ರೀಯ ದಾಖಲೆ
Last Updated 6 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಒಂದು ಚಿನ್ನ ಹಾಗೂ ಬೆಳ್ಳಿ ಗೆದ್ದ ನಿವೇದಿತಾ ಸಾವಂತ್‌  29ನೇ ರಾಷ್ಟ್ರೀಯ ಅಥ್ಲೆಟಿಕ್‌ ಚಾಂಪಿಯನ್‌ ಷಿಪ್‌ನ ನಾಲ್ಕನೇ ದಿನ ಕರ್ನಾಟಕದ ‘ಹೀರೊ’ ಆಗಿ ಮೆರೆದರು.

ಕಂಠೀರವ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಬಾಲಕಿಯರ 16 ವರ್ಷ ವಯಸ್ಸಿನೊಳಗಿನವರ ವಿಭಾಗದ ಡಿಸ್ಕಸ್‌ ಥ್ರೋ ಸ್ಪರ್ಧೆಯಲ್ಲಿ ಬಂಗಾರ ಜಯಿಸಿದ ನಿವೇದಿತಾ, ಷಾಟ್‌ಪಟ್‌ನಲ್ಲಿ ಬೆಳ್ಳಿಯ ಪದಕ ಗೆದ್ದರು. ಜಗದೀಶ್‌ ಚಂದ್ರ ಬಾಲಕರ 20 ವರ್ಷ ವಯಸ್ಸಿನೊಳಗಿನವರ ವಿಭಾಗದ 400 ಮೀ. ಹರ್ಡಲ್ಸ್‌ನಲ್ಲಿ ಅಗ್ರಸ್ಥಾನ ಪಡೆದು ಕೂಟದಲ್ಲಿ ಕರ್ನಾಟಕದ ಒಟ್ಟು ಚಿನ್ನದ ಪದಕಗಳ ಸಂಖ್ಯೆಯನ್ನು ಐದಕ್ಕೆ ಹೆಚ್ಚಿಸಿದರು. ನಾಲ್ಕನೇ ದಿನ ಆತಿಥೇ ಯರು ಎರಡು ಕಂಚಿನ ಪದಕಗಳನ್ನೂ ಗೆದ್ದುಕೊಂಡರು.

ಕಾರವಾರದ ಸೇಂಟ್‌ ಮೈಕಲ್ಸ್‌ ಹೈಸ್ಕೂಲ್‌ನಲ್ಲಿ 10ನೇ ತರಗತಿಯಲ್ಲಿ ಕಲಿಯುತ್ತಿರುವ ನಿವೇದಿತಾ ಬಾಲಕಿ ಯರ 16 ವರ್ಷ ವಯಸ್ಸಿನೊಳ ಗಿನವರ ಡಿಸ್ಕಸ್‌ ಥ್ರೋ ಸ್ಪರ್ಧೆಯಲ್ಲಿ 37.08 ಮೀ. ದೂರ ಎಸೆದು ಸ್ವರ್ಣ ಗೆದ್ದರು. ಷಾಟ್‌ಪಟ್‌ನಲ್ಲಿ 12.26 ಮೀ. ದೂರ ಸಾಧನೆಯೊಂದಿಗೆ ಎರಡನೇ ಸ್ಥಾನ ಪಡೆದರು. ಈ ವಿಭಾಗದ ಚಿನ್ನ ತಮಿಳುನಾಡಿನ ಗೌರಿಶಂಕರಿ (12.52 ಮೀ.) ಪಾಲಾಯಿತು.

ಹೋದ ವರ್ಷ ನಡೆದ ರಾಷ್ಟ್ರೀಯ ಶಾಲಾ ಕೂಟದ ಡಿಸ್ಕಸ್‌ ಥ್ರೋ ಮತ್ತು ಷಾಟ್‌ಪಟ್‌ನಲ್ಲಿ ಚಿನ್ನ ಜಯಿಸಿದ್ದ ನಿವೇದಿತಾ ಅವರು ಪ್ರಕಾಶ್‌ ರೇವಣ್‌ಕರ್‌ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ‘ನಿವೇದಿತಾಳಿಂದ ಪದಕ ನಿರೀಕ್ಷಿಸಿದ್ದೆ. ಅಭ್ಯಾಸದ ವೇಳೆ ಆಕೆ ಡಿಸ್ಕಸ್‌ ಥ್ರೋನಲ್ಲಿ ಕೆಲವೊಮ್ಮೆ 40.00 ಮೀ. ಸಾಧನೆ ಮಾಡುತ್ತಿದ್ದಳು’ ಎಂದು ಪ್ರಕಾಶ್‌ ಪ್ರತಿಕ್ರಿಯಿಸಿದ್ದಾರೆ.

400 ಮೀ. ಹರ್ಡಲ್ಸ್‌ನಲ್ಲಿ ಜಗದೀಶ್‌ 52.67 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಉತ್ತರ ಪ್ರದೇಶ ಮೂಲದ ಈ ಅಥ್ಲೀಟ್‌ ಬಿ.ಪಿ. ಅಯ್ಯಪ್ಪ ಅವರಿಂದ ತರತಬೇತಿ ಪಡೆಯುತ್ತಿದ್ದಾರೆ. ಶಿಮೋನಾ ಮಸ್ಕರೇನಸ್‌ ಬಾಲಕಿ ಯರ 18 ವರ್ಷ ವಯಸ್ಸಿನೊಳಗಿನವರ 400 ಮೀ. ಹರ್ಡಲ್ಸ್‌ನಲ್ಲಿ ಕಂಚು ಜಯಿಸಿದರು. ಅವರು 1:06.80 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಈ ವಿಭಾಗದ ಚಿನ್ನ ಆಂಧ್ರಪ್ರದೇಶದ ಎಚ್‌. ಕಾವ್ಯಾ (1:05.33 ಸೆ.) ಪಾಲಾಯಿತು.
ಇದೇ ವಯೋವರ್ಗದ 1000 ಮೀ. ಮೆಡ್ಲೆ ರಿಲೇನಲ್ಲೂ ಕರ್ನಾಟಕ ಕಂಚು ಗೆದ್ದುಕೊಂಡಿತು. ಎಂ.ಆರ್‌. ಅನೂಶಾ, ಎಸ್‌. ಪ್ರಣೀತಾ ಪ್ರದೀಪ್‌, ಮೇಘಾ ಮತ್ತು ಜಿ.ಕೆ. ವಿಜಯಕುಮಾರಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದರು.

ರಾಷ್ಟ್ರೀಯ ದಾಖಲೆ: ನಾಲ್ಕನೇ ದಿನ ಒಟ್ಟು ಮೂರು ರಾಷ್ಟ್ರೀಯ ದಾಖಲೆಗಳು ನಿರ್ಮಾಣಗೊಂಡವು. ಕೇರಳದ ಆದಿರಾ ಸುರೇಂದ್ರನ್‌ ಬಾಲಕಿಯರ 18 ವರ್ಷ ವಯಸ್ಸಿನೊಳಗಿನವರ ವಿಭಾಗದ ಟ್ರಿಪಲ್‌ ಜಂಪ್‌ನಲ್ಲಿ 12.86 ಮೀ. ದೂರ ಜಿಗಿದು ದಾಖಲೆಯೊಂದಿಗೆ ಚಿನ್ನ ಗೆದ್ದರು. ತಮಿಳುನಾಡಿನ ಜಿ. ಗಾಯತ್ರಿ (12.78 ಮೀ.) 2008 ರಲ್ಲಿ ಸ್ಥಾಪಿಸಿದ್ದ ದಾಖಲೆಯನ್ನು ಅವರು ಮುರಿದರು.

ರವಿಕುಮಾರ್‌, ಎಂ.ಎಸ್‌. ಅರುಣ್‌, ಟಿ. ಸಂತೋಷ್‌ ಕುಮಾರ್‌ ಮತ್ತು ಆರ್‌. ಬಾಲಕೃಷ್ಣನ್‌ ಅವರನ್ನೊಳ ಗೊಂಡ ತಮಿಳುನಾಡು ತಂಡ 1000 ಮೀ. ಮೆಡ್ಲೆ ರಿಲೇನಲ್ಲಿ ರಾಷ್ಟ್ರೀಯ ದಾಖಲೆಯೊಂದಿಗೆ ಸ್ವರ್ಣ ಜಯಿಸಿತು.  ಬಾಲಕರ 18 ವರ್ಷ ವಯಸ್ಸಿ ನೊಳಗಿ ನವರ ವಿಭಾಗದ ಅಕ್ಟಥ್ಲಾನ್‌ನಲ್ಲಿ ಮಹಾರಾಷ್ಟ್ರದ ಅಮೊಲಕ್‌ ಸಿಂಗ್‌ ರಾಷ್ಟ್ರೀಯ ದಾಖಲೆ ಸ್ಥಾಪಿಸಿದರು.

ಈ ಕೂಟ ಶನಿವಾರ ಕೊನೆಗೊಳ್ಳಲಿದ್ದು, ಒಟ್ಟು 444 ಪಾಯಿಂಟ್‌ ಕಲೆಹಾಕಿರುವ ಕೇರಳ ಸಮಗ್ರ ಪ್ರಶಸ್ತಿಯನ್ನು ಹೆಚ್ಚುಕಡಿಮೆ ಖಚಿತಪಡಿಸಿಕೊಂಡಿದೆ. ತಮಿಳುನಾಡು (276.5) ಮತ್ತು ಹರಿಯಾಣ (228.5) ಬಳಿಕದ ಸ್ಥಾನಗಳಲ್ಲಿವೆ. 134.5 ಪಾಯಿಂಟ್‌ ಹೊಂದಿರುವ ಕರ್ನಾಟಕ ಐದನೇ ಸ್ಥಾನದಲ್ಲಿದೆ.
ನಗದು ಬಹುಮಾನ: ಕೂಟದಲ್ಲಿ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಎಲ್ಲ ಅಥ್ಲೀಟ್‌ಗಳಿಗೆ ತಲಾ ₨ 10000 ನಗದು ಬಹುಮಾನ ನೀಡಲಾಗುವುದು ಎಂದು ಕರ್ನಾಟಕ ಅಥ್ಲೆಟಿಕ್‌ ಸಂಸ್ಥೆ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌ ಪ್ರಕಟಿಸಿದ್ದಾರೆ. ವಿವಿಧ ವಯೋವರ್ಗ ದಲ್ಲಿ ‘ಶ್ರೇಷ್ಠ ಅಥ್ಲೀಟ್‌’ ಗೌರವ ಪಡೆ ಯುವ ಸ್ಪರ್ಧಿಗಳಿಗೆ ತಲಾ ₨ 5000 ನಗದು ಬಹುಮಾನ ಲಭಿಸಲಿದೆ.

ನಾಲ್ಕನೇ ದಿನದ ಫಲಿತಾಂಶ:
ಬಾಲಕರ ವಿಭಾಗ: 20 ವರ್ಷ ವಯಸ್ಸಿನೊಳಗಿನವರು:
400 ಮೀ. ಹರ್ಡಲ್ಸ್‌: ಜಗದೀಶ್‌ ಚಂದ್ರ (ಕರ್ನಾಟಕ)-1, ಪುನೀತ್‌ ಕುಮಾರ್‌ (ಮಧ್ಯ ಪ್ರದೇಶ)-2, ಅರ್ಶದೀಪ್‌ ಸಿಂಗ್‌ (ಪಂಜಾಬ್‌)-3. ಕಾಲ: 52.67 ಸೆ.
ಲಾಂಗ್‌ಜಂಪ್‌: ವಿಕ್ರಮ್‌ಜೀತ್‌ ಸಿಂಗ್‌ (ಪಂಜಾಬ್‌)-1, ಪಿ.ವಿ. ಸುಹೈಲ್‌ (ಕೇರಳ)-2, ಪಿ. ಅನ್ಬುರಾಜಾ (ತಮಿಳುನಾಡು)-3. ದೂರ: 7.54 ಮೀ.
ಹ್ಯಾಮರ್‌ ಥ್ರೋ: ಕಪಿಲ್‌ ಮನ್ನ್‌ (ರಾಜಸ್ತಾನ)-1, ಸುರೇಂದ್ರ ಕುಮಾರ್‌ (ಬಿಹಾರ)-2, ಗುರ್ಮೀತ್‌ ಸಿಂಗ್‌ (ಪಂಜಾಬ್‌)-3. ದೂರ: 63.58 ಮೀ.
18 ವರ್ಷ ವಯಸ್ಸಿನೊಳಗಿನವರು:
400 ಮೀ. ಹರ್ಡಲ್ಸ್‌: ಪವನ್‌ (ಹರಿಯಾಣ)-1, ಬಂಟಿ ಚೌಧರಿ (ಉತ್ತರ ಪ್ರದೇಶ)-2, ಸುಮಿತ್‌ ಕುಮಾರ್‌ ಜೈಸ್ವಾಲ್‌ (ಮಹಾರಾಷ್ಟ್ರ)-3. ಕಾಲ: 53.69 ಸೆ.
ಹೈಜಂಪ್‌: ಅಜಯ್‌ ಕುಮಾರ್‌ (ಹರಿಯಾಣ)-1, ಯುಗಂತ್‌ ಶೇಖರ್‌ ಸಿಂಗ್‌ (ಉತ್ತರ ಪ್ರದೇಶ)-2, ದುರ್ಗಾ ಚರಣ್‌ (ಜಾರ್ಖಂಡ್‌)-3. ಎತ್ತರ: 2.05 ಮೀ.
ಷಾಟ್‌ಪಟ್‌: ನಿಶಾನ್‌ ಸಿಂಗ್‌ (ಪಂಜಾಬ್‌)-1, ಮಹಮ್ಮದ್‌ ಇಬ್ರಾಹಿಂ (ಉತ್ತರ ಪ್ರದೇಶ)-2, ಅಂಕಿತ್‌ ತೋಮರ್‌ (ದೆಹಲಿ)-3. ದೂರ: 18.39 ಮೀ.
ಡಿಸ್ಕಸ್‌ ಥ್ರೋ: ನಿರ್ಭಯ್‌ ಸಿಂಗ್‌ (ಹರಿಯಾಣ)-1, ಕ್ಷೇತ್ರಪಾಲ್‌ (ಉತ್ತರ ಪ್ರದೇಶ)-2, ಅಮಿತ್‌ ಕುಮಾರ್‌ (ರಾಜಸ್ತಾನ)-3. ದೂರ: 59.62 ಮೀ.
16 ವರ್ಷ ವಯಸ್ಸಿನೊಳಗಿನವರು:
ಪೆಂಟಥ್ಲಾನ್‌: ಆರ್‌. ಬಾಲಕೃಷ್ಣನ್‌ (ತಮಿಳುನಾಡು)-1, ರಾಹುಲ್‌ ಸಬಿ (ಕೇರಳ)-2, ಅನುಜ್‌ ಸಂಗ್ವಾನ್‌ (ಹರಿಯಾಣ)-3. ಪಾಯಿಂಟ್‌: 3469
1000 ಮೀ. ಸ್ಪ್ರಿಂಟ್‌ ಮೆಡ್ಲೆ ರಿಲೇ: ತಮಿಳುನಾಡು-1, ಹರಿಯಾಣ-2, ದೆಹಲಿ-3. ಕಾಲ: 1:58.02 ಸೆ.

ಬಾಲಕಿಯರ ವಿಭಾಗ:
20 ವರ್ಷ ವಯಸ್ಸಿನೊಳಗಿನವರು:

400 ಮೀ. ಹರ್ಡಲ್ಸ್‌: ವಿ.ವಿ. ಜಿಶಾ (ಕೇರಳ)-1, ಪಿ. ಮೆರ್ಲಿನ್‌ (ಕೇರಳ)-2, ಪಿ. ಇನಿಯಾ (ತಮಿಳುನಾಡು)-3. ಕಾಲ: 1:03.56 ಸೆ.
ಲಾಂಗ್‌ಜಂಪ್‌: ಭೈರವಿ ರಾಯ್‌ (ಪಶ್ಚಿಮ ಬಂಗಾಳ)-1, ವಿ.ಸಿ. ಸ್ವಾತಿ (ಕೇರಳ)-2, ಕೆ. ಅಚ್ಯುತ ಕುಮಾರಿ (ಆಂಧ್ರ ಪ್ರದೇಶ)-3. ದೂರ: 5.95 ಮೀ.
ಷಾಟ್‌ಪಟ್‌: ತನ್ಲಾಯ್‌ ನರ್ಜರಿ (ಅಸ್ಸಾಂ)-1, ರಮಣ್‌ಪ್ರೀತ್‌ (ಪಂಜಾಬ್‌)-2, ಸುಮನ್‌ದೇವಿ (ಪಂಜಾಬ್‌)-3. ದೂರ: 12.51 ಮೀ.

18 ವರ್ಷ ವಯಸ್ಸಿನೊಳಗಿನವರು:
400 ಮೀ. ಹರ್ಡಲ್ಸ್‌: ಎಚ್‌. ಕಾವ್ಯಾ (ಆಂಧ್ರ ಪ್ರದೇಶ)-1, ಗೌರಿ ರಾಣಿ (ಪಶ್ಚಿಮ ಬಂಗಾಳ)-2, ಶಿಮೋನಾ ಮಸ್ಕರೇನಸ್‌ (ಕರ್ನಾಟಕ)-3. ಕಾಲ: 1:05.33 ಸೆ.
ಟ್ರಿಪಲ್‌ ಜಂಪ್‌: ಆದಿರಾ ಸುರೇಂದ್ರನ್‌ (ಕೇರಳ)-1, ವಿ. ಅಕ್ಷಯ ಸೋನಾ (ತಮಿಳುನಾಡು)-2, ಜೆನಿಮೋಳ್‌ ಜಾಯ್‌ (ಕೇರಳ)-3. ದೂರ: 12.86 ಮೀ.
ಡಿಸ್ಕಸ್‌ ಥ್ರೋ: ಪ್ರೀತಿ ರಾಣಿ (ಹರಿಯಾಣ)-1, ಕಮಲ್‌ಪ್ರೀತ್‌ ಕೌರ್‌ (ಪಂಜಾಬ್‌)-2, ರೇಣುಕಾ (ಹರಿಯಾಣ)-3. ದೂರ: 40.58 ಮೀ.
1000 ಮೀ. ಮೆಡ್ಲೆ ರಿಲೇ: ತಮಿಳುನಾಡು-1, ಕೇರಳ-2, ಕರ್ನಾಟಕ-3. ಕಾಲ: 2:16.03 ಸೆ.

16 ವರ್ಷ ವಯಸ್ಸಿನೊಳಗಿನವರು:
ಡಿಸ್ಕಸ್‌ ಥ್ರೋ: ನಿವೇದಿತಾ ಸಾವಂತ್‌ (ಕರ್ನಾಟಕ)-1, ಸೀಮಾ (ಹರಿಯಾಣ)-2, ಸಾಲ್ಮಿ ಕಿಪ್ಸೊಟಾ (ಒಡಿಶಾ)-3. ದೂರ: 37.08 ಮೀ.
ಷಾಟ್‌ಪಟ್‌: ಜೆ. ಗೌರಿಶಂಕರಿ (ತಮಿಳುನಾಡು)-1, ನಿವೇದಿತಾ ಸಾವಂತ್‌ (ಕರ್ನಾಟಕ)-2, ಪಿ. ಪ್ರಿಯಾಂಕಾ (ತಮಿಳುನಾಡು)-3. ದೂರ: 12.52 ಮೀ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT