ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಂಪರೆ, ಸಂಸ್ಕೃತಿ ಉಳಿಸಿ: ಪಾಟೀಲ

Last Updated 17 ಡಿಸೆಂಬರ್ 2013, 5:34 IST
ಅಕ್ಷರ ಗಾತ್ರ

ಬಿೀದರ್: ವಿದ್ಯಾರ್ಥಿಗಳಿಗೆ ದೇಶದ ಭವ್ಯ ಐತಿಹಾಸಿಕ ಪರಂಪರೆ ಮತ್ತು ಸಂಸ್ಕೃತಿಯನ್ನು ಪರಿಚಯಿಸಬೇಕಾದ ಅಗತ್ಯವಿದೆ ಎಂದು ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ ಹೇಳಿದರು.

ಔರಾದ್‌ ತಾಲ್ಲೂಕಿನ ಮುರ್ಕಿ ಸರ್ಕಾರಿ ಪ್ರೌಢಶಾಲೆಯಲ್ಲಿ ಈಚೆಗೆ ನಡೆದ ವಿದ್ಯಾರ್ಥಿ ಪ್ರೇರಣೆ ಮತ್ತು ಶಿಕ್ಷಣ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಧನೆಗೆ ಕಠಿಣ ಪರಿಶ್ರಮ, ಧೈರ್ಯ, ಏಕಾಗ್ರತೆ, ತ್ಯಾಗ ಬೇಕು. ಸತತ ಪ್ರಯತ್ನದಿಂದ ಉನ್ನತ ಸಾಧನೆ ಸಾಧ್ಯ. ಇಂದು ಬಹುತೇಕ ವಿದ್ಯಾರ್ಥಿಗಳ ಮನಸ್ಥಿತಿ ದುರ್ಬಲ­ವಾಗಿದೆ. ನಮ್ಮಿಂದ ಸಾಧನೆ ಸಾಧ್ಯವಿಲ್ಲ ಎಂದು ಭಾವಿಸುತ್ತಾರೆ. ಇದು ಸರಿಯಲ್ಲ. ಪ್ರಯತ್ನದಿಂದ ಉತ್ತಮ ಸಾಧನೆ ಖಂಡಿತ ಸಾಧ್ಯವಿದೆ ಎಂದು ಹೇಳಿದರು.

ಶರಣು ಹಣಮಶೆಟ್ಟಿ ಮಾತನಾಡಿ, ವಿದ್ಯಾರ್ಥಿ ಪ್ರೇರಣೆ ಮತ್ತು ಶಿಕ್ಷಣ ಜಾಗೃತಿ ಅಭಿಯಾನದ ವಿದ್ಯಾರ್ಥಿ­ಗಳಲ್ಲಿ ಉತ್ಸಾಹವನ್ನು ಮೂಡಿಸಲು ಕಾರಣವಾಗಲಿದೆ ಎಂದು ಹೇಳಿದರು.

ಮುಖ್ಯಶಿಕ್ಷಕ  ಮಾರುತಿರಾವ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು.  ಮನೋಜಕುಮಾರ ಬಿರಾದಾರ, ಮನ್ಮಥಪ್ಪ ಬಿರಾದಾರ, ಹಕ್ಯಾಳ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಗುರು ಸೂರ್ಯಕಾಂತ ಧರಣೆ, ಪ್ರತಿಷ್ಠಾನದ ಚಂದ್ರಶೇಖರ ಗಾದಗೆ, ಮನೋಜಕುಮಾರ ಬುಕ್ಕಾ  ಇದ್ದರು. ವಿದ್ಯಾರ್ಥಿಗಳಿಗೆ ದೇಶದ ಭವ್ಯ ಐತಿಹಾಸಿಕ ಪರಂಪರೆ ಮತ್ತು ಸಂಸ್ಕೃತಿಯನ್ನು ಪರಿಚಯಿಸಬೇಕಾದ ಅಗತ್ಯವಿದೆ ಎಂದು ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ ಹೇಳಿದರು.

ಔರಾದ್‌ ತಾಲ್ಲೂಕಿನ ಮುರ್ಕಿ ಸರ್ಕಾರಿ ಪ್ರೌಢಶಾಲೆಯಲ್ಲಿ ಈಚೆಗೆ ನಡೆದ ವಿದ್ಯಾರ್ಥಿ ಪ್ರೇರಣೆ ಮತ್ತು ಶಿಕ್ಷಣ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಧನೆಗೆ ಕಠಿಣ ಪರಿಶ್ರಮ, ಧೈರ್ಯ, ಏಕಾಗ್ರತೆ, ತ್ಯಾಗ ಬೇಕು. ಸತತ ಪ್ರಯತ್ನದಿಂದ ಉನ್ನತ ಸಾಧನೆ ಸಾಧ್ಯ. ಇಂದು ಬಹುತೇಕ ವಿದ್ಯಾರ್ಥಿಗಳ ಮನಸ್ಥಿತಿ ದುರ್ಬಲ­ವಾಗಿದೆ. ನಮ್ಮಿಂದ ಸಾಧನೆ ಸಾಧ್ಯವಿಲ್ಲ ಎಂದು ಭಾವಿಸುತ್ತಾರೆ. ಇದು ಸರಿಯಲ್ಲ. ಪ್ರಯತ್ನದಿಂದ ಉತ್ತಮ ಸಾಧನೆ ಖಂಡಿತ ಸಾಧ್ಯವಿದೆ ಎಂದು ಹೇಳಿದರು.

ಶರಣು ಹಣಮಶೆಟ್ಟಿ ಮಾತನಾಡಿ, ವಿದ್ಯಾರ್ಥಿ ಪ್ರೇರಣೆ ಮತ್ತು ಶಿಕ್ಷಣ ಜಾಗೃತಿ ಅಭಿಯಾನದ ವಿದ್ಯಾರ್ಥಿ­ಗಳಲ್ಲಿ ಉತ್ಸಾಹವನ್ನು ಮೂಡಿಸಲು ಕಾರಣವಾಗಲಿದೆ ಎಂದು ಹೇಳಿದರು.

ಮುಖ್ಯಶಿಕ್ಷಕ  ಮಾರುತಿರಾವ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು.  ಮನೋಜಕುಮಾರ ಬಿರಾದಾರ, ಮನ್ಮಥಪ್ಪ ಬಿರಾದಾರ, ಹಕ್ಯಾಳ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಗುರು ಸೂರ್ಯಕಾಂತ ಧರಣೆ, ಪ್ರತಿಷ್ಠಾನದ ಚಂದ್ರಶೇಖರ ಗಾದಗೆ, ಮನೋಜಕುಮಾರ ಬುಕ್ಕಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT