ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೋರ್ಸ್ ಇಂಡಿಯಾ ತಂಡದ ಹೊಸ ಕಾರು

Last Updated 3 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಸಿಲ್ವರ್‌ಸ್ಟೋನ್ (ಐಎಎನ್‌ಎಸ್): ಫಾರ್ಮುಲಾ ಒನ್ ತಂಡ ಫೋರ್ಸ್ ಇಂಡಿಯಾ 2012ರ ಋತುವಿನ ರೇಸ್‌ಗಳಲ್ಲಿ ಬಳಸುವ ತನ್ನ ಹೊಸ ಕಾರನ್ನು ಶುಕ್ರವಾರ ಅನಾವರಣಗೊಳಿಸಿತು. ಸಿಲ್ವರ್‌ಸ್ಟೋನ್‌ನಲ್ಲಿರುವ ತಂಡದ ಕೇಂದ್ರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಚಾಲಕರಾದ ಪೌಲ್ ಡಿ ರೆಸ್ಟಾ ಮತ್ತು ನಿಕೊ ಹಕೆನ್‌ಬರ್ಗ್ `ವಿಜೆಎಂ05~ ಕಾರನ್ನು ಅನಾವರಣಗೊಳಿಸಿದರು.

ತಂಡದ ರಿಸರ್ವ್ ಚಾಲಕ ಜೂಲ್ಸ್ ಬಿಯಾನ್‌ಶಿ ಈ ವೇಳೆ ಹಾಜರಿದ್ದರು. ತಂಡದ ತಾಂತ್ರಿಕ ನಿರ್ದೇಶಕ ಆ್ಯಂಡ್ರ್ಯೂ ಗ್ರೀನ್ ಅವರ ಉಸ್ತುವಾರಿಯಲ್ಲಿ ನಿರ್ಮಿಸಿದ ಎರಡನೇ ಕಾರು ಇದಾಗಿದೆ. ಕಳೆದ ಋತುವಿನಲ್ಲಿ ಫೋರ್ಸ್ ಇಂಡಿಯಾ ತಂಡ ಆರನೇ ಸ್ಥಾನ ಪಡೆದಿತ್ತು. ಈ ಬಾರಿ ಅದಕ್ಕಿಂತಲೂ ಮೇಲಿನ ಸ್ಥಾನ ಪಡೆಯುವ ನಿಟ್ಟಿನಲ್ಲಿ `ವಿಜೆಎಂ05~ ಕಾರನ್ನು ಬಳಸಲಾಗುವುದು.

ಈ ಬಾರಿ ಇನ್ನಷ್ಟು ಉತ್ತಮ ಪ್ರದರ್ಶನ ನೀಡಲು ಈ ಕಾರು ನೆರವಾಗಲಿದೆ ಎಂದು ಗ್ರೀನ್ ತಿಳಿಸಿದ್ದಾರೆ. `ಐದನೇ ಸ್ಥಾನ ಗಿಟ್ಟಿಸಲು ನಾವು ಪ್ರಯತ್ನಿಸಲಿದ್ದೇವೆ~ ಎಂದು ತಂಡದ ಮುಖ್ಯಸ್ಥ ವಿಜಯ್ ಮಲ್ಯ ಹೇಳಿದ್ದಾರೆ. ಫೋರ್ಸ್ ಇಂಡಿಯಾ ತಂಡದ ಕಾರುಗಳಲ್ಲಿ ಈ ಬಾರಿಯೂ ಮರ್ಸಿಡಿಸ್ ಕಂಪೆನಿಯ ಎಂಜಿನ್ ಬಳಸಲಾಗಿದೆ. ಅದೇ ರೀತಿ ಮೆಕ್‌ಲಾರೆನ್‌ನ `ಗೇರ್ ಬಾಕ್ಸ್~ ಇದು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT