ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣಗುಡುತ್ತಿರುವ ನಾರಿಹಳ್ಳದ ಪಾತ್ರ

Last Updated 15 ಜುಲೈ 2013, 4:05 IST
ಅಕ್ಷರ ಗಾತ್ರ

ಸಂಡೂರು: ಸಂಡೂರು ಹಾಗೂ ದೋಣಿಮಲೈಗಳ ಪ್ರಮುಖ ನೀರಿನ ಮೂಲವಾಗಿರುವ ನಾರಿಹಳ್ಳದ ಪಾತ್ರದಲ್ಲಿ 2010ರಲ್ಲಿ ಉತ್ತಮ ಮಳೆಯಾಗಿದ್ದ ಕಾರಣ, ಅಂದು ನಾರಿಹಳ್ಳ ಉಕ್ಕಿ ಹರಿದಿತ್ತು. ಆದರೆ ಎರಡು ವರ್ಷಗಳಿಂದ ನಾರಿಹಳ್ಳದ ಪಾತ್ರದಲ್ಲಿ ಉತ್ತಮ ಮಳೆಯಾಗದ ಕಾರಣ ಬಣಗುಡುತ್ತಿದೆ.

2010ರಲ್ಲಿ ನಾರಿಹಳ್ಳ ಉಕ್ಕಿ ಹರಿದಾಗ ಈ ಭಾಗದ ಜನತೆ ತಂಡೋಪತಂಡವಾಗಿ ಬಂದು ಭೋರ್ಗರೆತವೀಕ್ಷಿಸಿದ್ದರು. ಆದರೆ ಈಗ ಮಳೆ ಇಲ್ಲದೆ ಕೆರೆಕುಂಟೆಗಳು, ತೊರೆಗಳು ಬತ್ತಿ ಬರಡಾಗಿವೆ. ದನಕರುಗಳಿಗೂ ಕುಡಿಯಲು ನೀರಿಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಿದೆ. 

ನಾರಿಹಳ್ಳ ಜಲಾಶಯವು ತುಂಬಿದರೆ ಸಂಡೂರು ಮತ್ತು ದೋಣಿಮಲೈಗೆ ನೀರಿನ ತೊಂದರೆಯಾಗದು. ಅಲ್ಲದೆ ಅಂತರ್ಜಲ ಮಟ್ಟ ಹೆಚ್ಚುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT