ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣ ಕೊಡುವ ನೀರು

Last Updated 1 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಪ್ರಶ್ನೆ: 1. ಪ್ರನಾಳದಲ್ಲಿನ ನೀರು ಸಂಪೂರ್ಣವಾಗಿ ಆವಿಯಾದ ನಂತರ ಬದಲಾವಣೆಗಳೇನು? ಯಾಕೆ?

2. ಅನಂತರ 3– -4 ಹನಿ ನೀರನ್ನು ಪ್ರನಾಳಕ್ಕೆ ಹಾಕಿದಾಗ ಯಾವ ಬದಲಾವಣೆ ಆಗುತ್ತದೆ? ಯಾಕೆ?

ಉತ್ತರ
1. ಮೈಲುತುತ್ತದ ಒಂದು ಅಣುವಿನಲ್ಲಿ 5 ನೀರಿನ ಅಣುಗಳಿರುತ್ತವೆ. ಅದನ್ನು ನೀರಿನಲ್ಲಿ ಕರಗಿಸಿ ಕಾಯಿಸುತ್ತಾ ಹೋದರೆ, ನೀರೆಲ್ಲ ಆವಿಯಾಗಿ ಮೈಲುತುತ್ತ ಬಿಳಿ ಪುಡಿಯ ರೂಪದಲ್ಲಿ ಗೋಚರಿಸುತ್ತದೆ.

ಸಾಮಗ್ರಿ: ಸ್ಪಿರಿಟ್ ಲ್ಯಾಂಪ್, ಪ್ರನಾಳ, ಹಿಡಿಕೆ, ನೀರು, ಮೈಲುತುತ್ತ.

ವಿಧಾನ
1. ಒಂದು ಬೋರೊಸಿಲ್ ಪ್ರನಾಳದಲ್ಲಿ ಸುಮಾರು 5 ಘನ ಸೆಂಟಿ ಮೀಟರಿನಷ್ಟು ನೀರು ತೆಗೆದುಕೊಳ್ಳಿ.

2. ಅದಕ್ಕೆ ಒಂದು ಚಿಕ್ಕ ಹಳಕು ಮೈಲುತುತ್ತ ಹಾಕಿ, ಅದು ಕರಗುವವರೆಗೆ ಕಲಕಿ.
3. ಈಗ ಪ್ರನಾಳವನ್ನು ಸ್ಪಿರಿಟ್ ಲ್ಯಾಂಪಿನ ಜ್ವಾಲೆಗೆ ಹಿಡಿದು, ಪ್ರನಾಳದಲ್ಲಿನ ಎಲ್ಲ ನೀರು ಆವಿಯಾಗುವವರೆಗೆ ಕಾಯಿಸಿ


ಕಾಯಿಸು
CuSO4 .5H2O----------------------------––––––––––––––––––CuSO4.
ನೀಲಿ ಬಣ್ಣದ ಮೈಲುತುತ್ತ ಬಿಳಿ ಬಣ್ಣದ ಮೈಲುತುತ್ತ

2. ಬಿಳಿ ಬಣ್ಣದ ಮೈಲುತುತ್ತಕ್ಕೆ ನೀರು ಹಾಕಿದಾಗ ಅದು ಮತ್ತೆ ನೀಲಿಯಾಗುತ್ತದೆ.
CuSO4  + ನೀರು--------––––––––––– -- CuSO4 .5H2O
ಬಿಳಿ ಬಣ್ಣದ ಮೈಲುತುತ್ತ ನೀಲಿ ಬಣ್ಣದ ಮೈಲುತುತ್ತ. ಅಂದರೆ, ಮೈಲುತುತ್ತಕ್ಕೆ ನೀಲಿ ಬಣ್ಣ ಬಂದಿದ್ದರೆ ಅದು ನೀರಿನಿಂದ ಮಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT