ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲಾಢ್ಯ ತಂಡಗಳ ವಿರುದ್ಧ ಗೆಲ್ಲಬೇಕು

Last Updated 11 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಲೀಗ್ ಹಂತದಲ್ಲಿ ಎಲ್ಲ ಪಂದ್ಯಗಳನ್ನು ಗೆದ್ದರೆ ಅದ್ಭುತ; ಆದರೆ ಹಾಗೆ ಆಗುವುದು ಕಷ್ಟ. ಆದರೂ ಬಲಾಢ್ಯ ಎನಿಸಿದ ತಂಡಗಳ ಎದುರು ಗೆಲುವು ಪಡೆದು ಮುನ್ನುಗ್ಗುವುದಂತೂ ಮುಖ್ಯ. ಆಗಲೇ ಭಾರತ ತಂಡದ ವಿಶ್ವಾಸ ಹೆಚ್ಚುತ್ತಾ ಸಾಗುತ್ತದೆ...

-ಹೀಗೆ ಹೇಳಿದ್ದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವ್ ವಾ. ‘ಮಹತ್ವದ ಹಾಗೂ ದೊಡ್ಡದೆನಿಸಿದ ಪಂದ್ಯ ಗೆಲ್ಲುವುದ ಮುಖ್ಯ. ದಕ್ಷಿಣ ಆಫ್ರಿಕಾ ತಂಡವು ವಿಶ್ವಕಪ್‌ಗಳಲ್ಲಿ ಅಂಥ ಪಂದ್ಯಗಳಲ್ಲಿಯೇ ಅನೇಕ ಬಾರಿ ಎಡವಿದೆ. ಆಸ್ಟ್ರೇಲಿಯಾ ಯಶಸ್ಸು ಸಾಧ್ಯವಾಗಿತ್ತು ದೊಡ್ಡ ಪಂದ್ಯಗಳಲ್ಲಿ ವಿಜಯ ಸಾಧಿಸುವಲ್ಲಿ ವಿಫಲವಾಗದೇ ಇರುವುದು. ಭಾರತದವರೂ ಹತ್ತನೇ ವಿಶ್ವಕಪ್‌ನಲ್ಲಿ ಈ ಅಂಶವನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು’ ಎಂದು ಶುಕ್ರವಾರ ಇಲ್ಲಿ ಸುದ್ದಿಗಾರರಿಗೆ ಹೇಳಿದರು.

‘ಭಾರತ ತಂಡವು ಅನುಭವಿಗಳು ಹಾಗೂ ಯುವ ಆಟಗಾರರಿಂದ ಉತ್ತಮ ಸಮತೋಲನ ಪಡೆದುಕೊಂಡಿದೆ. ಗ್ಯಾರಿ ಕರ್ಸ್ಟನ್ ಅವರಂಥ ಪ್ರಭಾವಿ ಕೋಚ್ ಮಾರ್ಗದರ್ಶನವೂ ಇದೆ. ಇತ್ತೀಚೆಗೆ ಈ ತಂಡದವರು ಆಡಿದ ರೀತಿಯಲ್ಲಿ ಆಕ್ರಮಣಕಾರಿ ಮನೋಭಾವ ಎದ್ದು ಕಾಣಿಸಿದೆ. ಈ ವಿಷಯದಲ್ಲಿ ದಕ್ಷಿಣ ಆಫ್ರಿಕಾ ಕೂಡ ಅಷ್ಟೇ ಉನ್ನತ ಮಟ್ಟದಲ್ಲಿದೆ’ ಎಂದು ಅವರು ವಿವರಿಸಿದರು.

‘ವಿಶ್ವಕಪ್ ಇತಿಹಾಸವನ್ನು ಒಮ್ಮೆ ನೋಡಿ. ಗೆಲುವು ಅಗತ್ಯ ಹಾಗೂ ಅನಿವಾರ್ಯ ಎನಿಸಿದಾಗಲೆಲ್ಲ ಆಸ್ಟ್ರೇಲಿಯಾದವರು ಹೆಚ್ಚಿನ ಬಾರಿ ಯಶಸ್ವಿಯಾಗಿದ್ದಾರೆ. ಆದರೆ ದಕ್ಷಿಣ ಆಫ್ರಿಕಾ ಹಾಗೂ ಭಾರತದವರು ಅಂಥ ಒತ್ತಡದ ಪಂದ್ಯದಲ್ಲಿ ನಿರಾಸೆ ಹೊಂದಿದ್ದಾರೆ. ವ್ಯತ್ಯಾಸ ಆಗಿರುವುದೇ ಅಲ್ಲ. ಆ ಕೊರತೆಯನ್ನು ತುಂಬಿಕೊಳ್ಳುವ ಕಡೆಗೆ ಗಮನ ನೀಡಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT