ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಬ್ ಬೆದರಿಕೆ ಕರೆ: ಐಫೆಲ್ ಗೋಪುರದಿಂದ ಜನರ ತೆರವು

Last Updated 26 ಫೆಬ್ರುವರಿ 2011, 16:15 IST
ಅಕ್ಷರ ಗಾತ್ರ

ಪ್ಯಾರಿಸ್ (ಡಿಪಿಎ): ಅನಾಮಧೇಯರ ಬಾಂಬ್ ಸ್ಫೋಟದ ಬೆದರಿಕೆ ಕರೆಯ ಹಿನ್ನೆಲೆಯಲ್ಲಿ ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾದ ಪ್ಯಾರಿಸ್‌ನ ಐಫೆಲ್ ಗೋಪುರ ಮತ್ತು  ಮಾಂಟಾಪರ್‌ನಸ್ಸೆ ಪ್ರವಾಸಿ ಕೇಂದ್ರದಿಂದ ಶುಕ್ರವಾರ ರಾತ್ರಿ ಸಾರ್ವಜನಿಕರನ್ನು ತೆರವು ಗೊಳಿಸಲಾಯಿತು.

ಐಫೆಲ್ ಗೋಪುರ ಮತ್ತು ಮಾಂಟಾಪರ್‌ನಸ್ಸೆ ಪ್ರವಾಸಿ ಕೇಂದ್ರದ ಮೇಲೆ ಬಾಂಬ್ ದಾಳಿ ನಡೆಸಲಾಗುವುದು ಎಂಬ 2 ಅನಾಮಧೇಯ ಕರೆಗಳು ಪೊಲೀಸರಿಗೆ ಬಂದವು. ಈ ಹಿನ್ನೆಲೆಯಲ್ಲಿ  ಸುಮಾರು 2000 ಮಂದಿಯ ಸುರಕ್ಷತೆಯ ದೃಷ್ಟಿಯಿಂದ ಜನರನ್ನು ಈ ಎರಡೂ ಸ್ಥಳಗಳಿಂದ ಹೊರಹೋಗುವಂತೆ ಆದೇಶಿಸಲಾಯಿತು.

ಸ್ಫೋಟಕ ಸಾಮಗ್ರಿಗಳಿಗಾಗಿ ಐಫೆಲ್ ಗೋಪುರ ಮತ್ತು ಮಾಂಟಾಪರ್‌ನಸ್ಸೆ ಪ್ರವಾಸಿ ಕೇಂದ್ರದಲ್ಲಿ  ಶೋಧ ಕಾರ್ಯ ನಡೆಯಿತು. ಎರಡು  ಗಂಟೆಗಳ ನಂತರ ಮಾಂಟಾಪರ್‌ನಸ್ಸೆ ಪ್ರವಾಸಿ ಕೇಂದ್ರವನ್ನು ತೆರೆಯಲಾಯಿತು. ಆದರೆ ಐಫೆಲ್ ಗೋಪುರದ ಪ್ರವೇಶವನ್ನು ಬಂದ್ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT