ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಡಿಗೆ ತಾಯ್ತನ: ಮಸೂದೆ ಸಿದ್ಧ

Last Updated 4 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಬಾಡಿಗೆ ತಾಯಿಯಾಗಲು ಸಿದ್ಧವಿರುವ ಮಹಿಳೆಯು ತನ್ನ ಸ್ವಂತ ಮಗು ಸೇರಿದಂತೆ ಮೂರಕ್ಕಿಂತ ಹೆಚ್ಚು ಮಕ್ಕಳಿಗೆ ಜನ್ಮ ನೀಡಲು ಇನ್ನು ಅವಕಾಶವಿಲ್ಲ. ಇದಲ್ಲದೇ ಎರಡು ಹೆರಿಗೆಗಳ ಮಧ್ಯೆ ಕನಿಷ್ಠ ಎರಡು ವರ್ಷ ಅಂತರ ಇರಲೇಬೇಕು.

ಸಂಸತ್ತಿನಲ್ಲಿ ಮಂಡಿಸಲು ಉದ್ದೇಶಿಸಲಾದ `ಸಂತಾನೋತ್ಪತ್ತಿ ನೆರವು ತಂತ್ರಜ್ಞಾನ' (ಎಆರ್‌ಟಿ) ಮಸೂದೆಯಲ್ಲಿ ಅಳವಡಿಸಲಾದ ಕೆಲ ಪ್ರಮುಖ ಭಾಗಗಳು ಇವು.

ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಇಂಥದೊಂದು ಮಸೂದೆ ಸಿದ್ಧಪಡಿಸಲಾಗಿದೆ. ಅನಿಯಂತ್ರಿತ ಎಆರ್‌ಟಿ ಕ್ಲಿನಿಕ್‌ಗಳ ಮೆಲೆ ನಿಗಾ ಇಡುವುದು, ಬಾಡಿಗೆ ತಾಯ್ತನದ ವಾಣಿಜ್ಯಿಕ ಬಳಕೆಗೆ ತಡೆ, ಬಾಡಿಗೆ ತಾಯಂದಿರ ಹಿತಾಸಕ್ತಿ ಹಾಗೂ ಈ ವಿಧಾನದಲ್ಲಿ ಜನಿಸುವ ಮಗುವಿನ ರಕ್ಷಣೆಯ ಹಲವು ಉದ್ದೇಶಗಳು ಮಸೂದೆಯಲ್ಲಿವೆ.

ದೇಶದಾದ್ಯಂತ ಎಆರ್‌ಟಿ ಕ್ಲಿನಿಕ್‌ಗಳು ನೀಡುತ್ತಿರುವ ಸೇವೆ ಮೇಲೆ ನಿಗಾ ಇಡಲು ಸದ್ಯ ಯಾವುದೇ ವ್ಯವಸ್ಥೆ ಇಲ್ಲ. ಆದರೆ ಈಗ ಸಿದ್ಧಪಡಿಸಿರುವ ಮಸೂದೆಯು, 21ರಿಂದ 35 ವರ್ಷದೊಳಗಿನ ಮಹಿಳೆಯರು ಮಾತ್ರ ಬಾಡಿಗೆ ತಾಯಂದಿರಾಗಲು ಅವಕಾಶ ಕಲ್ಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT