ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲೆಯರ ಬಲ ಹೆಚ್ಚಿಸಿದ ಮೀನಾ

Last Updated 24 ಸೆಪ್ಟೆಂಬರ್ 2011, 5:05 IST
ಅಕ್ಷರ ಗಾತ್ರ

ಹಾವೇರಿ: `ಒಲ್ಲದ ಮನಸ್ಸಿನಿಂದ ವಧು ಹಸೆಮಣೆ ಮೇಲೆ ಕುಳಿತಿದ್ದಾಳೆ. ಕುಟುಂಬದವರು ಏನಾದರೂ ಆಗಲಿ ಮದುವೆ ಮಾಡಿ ಮುಗಿಸುವ ತರಾತುರಿ ಯಲ್ಲಿದ್ದಾರೆ. ಶಾಲೆಗೆ ಬರಬೇಕಾದ ತಮ್ಮ ಗೆಳತಿಗೆ ಮನೆಯವರ ಒತ್ತಡಕ್ಕೆ ಮಣಿದು ತಾಳಿಗೆ ಕೊರಳು ಕೊಡಲು ಸಿದ್ಧವಾಗಿದ್ದಾಳೆ ಎಂಬ ಸುದ್ದಿ ತಿಳಿಯು ತ್ತಿದ್ದಂತೆ ಕೆಲ ವಿದ್ಯಾರ್ಥಿನಿಯರು ಶಾಲೆ ಯಿಂದ ಮದುವೆ ಮನೆಗೆ ತೆರಳಿ `ಅಪ್ರಾಪ್ತ ವಯಸ್ಸಿನಲ್ಲಿಯೇ ಮದುವೆ ಮಾಡುವುದು ಕಾನೂನು ಬಾಹಿರ, ಅದರಿಂದ ದುಷ್ಪರಿಣಾಮಗಳೇ ಹೆಚ್ಚು ಎಂದು ಗೆಳತಿಯ ಪಾಲಕರಿಗೆ ತಿಳಿಸಿ ಕೊಡುವ ಮೂಲಕ ಗೆಳತಿಯ ಮದುವೆ ತಡೆಯುವಲ್ಲಿ ಯಶಸ್ವಿಯಾದರು~

ಇದು ಯಾವುದೇ ಸಿನಿಮಾದ ಕಥಾ ವಸ್ತುವಲ್ಲ. ಜಿಲ್ಲೆಯ ಶಿಗ್ಗಾಂವ ತಾಲ್ಲೂ ಕಿನ ಮುಗಳಿಗಟ್ಟಿಯಲ್ಲಿ ಒಂದು ವರ್ಷದ ಹಿಂದೆ ನಡೆದ ನೈಜ ಘಟನೆಯಿದು.

ಇಂತಹದೇ ಇನ್ನೊಂದು ಘಟನೆ ರಾಣೆಬೆನ್ನೂರ ತಾಲ್ಲೂಕಿನ ರಾಹುತನ ಕಟ್ಟೆಯಲ್ಲಿ ನಡೆದಿದ್ದು, ಈ ಎರಡೂ ಘಟನೆಗಳನ್ನು ತಡೆಯುವಲ್ಲಿ ಯಶಸ್ವಿ ಯಾದ ಸರ್ಕಾರಿ ಪ್ರಾಥಮಿಕ ಶಾಲೆ ಗಳಲ್ಲಿರುವ ಮೀನಾ ತಂಡದ ವಿದ್ಯಾರ್ಥಿ, ವಿದ್ಯಾರ್ಥಿನಿಯರು.

ಹೆಣ್ಣು ಮಕ್ಕಳ ಶಿಕ್ಷಣದ ಜತೆಗೆ ಸಾಮಾಜಿಕ ಪಿಡುಗುಗಳಾದ ವರ ದಕ್ಷಿಣೆ, ಬಾಲ್ಯವಿವಾಹ, ಅನಕ್ಷರತೆ, ಬಾಲ ಕಾರ್ಮಿಕ ಪದ್ಧತಿ, ಜೀತ ಪದ್ಧತಿ, ಬಿಕ್ಷಾಟನೆ ಸೇರಿದಂತೆ ಅನೇಕ ವಿಷಯ ಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಸರ್ವ ಶಿಕ್ಷಣ ಅಭಿಯಾನದ ಅಡಿಯಲ್ಲಿ ಜಾರಿಗೆ ತಂದಿರುವ ಯೋಜನೆಯೇ `ಮೀನಾ~ ಯೋಜನೆ. ಈ ಯೋಜನೆ ದಿನಾಚರಣೆ ಇದೇ 24 ರಂದು ನಡೆಯಲಿದೆ.

ರಾಜ್ಯದಲ್ಲಿ ಕಳೆದ ನಾಲ್ಕು ವರ್ಷ ಗಳಿಂದ ಜಾರಿಯಲ್ಲಿರುವ ಈ ಯೋಜನೆ ಹಾವೇರಿ ಜಿಲ್ಲೆಯಲ್ಲಿ ಕಳೆದ ವರ್ಷ ದಿಂದ ಜಾರಿಗೆ ಬಂದಿದ್ದು, ಒಂದೇ ವರ್ಷದಲ್ಲಿ ಪರಿಣಾಮಕಾರಿಯಾ ಫಲಿತಾಂಶವನ್ನು ಪಡೆದಿದೆ.

ಈಗಾಗಲೇ ಜಿಲ್ಲೆಯ 1,166 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗಳಲ್ಲಿ `ಮೀನಾ~ ತಂಡಗಳು ರಚನೆಯಾ ಗಿವೆ. ಈ ತಂಡದ ಮೂಲಕ ವಿದ್ಯಾರ್ಥಿ ಗಳು ಹಲವಾರು ಸಾಮಾಜಿಕ ಚಟು ವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಹಾವೇರಿ ತಾಲ್ಲೂಕಿನ ಕೋಳೂರು ಶಾಲೆಯ `ಮೀನಾ~ ತಂಡದ ವಿದ್ಯಾರ್ಥಿ ಗಳು ಶಾಲೆಯ ಸುತ್ತಮುತ್ತ ಲಿನ ತಿಪ್ಪೆಗುಂಡಿ ಹಾಗೂ ಅಂಗಡಿಗಳನ್ನು ತೆರವು ಗೊಳಿ ಸಲು ಯಶಸ್ವಿಯಾಗಿದ್ದರೆ, ಹಾನಗಲ್ ತಾಲ್ಲೂಕಿನ ಬೆಳ ಗಾಲಪೇಟೆ ಶಾಲೆಯ ಮೀನಾ ತಂಡದ ಮಕ್ಕಳು ಹಾಗೂ ಮಾರ್ಗದರ್ಶಿ ಶಿಕ್ಷಕರು ಸೇರಿ `ಬೇರು ಚಿಗುರು~ ಮಾಸ ಪತ್ರಿಕೆಯನ್ನು ನಿರಂತರವಾಗಿ ಹೊರತರು ತ್ತಿದ್ದಾರೆ. ಎರಡು ಬಾಲ್ಯ ವಿವಾಹವನ್ನು ತಡೆಗಟ್ಟಿ ವಿದ್ಯಾರ್ಥಿನಿಯರನ್ನು ಮರಳಿ ಶಾಲೆಗೆ ಕರೆತರುವಲ್ಲಿ ಯಶಸ್ವಿಯಾಗಿ ರುವುದು ಜಿಲ್ಲೆಯ `ಮೀನಾ~ ತಂಡಗಳ ಹೆಗ್ಗಳಿಕೆ ಎಂದು ಕಾರ್ಯಕ್ರಮದ ಜಿಲ್ಲಾ ಯೋಜನಾ ಸಹಾಯಕ ಸಮನ್ವಯ ಅಧಿಕಾರಿ ಎಂ.ಎಸ್.ಗುಂಡಪಲ್ಲಿ ಹೇಳುತ್ತಾರೆ.

ಏನಿದು ಮೀನಾ?: ದಕ್ಷಿಣ ಏಷ್ಯಾದ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಯೂನಿ ಸೆಫ್ ರೂಪಿಸಿದ ವಿಶಿಷ್ಟ ಕಾರ್ಯಕ್ರಮ ಇದು. 1998 ಸೆ.24 ರಂದು ಭಾರತ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ ಹಾಗೂ ಪಾಕಿಸ್ತಾನ ದೇಶಗಳಲ್ಲಿ ಏಕ ಕಾಲದಲ್ಲಿ ಪ್ರಾರಂಭವಾದ ಈ ಯೋಜನೆ ಮಹಿಳಾ ಸಬಲೀಕರಣ ದೊಂದಿಗೆ ಬಾಲಕಿಯರ ಶಿಕ್ಷಣಕ್ಕಾಗಿ ವಿಶೇಷ ಒತ್ತು ನೀಡುವ ಉದ್ದೇಶ ಹೊಂದಿದೆ. ಶಿಕ್ಷಣದಿಂದ ವಂಚಿತರಾಗು ತ್ತಿರುವ ಗ್ರಾಮೀಣ ಪ್ರದೇಶದ ಬಾಲಕಿ  ಯರನ್ನು ಪ್ರತಿನಿಧಿಸುವ `ಮೀನಾ~ ಒಂದು ಕಾಲ್ಪನಿಕ ಪಾತ್ರ ಇದಾಗಿದೆ.

ಯೋಜನೆಯ ಕಾರ್ಯ ಚಟುವಟಿಕೆ ಗಳು: ಪ್ರತಿಯೊಂದು ಶಾಲೆಯ ಒಬ್ಬ ಶಿಕ್ಷಕಿ ಅಥವಾ ಶಿಕ್ಷಕನ ಮಾರ್ಗದರ್ಶನ ದೊಂದಿಗೆ 15 ವಿದ್ಯಾರ್ಥಿನಿಯರು ಹಾಗೂ 5 ವಿದ್ಯಾರ್ಥಿಗಳು `ಮೀನಾ~ ತಂಡದಲ್ಲಿರುತ್ತಾರೆ. ಪ್ರತಿ ಶನಿವಾರದ ಕೊನೆಯ ಅವಧಿಯಲ್ಲಿ ತಂಡ ಸಭೆ ಸೇರುತ್ತದೆ. ಸಭೆಯಲ್ಲಿ ಶಾಲೆ ಬಿಟ್ಟ ಹೆಣ್ಣು ಮಕ್ಕಳನ್ನು ಶಾಲೆಗೆ ಕರೆತರು ವುದು ಸೇರಿದಂತೆ ತಂಡದ ಸದಸ್ಯರು ತಮ್ಮ ಗಮನಕ್ಕೆ ಬಂದ ತಮ್ಮ ಸುತ್ತ ಮುತ್ತಲಿನ ಸಮಸ್ಯೆಗಳನ್ನು ಹಾಗೂ ಅದಕ್ಕೆ ಪರಿಹಾರೋಪಾಯಗಳನ್ನು ಚರ್ಚಿಸುತ್ತಾರೆ

ಎನ್ನುತ್ತಾರೆ ಮಾರ್ಗದರ್ಶಿ ಶಿಕ್ಷಕಿ ಸುಧಾ.ಡಿ.ಎಸ್. ಹೆಣ್ಣು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸರ್ಕಾರ ರೂಪಿಸುವ `ಮೀನಾ~ ಯೋಜನೆ ಜಿಲ್ಲೆಯ ಮಹಿಳಾ ಶಿಕ್ಷಣದ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ.
ಮಾರ್ಗದರ್ಶಿ ಶಿಕ್ಷಕಿ ಯರು ಈ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸಬೇಕಿದೆ ಎನ್ನುತ್ತಾರೆ ಸಾರ್ವ ಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್.ಬಿ.ಕೊಡ್ಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT