ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಸರ್ಕಾರ ವಜಾಕ್ಕೆ ಆಗ್ರಹ

Last Updated 18 ಮೇ 2012, 7:20 IST
ಅಕ್ಷರ ಗಾತ್ರ

ಹಿರಿಯೂರು: ಜನವಿರೋಧಿ ನೀತಿಗಳಲ್ಲಿ ತೊಡಗಿರುವ ಬಿಜೆಪಿ ಸರ್ಕಾರ ವಜಾಗೊಳಿಸುವಂತೆ ಒತ್ತಾಯಿಸಿ ನಗರದಲ್ಲಿ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ತಾಲ್ಲೂಕು ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ  ಎಸ್. ರಾಜಪ್ಪ ಮಾತನಾಡಿ, ನಾಲ್ಕು ವರ್ಷಗಳಿಂದ ಭ್ರಷ್ಟಾಚಾರ ಮಿತಿ ಮೀರಿದೆ. ಜನ ಸಾಮಾನ್ಯರ ಗೋಳು ಕೇಳುವವರು ಇಲ್ಲವಾಗಿದ್ದಾರೆ ಎಂದು ಆರೋಪಿಸಿದರು.
ಮಹಮದ್ ನಾಹೀದ್, ಗಾಂಧಿ, ಬಿ. ರಾಮಮೂರ್ತಿ, ಮೈಲಾರಿ, ಸಿದ್ದೇಶ್, ವೀರೇಶ್, ದಾದು, ಗಿರೀಶ್, ಸೋಮಶೇಖರ್, ಆರ್. ತಿಪ್ಪೇಸ್ವಾಮಿ, ಮಂಜುನಾಥ್, ಪಿ. ಲೋಹಿತ್, ಮುಸಾಫೀರ್, ದಿಲೀಪ್‌ಕುಮಾರ್, ಮಂಜಣ್ಣ, ಕೆ. ಶಿವಣ್ಣ, ಬಿ. ರವಿ, ಎನ್.ಆರ್. ರಂಜಿತ್, ಜಯ, ಸೋಮಶೇಖರ್, ರವಿಕುಮಾರ್, ರಂಗಸ್ವಾಮಿ, ಗವಿರಂಗ ಪಾಲ್ಗೊಂಡಿದ್ದರು.

ಚಳ್ಳಕೆರೆ ವರದಿ
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಿಂದ ನೆಹರು ವೃತ್ತದ ಮಾರ್ಗವಾಗಿ ತಾಲ್ಲೂಕು ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.

ಯುವ ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ. ಶಿವಕುಮಾರ ಸ್ವಾಮಿ ಮಾತನಾಡಿ, ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು 9 ತಿಂಗಳಾದರೂ ಸಚಿವ ಸಂಪುಟ ವಿಸ್ತರಣೆ ಮಾಡದೇ, ಅಭಿವೃದ್ಧಿ ಹಿನ್ನಡೆಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿದರು.

ತಾಲ್ಲೂಕು ಕಚೇರಿಗೆ ಬೀಗ ಜಡಿಯಲು ಮುಂದಾದ ಕೆಲ ಕಾರ್ಯಕರ್ತರನ್ನು ಪೊಲೀಸರು ತಡೆದರು. ನಂತರ ತಹಶೀಲ್ದಾರ್ ಕಚೇರಿಯ ಶಿರಸ್ತೇದಾರ್ ತಿಪ್ಪುರಾವ್ ಅವರಿಗೆ ಮನವಿ ಸಲ್ಲಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ. ತಿಪ್ಪೇಸ್ವಾಮಿ, ಲೋಕಸಭಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೀರಾಸಾಬಿಹಳ್ಳಿ ಮೋಹನ್, ಗುಂಡಪ್ಪರ ಶ್ರೀನಿವಾಸ್, ಹುಣಸೇಕಟ್ಟೆ ವೆಂಕಟೇಶ್, ರೆಡ್ಡಿಹಳ್ಳಿ ಶಿವಣ್ಣ, ಪಿ. ತಿಪ್ಪೇಸ್ವಾಮಿ, ಪರಶುರಾಂಪುರ ಕೆಂಚಪ್ಪ, ಯೋಗೀಶ್ ಇದ್ದರು.

ಹೊಳಲ್ಕೆರೆ ವರದಿ

ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಮತ್ತು ಮುಖ್ಯಮಂತ್ರಿ ಸದಾನಂದಗೌಡ ಅವರ ನಾಯಕತ್ವದ ವೈಫಲ್ಯ ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಮೆರವಣಿಗೆ ನಂತರ ತಹಶೀಲ್ದಾರ್ ಬಿ.ಬಿ. ಸರೋಜಾ ಅವರಿಗೆ ಮನವಿ ಸಲ್ಲಿಸಿದರು.

ಯುವ ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಪಿ. ಮಧುಸ್ವಾಮಿ, ಜಿಲ್ಲಾ ಘಟಕದ ಉಪಾಧ್ಯಕ್ಷ ಮರುಳಾರಾಧ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್. ರುದ್ರಪ್ಪ, ಎಂ.ಜಿ. ಲೋಹಿತ್ ಕುಮಾರ್, ಕರಿಯಪ್ಪ, ಹನುಮೇಶ್, ಪಾಡಿಗಟ್ಟೆ ಸುರೇಶ್, ಪಟ್ಟಣಪಂಚಾಯ್ತಿ ಅಧ್ಯಕ್ಷೆ ಗೀತಾ ಕೃಷ್ಣಮೂರ್ತಿ, ಲಿಂಗರಾಜು, ಹಾಲಸ್ವಾಮಿ, ಕೇಶವಣ್ಣ, ಸಯ್ಯದ್ ಸಜಿಲ್ ಭಾಗವಹಿಸಿದ್ದರು.

ಮೊಳಕಾಲ್ಮುರು ವರದಿ
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗುರುವಾರ ಇಲ್ಲಿನ ತಾಲ್ಲೂಕು ಕಚೇರಿ ಎದುರು ಯುವ ಕಾಂಗ್ರೆಸ್ ಸಮಿತಿ ಪ್ರತಿಭಟನೆ ನಡೆಸಿತು.ಸಮಿತಿ ಕ್ಷೇತ್ರಾಧ್ಯಕ್ಷ ಬಿ. ಯೋಗೇಶ್‌ಬಾಬು, ಮೊಗಲಹಳ್ಳಿ ಜಯಣ್ಣ, ಬಿ.ಟಿ. ನಾಗಭೂಷಣ್, ರಾಜಣ್ಣ, ಮಲ್ಲಿಕಾರ್ಜುನ, ಮಂಜುನಾಥ್, ರಾಯಾಪುರ ಸುರೇಶ್, ಭೋಗನಹಳ್ಳಿ ಮಲ್ಲೇಶ್, ಪಾಲಯ್ಯ, ಚನ್ನಬಸವರಾಜ್ ನೇತೃತ್ವ ವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT