ನವದೆಹಲಿ (ಪಿಟಿಐ): ವಿದೇಶಿ ವಿತ್ತೀಯ ಹೂಡಿಕೆದಾರರ (ಎಫ್‌ಐಐ) ಚಟುವಟಿಕೆಯಿಂದ ಕಳೆದ ವಾರ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಆರು ತಿಂಗಳಲ್ಲೇ ಗರಿಷ್ಠ ಮಟ್ಟ 18,289 ಅಂಶಗಳನ್ನು ತಲುಪಿದೆ. ಆದರೆ, ಈ ವಾರ ಬಿರುಸಿನ ಚಟುವಟಿಕೆ ದಾಖಲಾಗಲಿದ್ದು, ಖರೀದಿ ಮತ್ತು ಮಾರಾಟದ ಒತ್ತಡ ಹೆಚ್ಚುವುದರಿಂದ ಸೂಚ್ಯಂಕ ಇಳಿಯುವ ಸಾಧ್ಯತೆಗಳು ಹೆಚ್ಚಿವೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.