ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಸಿಐ ಅಧ್ಯಕ್ಷ ಸ್ಥಾನದತ್ತ ಶ್ರೀನಿವಾಸನ್

Last Updated 9 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಎನ್. ಶ್ರೀನಿವಾಸನ್ ಅವರು ಅಧ್ಯಕ್ಷ ಗಾದಿಗೆ ಏರುವ ಕಾಲ ಸನ್ನಿಹಿತವಾಗಿದೆ. ಐಪಿಎಲ್ ತಂಡವೊಂದರ ಮಾಲೀಕರಾಗಿರುವ ಅವರಿಗೆ ಬಿಸಿಸಿಐ ಅಧ್ಯಕ್ಷ ಹುದ್ದೆ ಏಕೆ ನೀಡಬೇಕು  ಎಂದು ಪ್ರಶ್ನಿಸಿ ಮಾಜಿ ಅಧ್ಯಕ್ಷ ಎ.ಸಿ. ಮುತ್ತಯ್ಯ  ಸುಪ್ರಿಂಕೋರ್ಟ್‌ನಲ್ಲಿ ಹೂಡಿದ್ದ ದಾವೆಯನ್ನು ಪರಿಶೀಲಿಸಿದ ಜಸ್ಟಿಸ್ ಆಫ್ತಾಬ್ ಆಲಂ ಮತ್ತು ಆರ್. ಎಂ. ಲೋಧಾ ಅವರ ಪೀಠವು ಈ ತೀರ್ಪು ನೀಡಿದೆ.

ಇದರಿಂದಾಗಿ ಸೆಪ್ಟೆಂಬರ್ 19ರಂದು ಸದ್ಯ ಬಿಸಿಸಿಐ ಅಧ್ಯಕ್ಷರಾಗಿರುವ ಶಶಾಂಕ್ ಮನೋಹರ್ ಅವರಿಂದ ಶ್ರೀನಿವಾಸನ್ ಅವರಿಗೆ ಅಧಿಕಾರ ಹಸ್ತಾಂತರವಾಗುವುದು ಬಹುತೇಕ ಖಚಿತವಾಗಿದೆ.

ಇದಕ್ಕೂ ಮುನ್ನ ಅಪೆಕ್ಸ್ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದ ಮುತ್ತಯ್ಯ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲೀಕತ್ವ ಹೊಂದಿರುವ ಶ್ರೀನಿವಾಸನ್ ಅವರು ಬಿಸಿಸಿಐನಲ್ಲಿ ಯಾವುದೇ ಪದವಿ ಹೊಂದುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದರು. ಅರ್ಜಿಯನ್ನು ಪರಿಶೀಲಿಸಿದ್ದ ಅಪೆಕ್ಸ್ ನ್ಯಾಯಾಲಯದ ಪೀಠವು, ಉನ್ನತ ಪೀಠಕ್ಕೆ ಪ್ರಕರಣವನ್ನು ವರ್ಗಾಯಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT