ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ವಿವಿ ವಿಭಜನೆಗೆ ಕಾಂಗ್ರೆಸ್ ತೀವ್ರ ವಿರೋಧ

Last Updated 2 ಫೆಬ್ರುವರಿ 2011, 19:25 IST
ಅಕ್ಷರ ಗಾತ್ರ


ಬೆಂಗಳೂರು: ಬೆಂಗಳೂರು ವಿವಿ  ವಿಭಜಿಸುವ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿ, ಅಂತಿಮ ನಿರ್ಣಯ ತೆಗೆದುಕೊಳ್ಳಲು ಪ್ರಸ್ತಾವನೆಯನ್ನು ಸಚಿವ ಸಂಪುಟಕ್ಕೆ ವರ್ಗಾಯಿಸಿರುವ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಕ್ರಮವನ್ನು ಕಾಂಗ್ರೆಸ್ ವಿರೋಧಿಸಿದೆ.

‘ಬೆಂಗಳೂರು ವಿ.ವಿ.ಯಂತಹ ದೊಡ್ಡ ಸ್ವಾಯತ್ತ ಸಂಸ್ಥೆಯೊಂದನ್ನು ವಿಭಜಿಸುವ ಅಥವಾ ಇರುವ ವಿ.ವಿ.ಯಿಂದ ಹೊಸದೊಂದು ವಿ.ವಿ.ಯನ್ನು ಹುಟ್ಟುಹಾಕುವ ನಿರ್ಣಯಕ್ಕೆ ಬರುವ ಮೊದಲು ಪರಿಷತ್ತು ಶಿಕ್ಷಣ ತಜ್ಞರು, ಸಿಂಡಿಕೇಟ್ ಸದಸ್ಯರ ಜೊತೆ ಚರ್ಚಿಸಬೇಕಿತ್ತು’ ಎಂದು ಕಾಂಗ್ರೆಸ್ ವಕ್ತಾರ ಡಾ.ಎಲ್. ಹನುಮಂತಯ್ಯ ಅಭಿಪ್ರಾಯಪಟ್ಟರು.

‘ವಿ.ವಿ. ವಿಭಜನೆ ಕುರಿತಂತೆ ಎಬಿವಿಪಿ ಹೊರತುಪಡಿಸಿ ಬೇರೆ ಯಾವುದೇ ಸಂಘಟನೆಗಳೊಂದಿಗೆ ಸರ್ಕಾರ ಚರ್ಚೆ ನಡೆಸಿಲ್ಲ’ ಎಂದು ದೂರಿದರು. ಈ ಕುರಿತಂತೆ ವಿದ್ಯಾರ್ಥಿ ಸಂಘಟನೆಗಳೊಂದಿಗೂ ಚರ್ಚೆ ನಡೆಸಬೇಕಿತ್ತು’ ಎಂದರು.

ಮೂಲಸೌಕರ್ಯ ವಿಫಲ: ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಸರ್ಕಾರ ವಿಫಲವಾಗಿರುವ ಕಾರಣ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಪ್ರವೇಶ ಬಯಸುವ ಮಕ್ಕಳ ಸಂಖ್ಯೆಯಲ್ಲಿ ಕುಸಿತ ಕಂಡುಬಂದಿದೆ ಎಂದು ಅವರು ಆರೋಪಿಸಿದರು.ಮೈಸೂರು ಮೂಲದ ಸ್ವಯಂಸೇವಾ ಸಂಸ್ಥೆ ‘ಪ್ರಥಮ್’ ರಾಜ್ಯದ ಪ್ರಾಥಮಿಕ ಶಾಲೆಗಳ ಸ್ಥಿತಿಗತಿಯ ಕುರಿತು ನಡೆಸಿದ ಅಧ್ಯಯನದ ವರದಿ ಆಧರಿಸಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಖಾಸಗಿ ಶಾಲೆಗೆ ಸೇರುವ ಮಕ್ಕಳ ಸಂಖ್ಯೆ ವರ್ಷಕ್ಕೆ ಶೇ 16ರಿಂದ 20ರಷ್ಟು ಹೆಚ್ಚಾಗುತ್ತಿದೆ’ ಎಂದರು.

‘ಕೇಸರೀಕರಣ’: ‘ಸರ್ಕಾರ ಉನ್ನತ ಶಿಕ್ಷಣವನ್ನು ಕೇಸರೀಕರಣಗೊಳಿಸುತ್ತಿದೆ’ ಎಂದು ಆರೋಪಿಸಿದ ಅವರು ‘ರಾಜ್ಯ ಸರ್ಕಾರ ಆರಂಭಿಸಿರುವ ಜ್ಞಾನ ಆಯೋಗದ ಸದಸ್ಯರಾದ ಪಿ.ವಿ. ಕೃಷ್ಣ ಭಟ್, ಆರ್.ಎಲ್.ಎಂ. ಪಾಟೀಲ್ ಮುಂತಾದವರು ಆರ್‌ಎಸ್‌ಎಸ್ ಹಿನ್ನೆಲೆಯವರು’ ಎಂದರು.

ಉರ್ದು ಅಕಾಡೆಮಿಯ ಅಧ್ಯಕ್ಷರನ್ನು ವಜಾಗೊಳಿಸುವಾಗ ಅಧ್ಯಕ್ಷರಿಂದ ವಿವರಣೆಯನ್ನೂ ಸರ್ಕಾರ ಪಡೆದಿಲ್ಲ ಎಂದು ಆರೋಪಿಸಿದರು.ಮಾಜಿ ಸಚಿವೆ ರಾಣಿ ಸತೀಶ್ ಮಾತನಾಡಿ, ‘ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡುವ ಶಿಕ್ಷಕರನ್ನು ತಕ್ಷಣವೇ ಸೇವೆಯಿಂದ ವಜಾಗೊಳಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT