ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡಜಂಗಮ ಪ್ರಮಾಣಪತ್ರ ನೀಡದಿರಿ

Last Updated 24 ಫೆಬ್ರುವರಿ 2011, 9:45 IST
ಅಕ್ಷರ ಗಾತ್ರ

ಯಲಬುರ್ಗಾ: ಲಿಂಗಾಯತ ಜಂಗಮ ಸಮಾಜದವರಿಗೆ ಬೇಡಜಂಗಮ ಪ್ರಮಾಣ ಪತ್ರ ವಿತರಿಸುವ ಸರ್ಕಾರದ ಕ್ರಮವನ್ನು ವಿರೋಧಿಸಿ ತಾಲ್ಲೂಕು ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯಗಳ ಒಕ್ಕೂಟ ಯಲಬುರ್ಗಾ ಬಂದ್ ಮಾಡುವ ಮೂಲಕ ಬುಧವಾರ ಪ್ರತಿಭಟನೆ ನಡೆಸಿತು.

ಕನಕದಾಸ ವೃತ್ತದಿಂದ ಮೆರವಣಿಗೆ ನಡೆಸಿದ ನಂತರ  ಕಿತ್ತೂರು ಚನ್ನಮ್ಮ ವೃತ್ತದ ಬಳಿ ಸಾರ್ವಜನಿಕರನ್ನು ಉದ್ದೇಶಿಸಿ ಮುಂಖಡರು ಮಾತನಾಡಿದರು. ಪರಿಶಿಷ್ಟ ಜಾತಿಗೆ ಸೇರಲು ಪ್ರಯತ್ನಿಸುತ್ತಿರುವ ವೀರಶೈವ ಲಿಂಗಾಯತ ಜಂಗಮರ ಆಚಾರ ವಿಚಾರಕ್ಕೂ ದಲಿತರ ಆಚಾರ ವಿಚಾರದಲ್ಲಿ ಭಾರಿ ವ್ಯತ್ಯಾಸಗಳಿದ್ದು, ಮೂಲ ಬೇಡಜಂಗಮರು ಈ ಪ್ರದೇಶದಲ್ಲಿ ತೀರ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಈ ಬಗ್ಗೆ ಸರ್ಕಾರ ಹೆಚ್ಚು ಗಮನಹರಿಸಬೇಕಾಗಿದೆ.

ತಾಲ್ಲೂಕಿನಲ್ಲಿ ಈಗಾಗಲೇ ಇಂತಹ ಪ್ರಮಾಣಪತ್ರ ಗಳನ್ನು ವಿತರಿಸಲಾಗಿದ್ದು, ಅವುಗಳನ್ನು ಹಿಂದಕ್ಕೆ ಪಡೆಯಬೇಕು. ಅಲ್ಪಸಂಖ್ಯಾತರಾಗಿರುವ ಜಂಗಮ ಸಮಾಜ ಬಾಂಧವರಿಗೆ ಪ್ರತ್ಯೇಕ ಮೀಸಲಾತಿಗೆ ಹೋರಾಟ ನಡೆಸುವಲ್ಲಿ ಆಸಕ್ತಿ ತೋರಬೇಕೆ ಹೊರೆತು ಪರಿಶಿಷ್ಟ ಜಾತಿ ವರ್ಗಕ್ಕೆ ಸೇರುವುದನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.

ತಾಲ್ಲೂಕಿನಲ್ಲಿ ಇನ್ನೂ ಜೀವಂತವಿರುವ ಅಸ್ಪೃಶ್ಯತೆ ನಿವಾರಣೆಯಲ್ಲಿ ಸಂಘಟನಾತ್ಮಕ ಹೋರಾಟ ಆಗಬೇಕಾಗಿದೆ. ದೇವದಾಸಿ ಪದ್ಧತಿ ಸಂಪೂರ್ಣ ನಿರ್ಮೂಲನೆಗೊಳ್ಳಬೇಕು. ಈ ನಿಟ್ಟಿನಲ್ಲಿ ವಿವಿಧ ದಲಿತ ಸಮಾಜಗಳ ಸಂಘಟನೆಗಳು ಒಗ್ಗಟ್ಟಿನಿಂದ ಹೋರಾಡಬೇಕಾಗಿದೆ. ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ದಲಿತರು ಈ ಬಗ್ಗೆ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಸಾಧಿಸಲು ಪ್ರಯತ್ನಿಸಬೇಕು ಎಂದು ವಿವಿಧ ದಲಿತ ಸಮಾಜದ ಮುಖಂಡರಾದ ಪುಟ್ಟರಾಜ ಪೂಜಾರ, ಮಂಗಳೇಶಪ್ಪ ಮಂಗಳೂರು, ಭೀಮಪ್ಪ ಹವಳೆ, ಡಿ.ಕೆ. ಪರಶುರಾಮ. ಟೋಪಣ್ಣ ನಾಯಕ ಮತ್ತಿತರರು ನುಡಿದರು.

ಪೊಲೀಸರು ವ್ಯಾಪಕ ಬಂದೋಬಸ್ತ್ ಏರ್ಪಡಿಸಿದ್ದರು. 
ಪ್ರಕರಣಗಳಿಲ್ಲ:
ತಾಲ್ಲೂಕಿನಲ್ಲಿ ಬೇಡಜಂಗಮ ಪ್ರಮಾಣಪತ್ರ ವಿತರಣೆಯಾಗಿಲ್ಲ. ಪ್ರಮಾಣಪತ್ರ ವಿತರಿಸುವಂತೆ ಯಾರಿಂದಲೂ ಮನವಿಬಂದಿಲ್ಲ. ಈ ಬಗ್ಗೆ ಕೆಲವರು ವಿಚಾರಿಸಿದ ಸಂದರ್ಭದಲ್ಲಿ ಅಗತ್ಯ ದಾಖಲೆಗಳೊಂದಿಗೆ ಹಾಜರುಪಡಿಸಲು ಸೂಚನೆ ನೀಡಲಾಗಿದೆ ಹೊರೆತು ಯಾರಿಗೂ ಪ್ರಮಾಣಪತ್ರ ನೀಡಿಲ್ಲ ಎಂದು ಮನವಿ ಸ್ವೀಕರಿಸಿದ ತಹಸೀಲ್ದಾರ್ ಈ.ಡಿ.ಭೃಂಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT