ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸತ್ತಿರುವ ರೈತರಿಗೆ ಪ್ರಲೋಭನೆ

Last Updated 4 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಭೂಸ್ವಾಧೀನ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾಗಿ ಅದಕ್ಕೆ ವಿವಿಧ ಪ್ರತಿಕ್ರಿಯೆ ಕಂಡು ಬಂದಿದೆ. ವಶಪಡಿಸಿಕೊಳ್ಳುವ ಜಮೀನಿಗೆ ಗ್ರಾಮೀಣ ಪ್ರದೇಶಗಳಲ್ಲಿ ಮಾರುಕಟ್ಟೆ ಬೆಲೆಯ ನಾಲ್ಕು ಪಟ್ಟು ಪರಿಹಾರ ಸಿಗುತ್ತದೆ ಎಂಬ ಅಂಶ ಬೇಸಾಯದ ಬಗೆಗೆ ಬೇಸತ್ತಿರುವ ರೈತರಿಗೆ ಪ್ರಲೋಭನೆ ಉಂಟುಮಾಡಬಹುದು.

ವಿಶೇಷ ಆರ್ಥಿಕ ವಲಯಕ್ಕಾಗಿ ವಶಪಡಿಸಿಕೊಳ್ಳುವ ಪ್ರದೇಶಕ್ಕೆ ಇದು ಅನ್ವಯಿಸುವುದಿಲ್ಲ. ಆ ಕಾನೂನಿನಡಿ ತೆಗೆದುಕೊಂಡ ಕೆಲವನ್ನು ಡಿನೋಟಿಫೈ ಮಾಡಲಾಗಿದೆ. ಈ `ವಲಯ'ಗಳು (ಎಸ್‌ಎಜೆಡ್, ಎಇಜೆಡ್) ನಿರೀಕ್ಷಿತ ಯಶಸ್ಸು ಕಂಡಿಲ್ಲ. ಆಹಾರ ಭದ್ರತಾ ಮಸೂದೆಗೆ ಹೋಲಿಸಿದರೆ, ಇವಕ್ಕೆ ಲೋಕಸಭೆಯಲ್ಲಿ ಒಪ್ಪಿಗೆ ಪಡೆಯುವಾಗ ಕಡಿಮೆ ಸಂಖ್ಯೆಯ ಸದಸ್ಯರು ಹಾಜರಿದ್ದು, ವಿಸ್ತೃತ ಚರ್ಚೆ ನಡೆಯದಿರುವುದನ್ನು ಗಮನಿಸಬೇಕು.

ರೈತರು ಜಮೀನುಗಳನ್ನು ಕೊಡಬೇಕಾಗುತ್ತದೆ ಎಂಬ ಸೂಚನೆ ದೊರೆತ ಕೂಡಲೇ ಸಾಮುದಾಯಿಕ ದೃಷ್ಟಿಕೋನದಿಂದ ಸಂಘಟಿತರಾಗಿ ದೂರಗಾಮಿ ಪರಿಣಾಮಗಳನ್ನು ವಿಶ್ಲೇಷಿಸಬೇಕು. ಶೇ 70-80 ಸಮ್ಮತಿ ಒತ್ತಡದಿಂದ ಸಾಧಿತವಾಗಬಾರದು. ಪರಿಸರ ಇಲಾಖೆಯ ಒಪ್ಪಿಗೆ ಯಾಂತ್ರಿಕ ಕ್ರಿಯೆ ಆಗಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT