ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟಿಷ್ ಲೈಬ್ರೆರಿ ಸೇರಿದ 'ಡಾ. ರಾಜ್ ಕುಮಾರ್' ಗ್ರಂಥ

Last Updated 15 ಸೆಪ್ಟೆಂಬರ್ 2013, 11:33 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ದಂತಕತೆಯಾದ ಕನ್ನಡದ ಜನಪ್ರಿಯ ನಟ ಡಾ. ರಾಜ್ ಕುಮಾರ್ ಅವರ ಕುರಿತ ಪುಸ್ತಕದ ಇಂಗ್ಲಿಷ್ ಆವೃತ್ತಿಯನ್ನು ಅಧಿಕೃತವಾಗಿ ಲಂಡನ್ ನ ಖ್ಯಾತ ಬ್ರಿಟಿಷ್ ಲೈಬ್ರೆರಿಗೆ ಹಸ್ತಾಂತರಿಸಲಾಗಿದೆ.

ಪತ್ರಕರ್ತ ಆರ್. ಮಂಜುನಾಥ್ ಹಾಗೂ ಅವರ ಪತ್ನಿ ಕಲಾವಿದೆ ಡಾ. ಸೌಮ್ಯ ಮಂಜುನಾಥ್ ಚವಾಣ್ ಅವರು ಪುಸ್ತಕವನ್ನು ಲಂಡನ್ ನ ಬ್ರಿಟಿಷ್ ಲೈಬ್ರೆರಿಯ ಏಷ್ಯಾ ಆಫ್ರಿಕಾ ಸ್ಟಡೀಸ್ ನ ಮುಖ್ಯಸ್ಥರಾದ ಡಾ. ಕ್ಯಾಥರೀನ್ ಈಗಲ್ಟನ್ ಅವರಿಗೆ ಶನಿವಾರ ರಾತ್ರಿ ನೀಡಿದರು.

'ಡಾ. ರಾಜ್ ಕುಮಾರ್, ದಿ ಪರ್ಸನ್ ಬಿಹೈಂಡ್ ದಿ ಪರ್ಸನಾಲಿಟಿ' ಶೀರ್ಷಿಕೆಯ ಪುಸ್ತಕವನ್ನು ಅವರ ಪುತ್ರ ಪುನೀತ್ ರಾಜ್ ಕುಮಾರ್ ಮತ್ತು ಪ್ರಕೃತಿ ಎನ್ ಬನವಾಸಿ ಅವರು ರಚಿಸಿದ್ದು ಕಳೆದ ವರ್ಷ ರಾಜ್ ಕುಮಾರ್ ಅವರ ಜನ್ಮದಿನ ಆಚರಣೆ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಔಪಚಾರಿಕವಾಗಿ ಬಿಡುಗಡೆ ಮಾಡಲಾಗಿತ್ತು.

'ಡಾ. ರಾಜ್ ಕುಮಾರ್ ಅವರು ಅಮೋಘ ನಟನಾಗಿ ಇದ್ದುದರ ಜೊತೆಗೆ ಗಾಯಕರೂ, ಸರಳತೆ, ವಿಧೇಯತೆಯ ಶಿಖರವೂ ಆಗಿ ಜೀವಮಾನದುದ್ದಕ್ಕೂ ಕರ್ನಾಟಕದ ಲಕ್ಷಾಂತರ ಮಂದಿಗೆ ಮಾದರಿ ವ್ಯಕ್ತಿಯಾಗಿದ್ದರು' ಎಂದು ಡಾ. ರಾಜ್ ಕುಮಾರ್ ಕುಟುಂಬದ ಆಪ್ತರಾದ ಮಂಜುನಾಥ್ ಪಿಟಿಐ ಜೊತೆಗೆ ಮಾತನಾಡುತ್ತಾ ಹೇಳಿದರು.

'ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಅಗ್ರ ಪ್ರತಿಪಾದಕರಾದ ಡಾ. ರಾಜ್ ಕುಮಾರ್ 1954ರಲ್ಲಿ ರಜತಪರದೆಯಲ್ಲಿ ಚೊಚ್ಚಲ ನಟನೆ ಮಾಡಿದ್ದರು. ಐದು ದಶಕಗಳ ವೃತ್ತಿ ಜೀವನದಲ್ಲಿ 208 ಕನ್ನಡ ಚಿತ್ರಗಳಲ್ಲಿ ನಟಿಸಿದ್ದರು. ಕನ್ನಡ ಸಿನಿಮಾ ಪ್ರೇಮಿಗಳು ಮಾತ್ರವೇ ಅಲ್ಲ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲೂ ಜನಪ್ರಿಯರಾಗಿದ್ದರು. ಈ ಜನಪ್ರಿಯತೆ ಅವರಿಗೆ 1985ರಲ್ಲಿ ಪ್ರತಿಷ್ಠಿತ 'ಕೆಂಟುಕಿ' ಪ್ರಶಸ್ತಿಯನ್ನೂ ತಂದು ಕೊಟ್ಟಿತ್ತು' ಎಂದು ಮಂಜುನಾಥ್ ಹೇಳಿದರು.

ಬಾಲಿವುಡ್ ಮಹಾನ್ ನಟ ಅಮಿತಾಭ್ ಬಚ್ಚನ್ ಕೂಡಾ ಡಾ. ರಾಜ್ ಕುಮಾರ್ ತಮ್ಮ ಬದುಕಿನಲ್ಲೂ ಪ್ರಭಾವ ಬೀರಿದ್ದುದಾಗಿ ಒಪ್ಪಿಕೊಂಡಿದ್ದರು ಎಂದು ಅವರು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT