ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯೋತ್ಪಾದನೆ ಜಾಗತಿಕ ಪೆಡಂಭೂತ

Last Updated 9 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ (ಪಿಟಿಐ):`ಭಯೋತ್ಪಾದನೆ ಇದೀಗ ಪೆಂಡಭೂತವಾಗಿ ಕಾಡುತ್ತಿದ್ದು ಈ ಸಮಸ್ಯೆ ನಿಯಂತ್ರಣಕ್ಕೆ ವಿಶ್ವಸಮುದಾಯ ಕಂಡುಕೊಂಡ ಮಾರ್ಗಗಳು ಫಲಪ್ರದವಾಗುತ್ತಿಲ್ಲ `ಎಂದು ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಕಳವಳ ವ್ಯಕ್ತಪಡಿಸಿದರು.

ವಿಶ್ವಸಂಸ್ಥೆ ಮಹಾಸಭೆಯಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಆಗಮಿಸಿರುವ ಭಾರತದ ಸಂಸದರ ನಿಯೋಗದಲ್ಲಿರುವ ಅಡ್ವಾಣಿ ಭಯೋತ್ಪಾದನೆ ನಿಗ್ರಹದ ಕುರಿತು ಸಮಗ್ರವಾಗಿ ಮಾತನಾಡಿದರು. ಅಲ್-ಖೈದಾ, ತಾಲಿಬಾನ್, ಲಷ್ಕರ್- ಎ-ತೊಯ್ಬಾ ದಂತಹ ಪ್ರಮುಖ ಉಗ್ರರ ಸಂಘಟನೆ ಸದಸ್ಯರ ವಿಧ್ವಂಸಕ ಕೃತ್ಯಗಳಿಂದ ಭಾರತ ಎರಡೂವರೆ ದಶಕಗಳಲ್ಲಿ ನಲುಗಿ ಹೋಗಿದ್ದು ಇಂತಹ ಕೃತ್ಯಗಳ ವಿರುದ್ಧ ಬಳಸುವ ಕ್ರಮಗಳು ಕಠೋರವಾಗಿರಬೇಕು ಎಂದು ಅವರು ಪ್ರತಿಪಾದಿಸಿದರು.

ಭಯೋತ್ಪಾದನೆ ಹಾಗೂ ತೀವ್ರಗಾಮಿತನಗಳು ದಕ್ಷಿಣ ಏಷ್ಯಾದ ಅಭಿವೃದ್ಧಿ, ಶಾಂತಿಗೆ ದೊಡ್ಡ ಗಂಭೀರ ಸವಾಲುಗಳಾಗಿ ಕಾಡುತ್ತಿದ್ದು, ಈ ಸಂಬಂಧ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಪರಸ್ಪರ ಸಹಮತಕ್ಕೆ ಬರುವ ಮೂಲಕ ಸಂಘಟನಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದರು.

ಭಯೋತ್ಪಾದನೆಯನ್ನು ಭಾರತ ಬಲವಾಗಿ ಖಂಡಿಸುತ್ತದೆ. ಯಾವುದೇ ಬಿಕ್ಕಟ್ಟನ್ನು ಮುಂದೆ ಮಾಡಿ ಭಯೋತ್ಪಾದನೆಯನ್ನು ಸಮರ್ಥನೆ ಮಾಡಿಕೊಳ್ಳುವುದನ್ನು ತಾವು ಒಪ್ಪುವುದಿಲ್ಲ ಎಂದರು. ಭಯೋತ್ಪಾದಕರ ಸುರಕ್ಷಿತ ತಾಣಗಳನ್ನು ನಾಶಗೊಳಿಸುವುದರ ಜತೆಯಲ್ಲಿ ಅವರ ಕೃತ್ಯಗಳಿಗೆ ಹಣಕಾಸು ನೆರವು ನೀಡುತ್ತಿರುವ ಮೂಲಗಳನ್ನು ಪತ್ತೆಹಚ್ಚುವುದು ಅಗತ್ಯ ಎಂದೂ ಅಡ್ವಾಣಿ ಹೇಳಿದರು.

ಕಾಶ್ಮೀರ ವಿವಾದ: ಪಾಕ್ ತಗಾದೆ
ವಿಶ್ವಸಂಸ್ಥೆ (ಪಿಟಿಐ): ವಸಾಹತುಶಾಹಿಯ ವಿರುದ್ಧ ಸೋಮವಾರ ವಿಶ್ವಸಂಸ್ಥೆಯಲ್ಲಿ ಚರ್ಚೆ ನಡೆದ ಸಂದರ್ಭದಲ್ಲಿ ಪಾಕಿಸ್ತಾನದ ರಾಜತಾಂತ್ರಿಕ ರಾಜಾ ಬಷೀರ್ ತರಾರ್ ಕಾಶ್ಮೀರ ವಿಚಾರ ಕೆದಕಿದ ಘಟನೆ ನಡೆದಿದೆ.

ಇದಕ್ಕೆ ಪ್ರತ್ಯುತ್ತರ ನೀಡಿದ ಭಾರತದ ರಾಜತಾಂತ್ರಿಕ ಪ್ರಕಾಶ್ ಗುಪ್ತಾ, ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಅದರ ಬಗ್ಗೆ ಇಲ್ಲಿ ಪ್ರಸ್ತಾಪಿಸುವುದು ಅನಗತ್ಯವಾಗಿತ್ತು ಎಂದು ಹೇಳಿದರು.

ಒಡಂಬಡಿಕೆ
ಗಂಭೀರ ಜಾಗತಿಕ ಸಮಸ್ಯೆಯಾಗಿರುವ ಭಯೋತ್ಪಾದನೆ ವಿರುದ್ಧ ವಿಶ್ವಸಂಸ್ಥೆ ಸಮಗ್ರ ಒಡಂಬಡಿಕೆ ರೂಪಿಸುವ ಸಮಯ ಬಂದಿದ್ದು, ಈ ಕೆಲಸ ಬಹಳ ದಿನಗಳಿಂದ ಬಾಕಿ ಉಳಿದಿದೆ. ಭಯೋತ್ಪಾದನೆ ನಿಗ್ರಹಕ್ಕೆ ಅನುಸರಿಸಬೇಕಾದ ಪ್ರತಿತಂತ್ರಗಳನ್ನು ಈ ಒಡಂಬಡಿಕೆಯಲ್ಲಿ ಹೇಳಬೇಕು. ಈ ದಿಸೆಯಲ್ಲಿ ವಿಶ್ವಂಸ್ಥೆಗೆ ಭಾರತ ಎಲ್ಲ ರೀತಿ ಸಹಕಾರ ನೀಡಲು ಸಿದ್ಧ ಎಂದು ಅಡ್ವಾಣಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT