ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರ್ಜರಿ ಗಳಿಕೆಯ ಅಲೆ ಮೇಲೆ...

ಪಂಚರಂಗಿ
Last Updated 10 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಕಳೆದ ಶುಕ್ರವಾರ ತೆರೆಕಂಡ ಎರಡು ಪರಭಾಷಾ ಚಿತ್ರಗಳು ಭರ್ಜರಿ ಕಲೆಕ್ಷನ್ ಮಾಡುತ್ತಿವೆ. ಜೂನಿಯರ್ ಎನ್‌ಟಿಆರ್ ಅಭಿನಯದ ತೆಲುಗು ಚಿತ್ರ `ಬಾದ್‌ಶಾ' ಬಿಡುಗಡೆಯಾದ ದಿನವೇ 13.5 ಕೋಟಿ ರೂಪಾಯಿ ಹಣ ಬಾಚಿದೆ. ಇನ್ನು ಡೇವಿಡ್ ಧವನ್ ನಿರ್ದೇಶನದ ಹಿಂದಿ ಚಿತ್ರ `ಚಷ್ಮೆ ಬದ್ದೂರ್' ಮೊದಲ ಎರಡು ದಿನದಲ್ಲಿ 11.45 ಕೋಟಿ ಹಣ ಗಳಿಸಿದೆ.

`ಊಸರವಳ್ಳಿ', `ಶಕ್ತಿ' ಮತ್ತು `ದಮ್ಮು' ಹೀಗೆ ಒಂದರ ಹಿಂದೆ ಒಂದರಂತೆ ಮೂರು ಫ್ಲಾಪ್ ಚಿತ್ರಗಳಲ್ಲಿ ನಟಿಸಿದ್ದ ಜೂನಿಯರ್ ಎನ್‌ಟಿಆರ್ `ಬಾದ್‌ಶಾ' ಚಿತ್ರ ಒಳ್ಳೆ ಬ್ರೇಕ್ ಕೊಟ್ಟಿದೆ. ಹಳೇ ಖದರ್‌ನಲ್ಲಿ ವಾಪಸಾಗಿರುವ ಜೂನಿಯರ್, `ಬಾದ್‌ಶಾ' ಚಿತ್ರದಲ್ಲಿ ಪ್ರೇಕ್ಷಕರಿಗೆ ಮೋಡಿ ಮಾಡಿದ್ದಾರೆ. 50 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಬಿಡುಗಡೆಯಾದ ದಿನವೇ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಏಕಕಾಲಕ್ಕೆ ವಿಶ್ವದಾದ್ಯಂತ ತೆರೆಕಂಡಿರುವ ಈ ಸಿನಿಮಾ ತುಂಬಿದ ಗೃಹದ ಪ್ರದರ್ಶನ ಕಾಣುತ್ತಿದೆ' ಎಂದಿದ್ದಾರೆ ಚಿತ್ರ ಮಾರುಕಟ್ಟೆ ವಿಶ್ಲೇಷಕ ತ್ರಿನಾಥ್. 

ಇನ್ನು ಡೇವಿಡ್ ನಿರ್ದೇಶನದ `ಚಷ್ಮೆ ಬದ್ದೂರ್' 1981ರಲ್ಲಿ ತೆರೆಕಂಡಿದ್ದ ಅದೇ ಹೆಸರಿನ ಹಿಂದಿ ಚಿತ್ರದ ಮರುಸೃಷ್ಟಿ. ಈ ಚಿತ್ರ ವಿಮರ್ಶಕರಿಂದ ಮೆಚ್ಚುಗೆ ಪಡೆದಿದ್ದಷ್ಟೇ ಅಲ್ಲದೆ ಭರ್ಜರಿ ಕಲೆಕ್ಷನ್ ಕೂಡ ಮಾಡುತ್ತಿದೆ.

“ಉತ್ತರಭಾರತ ಹಾಗೂ ಮುಂಬೈನಲ್ಲಿ `ಚಷ್ಮೆ ಬದ್ದೂರ್' ಗಳಿಕೆ ತುಂಬಾ ಚೆನ್ನಾಗಿದೆ. ಯುವಕರು, ವಯಸ್ಕರು ಎಲ್ಲರೂ ಚಿತ್ರವನ್ನು ಇಷ್ಟಪಟ್ಟು ನೋಡುತ್ತಿದ್ದಾರೆ” ಎಂದಿದ್ದಾರೆ ತ್ರಿನಾಥ್.

ಹದಿನೇಳು ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಹಾಸ್ಯಪ್ರಧಾನವಾದದ್ದು. ಅಲಿ ಜಾಫರ್, ತಾಪಸಿ ಪನ್ನು, ಸಿದ್ಧಾರ್ಥ, ರಿಷಿ ಕಪೂರ್, ಅನುಪಮ್ ಖೇರ್ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT