ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭವಿಷ್ಯನಿಧಿ ಪಿಂಚಣಿ ಪರಿಷ್ಕರಿಸಿ

Last Updated 3 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಭವಿಷ್ಯನಿಧಿ ಪಿಂಚಣಿ ಯೋಜನೆ 1995 ನೇ ನವೆಂಬರ್‌ನಲ್ಲಿ ಪ್ರಾರಂಭವಾಗಿದ್ದು ಅದನ್ನು ಇದುವರೆಗೂ ಪರಿಷ್ಕರಿಸಿಯೇ ಇಲ್ಲ. ಇದಾದ  ನಂತರ ಎರಡು ವೇತನ ಪರಿಷ್ಕರಣೆಯಾಗಿದ್ದರೂ  ಇದನ್ನು  ಮಾತ್ರ ಕೇಂದ್ರ ಸರ್ಕಾರ ಮರತೇಬಿಟ್ಟಂತಿದೆ.

ಈ ಪಿಂಚಣಿಯ ಗರಿಷ್ಠ  ಮೊತ್ತ  2000 ರೂಪಾಯಿಯನ್ನೂ ದಾಟಿಲ್ಲ. ನೌಕರರು ನಿವೃತ್ತಿಯಾದ ಮೇಲೆ  ಕಂಪೆನಿಯಿಂದ ಸವಲತ್ತುಗಳೂ ಇರುವುದಿಲ್ಲ. ಕೇಂದ್ರ  ಸರ್ಕಾರಿ  ಸ್ವಾಮ್ಯದ  ಕಂಪೆನಿಗಳೂ ಸೇರಿದಂತೆ  ಎಲ್ಲ ವರ್ಗದ ಇ ಪಿ ಎಫ್ ಪಿಂಚಣಿದಾರರದೂ ಇದೇ  ಕಥೆ.
 
ವಾಸ್ತವ ಪರಿಸ್ಥಿತಿ  ಹೀಗಿರುವಾಗ, ಕೇಂದ್ರ  ಸರ್ಕಾರ ಈ ಪಿಂಚಣಿಯನ್ನು ಪುನರ್‌ಪರಿಶೀಲಿಸಿ, ಈ ಯೋಜನೆಗಾಗಿ ಭವಿಷ್ಯ ನಿಧಿಯಲ್ಲಿ ಮೊದಲೇ ಹಣ ನೀಡಿದ ನೌಕರರ ಹಿತವನ್ನು ಕಾಯುವ ಬಗೆಗೆ ಗಮನಹರಿಸುವುದು ಅವಶ್ಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT